ಪುತ್ತೂರು ತಾಲೂಕು, ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಶ್ರೀಮತಿ ಕೀರ್ತಿ ಅಖಿಲೇಶ್ ಎಂಬವರು ಪುತ್ತೂರು ಕೋರ್ಟ್ ರಸ್ತೆಯ SBI ಶಾಖೆಯಿಂದ ರೂ 2 ಕೋಟಿ ಸಾಲ ಮಾಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ವಕೀಲರ ಮುಖಾಂತರ ಲೀಗಲ್ ನೋಟೀಸ್ ಮಾಡಿದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ.
ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ದಿನಾಂಕ 25.09.2024 ರಂದು ಮಧ್ಯಾಹ್ನ ಬ್ರಾಂಚ್ ಮ್ಯಾನೇಜರ್ ಚೈತನ್ಯ ಹೆಚ್.ಸಿ ತನ್ನ ಸಹೋದ್ಯೋಗಿಗಳಾದ ಆಕಾಶ್ ಚಂದ್ರಬಾಬು ಮತ್ತು ಶ್ರೀಮತಿ ದಿವ್ಯಶ್ರೀರವರೊಂದಿಗೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜಿರ್‌ಪಾದೆಯಲ್ಲಿರುವ ಶ್ರೀಮತಿ ಕೀರ್ತಿ ಅಖಿಲೇಶ್ ರವರ ಮನೆಗೆ ಹೋದಾಗ ಮನೆಯಲ್ಲಿದ್ದ ಶ್ರೀಮತಿ ಅರುಣ್ ಕಿಶೋರ್ ರವರು ಪಿರ್ಯಾದುದಾರರನ್ನು ಮನೆ ಒಳಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಅಖಿಲೇಶ್ ರವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್ ರವರು ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ.
ಬಳಿಕ ಕೃಷ್ಣ ಕಿಶೋರ್ ರವರು ಕೂಡಾ ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ದಿನಾಂಕ 26.09.2024 ರಂದು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ,ಕ್ರ 109/2024, ಕಲಂ:-132, 127(2),351(2),r/w 3(5)ಬಿ.ಎನ್.ಎಸ್ ಮತ್ತು ಕಲಂ 27 ARMS Act ರಂತೆ ಪ್ರಕರಣ ದಾಖಲಾಗಿರುತ್ತದೆ.
