ಇತ್ತೀಚೆಗೆ ರಾಜ್ಯದಲ್ಲಿ ಹನಿಟ್ರ್ಯಾಪ್ ದಂಧೆಯ ಗ್ಯಾಂಗ್ ಸಕ್ರಿಯವಾಗಿದ್ದು, ಗ್ಯಾಂಗ್‌ನ ಸಂತ್ರಸ್ತೆಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಘಟನೆ ನಡೆದಿದೆ. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು, ಶ್ರೀಮಂತರೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಪರಿಚಯ ಮಾಡಿಕೊಂಡು ನಂತರ ಸಲುಗೆ ಬೆಳೆಸುತ್ತಾರೆ.ಅದಾದ ಬಳಿಕ ಮಂಚಕ್ಕೆ ಕರೆದು ವೀಡಿಯೋ ಮಾಡಲಾಗುತ್ತಿತ್ತು. ನಂತರ ಗ್ಯಾಂಗ್ ಅವರಿಂದ ಲಕ್ಷ, ಲಕ್ಷ ಹಣ ವಸೂಲಿ ಮಾಡುತ್ತಾರೆ. ಈ ವಿಚಾರವನ್ನು ಖುದ್ದು ಹನಿಟ್ರ‍್ಯಾಪ್ ಸಂತ್ರಸ್ತೆ ಇತ್ತೀಚೆಗೆ ಬಿಚ್ಚಿಟ್ಟಿದ್ದಾಳೆ.
ಸಂಘಟನೆ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹುಡುಗಿಯರ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗುತ್ತಿದೆ. ಹುಡುಗಿಯರ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಆಟವಾಡುತ್ತಿದ್ದಾರೆ. ಹಲವಾರು ಹುಡುಗಿಯರು, ಮಹಿಳೆಯರನ್ನಿಟ್ಟುಕೊಂಡು ಹನಿಟ್ರ‍್ಯಾಪ್ ನಡೆಸುತ್ತಿದ್ದು, ಇದರಿಂದಾಗಿ ಹತ್ತಾರು ಕುಟುಂಬಗಳು ಬಲಿಯಾಗಿವೆ.

ಆ ಗ್ಯಾಂಗ್ ಸದಸ್ಯರು ಬಲವಂತವಾಗಿ ಹನಿಟ್ರ‍್ಯಾಪ್ ಯುವತಿಯರ ಜೊತೆ ಅತ್ಯಾಚಾರ ನಡೆಸುತ್ತಿದ್ದಾರೆ. ಸದ್ಯ ಸಂತ್ರಸ್ಥೆಯಿಂದಲೇ ಗ್ಯಾಂಗ್ ವಿರುದ್ಧ ದೂರು ದಾಖಲಾಗಿದ್ದು, ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ಕಲಬುರ್ಗಿ ಜಿಲ್ಲೆಯ ರಾಜು ಲೆಂಗಟಿ, ಪ್ರಭು, ಶ್ರೀಕಾಂತ್ ರೆಡ್ಡಿ, ಮಂಜು ಭಂಡಾರಿ ಸೇರಿದಂತೆ 8 ಜನರ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
