ಖೈರ್ಲಂಜಿಯ ಘನ-ಘೋರ ದಲಿತ ಹತ್ಯಾಕಾಂಡ.!

ರಾಷ್ಟ್ರೀಯ

29-09-20೦6 ರ ಅ ಕರಾಳ ದಿನ ತಮ್ಮ ಅಂತಿಮ ವಿಧಿ ಬರೆಯುವ ದಿನ ಎಂದು ಆ ಅಮಾಯಕ ಕುಟುಂಬದ ಗಮನಕ್ಕೆ ಬರಲೇ ಇಲ್ಲ.

✍️. ಪದರಂಗಿ

20೦6 ಸೆಪ್ಟೆಂಬರ್ 29 ಆ ದಿನ ಸಂಜೆ ಮಹಾರಾಷ್ಟ್ರದ ಬಂಡಾರ ಜಿಲ್ಲೆಯ ಮೊಹಾಲಿ ತಾಲೂಕಿನ ಖೈರ್ಲಂಜಿ ಗ್ರಾಮದಲ್ಲಿ ಅತೀ ಭೀಕರವಾದ ಮನುಷ್ಯತ್ವವೇ ಇಲ್ಲದ, ಕ್ರೂರ ಮೃಗೀಯ ಕಹಿ ಘಟನೆಯೊಂದು ನಡೆದೇ ಹೋಗುತ್ತದೆ.

​ಬಯ್ಯಲಾಲ್ ಎಂಬ ವಿದ್ಯಾವಂತ ದಲಿತ ಕುಟುಂಬದ ಸದಸ್ಯರ ಭೀಕರ ಹತ್ಯಾಕಾಂಡವೇ ನಡೆಯುತ್ತದೆ. ಆ ಕುಟುಂಬದ ಮುಖ್ಯಸ್ಥನೇ ಬಯ್ಯಲಾಲ್ ಎಂಬ ಹೆಸರಿನ ಕುಟುಂಬದ ಯಜಮಾನ. ಹೆಂಡತಿ ಸುರೇಖಾ ವಿದ್ಯಾವಂತೆ, ಬುದ್ಧಿವಂತೆಯಾಗಿದ್ದು, ಮನೆಯೊಡತಿಯಾದರೇ ಮೂವರು ಮಕ್ಕಳಾದ ರೋಷನ್, ಸುಧೀರ್ ಎಂಬ ಇಬ್ಬರು ಗಂಡು, ಪ್ರಿಯಾಂಕ ಎಂಬ ಹೆಣ್ಣು ಮಗಳೂ ಇರುವ ಐವರ ಸುಶಿಕ್ಷಿತವಾದ ಬಯ್ಯಲಾಲ್‌ ಕುಟುಂಬ.

​ದಿನಾಂಕ 29-09-20೦6 ರ ಅ ಕರಾಳ ದಿನ ತಮ್ಮ ಅಂತಿಮ ವಿಧಿ ಬರೆಯುವ ದಿನ ಎಂದು ಆ ಅಮಾಯಕ ಕುಟುಂಬದ ಗಮನಕ್ಕೆ ಬರಲೇ ಇಲ್ಲ. ಎಂದಿನಂತೆ ಅಂದು ಸುರೇಖಾ ಅಡುಗೆ ಮನೆಯಲ್ಲಿದ್ದರೆ, ರೋಷನ್, ಸುಧೀರ್, ಪ್ರಿಯಾಂಕ ಮನೆಯಲ್ಲಿ ತಮ್ಮ ಶಾಲಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಬಯ್ಯಲಾಲ್ ಹತ್ತಿರದಲ್ಲೇ ಇರುವ ತನ್ನ ತೋಟದ ಕೆಲಸದಲ್ಲಿ ತಲ್ಲೀನನಾಗಿದ್ದ. ಆದರೆ ಅವರುಗಳಿಗೆ ಗೊತ್ತಿರಲಿಲ್ಲ ಆ ದಿನ ಸಂಜೆ ನಮ್ಮ ಜೀವನದ ಕೊನೆಯ ಸಂಜೆಯಾಗಿರಬಹುದೆಂದು.!!

​ಯಾಕೆಂದರೆ ಅಂದು ಆ ಊರಿನ 50 ರಿಂದ 60 ರಷ್ಟು ಮಂದಿ ಅತೀ ಕ್ರೂರ ಮನಸ್ಸಿನ ಮೃಗೀಯ ಸವರ್ಣಿಯರ ಗುಂಪೊಂದು ಕಾಡು ಮೃಗಗಳಂತೆ ಆ ಚಿಕ್ಕ ಸಂಸಾರವನ್ನು ಮುಕ್ಕಿ, ಮುಕ್ಕಿ ತಿಂದವು. ಆ ಕ್ರೂರಿಗಳಲ್ಲಿ ಜಾತಿಯ ವಿಷಜ್ವಾಲೆ ತುಂಬಿ ತುಳುಕುತ್ತಿದ್ದವು. ಸವರ್ಣಿಯರ ದೌರ್ಜನ್ಯದ ಆಟ್ಟಹಾಸ ಕೇಕೆ ಹಾಕುತ್ತಿದ್ದವು. ಘನ-ಘೋರವಾದ,ಅಸಹ್ಯಕರ ಕ್ರೂರ, ರುದ್ರ ನರ್ತನ ಮಾಡಿದವು. ಅವತ್ತು ಅಲ್ಲಿ ನಡೆದದ್ದು ಮನುಷ್ಯತ್ವವನ್ನೇ ನಾಚಿಸುವಂತ ಘಟನೆ ನಡೆದೆ ಹೋಯಿತು. ಆ ಕುಟುಂಬದ ಮೇಲೆ ನಡೆಸಿದ ದಾಳಿ, ಕ್ರೌರ್ಯ ನಡೆಸಿದ ರೀತಿ ನೋಡಿದರೆ ಎಂತವರನ್ನು ಬೆಚ್ಚಿ ಬೀಳಿಸಿತು. ಮನುಷ್ಯತ್ವವೇ ಇಲ್ಲದ ರೀತಿಯ ಆಗಬಾರದ ಘಟನೆಗಳು ಆ ದಲಿತ ಕುಟುಂಬದ ಮೇಲೆ ನಡೆಯಿತು. ಇಲ್ಲಿ ತಾಂಡವಾಡಿರುವ ಹಿಂಸೆ, ಕ್ರೂರತೆ, ಅಶ್ಲೀಲತೆ, ಮೃಗೀಯತೆ ನೋಡಿದರೆ ರಕ್ತ ಕುದಿಯುತ್ತದೆ. ಚರಿತ್ರೆಯಲ್ಲಿ ದಲಿತರ ಮೇಲೆ ನಡೆದ ಹತ್ಯಾಕಾಂಡದಲ್ಲಿಯೇ ಅತೀ ಭೀಕರತೆಯ ಹತ್ಯಾಕಾಂಡವಾಗಿತ್ತು ಖೈರ್ಲಂಜಿ ಹತ್ಯಾಕಾಂಡ. ಈ ಘಟನೆಯ ಉದ್ದೇಶವೇ ದಲಿತ ಸಮುದಾಯಕ್ಕೆ ನೀಡುವ ಎಚ್ಚರಿಕೆಯೊಂದಿಗೆ, ಹಿಂಸೆ ಕೊಟ್ಟು ಕೇಕೇ ಹಾಕಿ ಸವರ್ಣೀಯರು ಆನಂದಿಸುವ ಕೂಟವಾಗಿತ್ತು.

​ಈ ಹತ್ಯಾಕಾಂಡ ನಡೆಯಲು ಕಾರಣವಾದರೂ ಏನು.? ಆ ದಲಿತ ಕುಟುಂಬ ಮಾಡಿದ ಮಹಾ ಪಾಪವಾದರೂ ಎಂತದ್ದು.?
​ಬಯ್ಯಲಾಲ್ ಹೆಂಡತಿ ಸುರೇಖಾ, ಮಕ್ಕಳಾದ ರೋಷನ್, ಸುಧೀರ್ ಮತ್ತು 17 ವರ್ಷ ಪ್ರಾಯದ ಪಿಯುಸಿ ಪ್ರಥಮ ದರ್ಜೆಯಲ್ಲಿ ಓದುತ್ತಿರುವ ಪ್ರಿಯಾಂಕ ಎಂಬ ಹೆಣ್ಣು ಮಗಳೊಂದಿಗಿರುವ ಸುಂದರ ಚಿಕ್ಕ ಸಂಸಾರವಾಗಿತ್ತು ಬಯ್ಯಲಾಲ್ ಕುಟುಂಬ. ಖೈರ್ಲಂಜಿ ಗ್ರಾಮದಲ್ಲಿ ಬಯ್ಯಲಾಲ್‌ರವರದ್ದು ಏಕೈಕ ದಲಿತ ಕುಟುಂಬ. ಬಯ್ಯಲಾಲ್ ಹೆಂಡತಿ ಸುರೇಖಾ ಕುಟುಂಬದ ಯಜಮಾನಿಯಾಗಿ ತನ್ನ ಕುಟುಂಬವನ್ನು ಅಚ್ಚುಕಟ್ಟಾಗಿ ಸುಸಂಕ್ಕ್ರತ ಕುಟುಂಬವಾಗಿ ಗಂಡನನ್ನು, ಮಕ್ಕಳನ್ನು ಒಂದು ಹಾದಿಯಲ್ಲಿ ಕೊಂಡು ಹೋಗುತ್ತಿದ್ದಳು. ಕಷ್ಟಪಟ್ಟು ದುಡಿದು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಎಲ್ಲರಂತೆ ಸಮಾಜದಲ್ಲಿ ನಾವಾಗಬೇಕು. ನನ್ನ ಮಕ್ಕಳ ಹಾಗೂ ನಮ್ಮ ಭವಿಷ್ಯ ರೂಪಿಸಬೇಕು. ಮುಂದಿನ ಸಮಾಜಕ್ಕೆ ಭವಿಷ್ಯದ ಮಕ್ಕಳಾಗಿ ರೂಪಿಸಬೇಕು. ಎಂಬ ನಿಯತ್ತಿನಿಂದ ಗಂಡ ಮತ್ತೆ ಮಕ್ಕಳನ್ನು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಬೆಳಸತೊಡಗಿದಳು. ಕಾರಣ ಅವಳು ವಿದ್ಯಾವಂತೆ, ಬುದ್ಧಿವಂತೆ, ಧೈರ್ಯವಂತೆಯಾಗಿದ್ದಳು. ಇದೇ ಅವಳು ಮಾಡಿರುವ ಅತೀ ಘೋರವಾದ ತಪ್ಪು, ಇದು ಅನ್ಯಾಯವಾಗಿದೆ ಈ ಕ್ರೂರ ಸವರ್ಣಿಯರ ಕಣ್ಣಿಗೆ.

​ಬಾಬಾ ಸಾಹೇಬ್‌ಅಂಬೇಡ್ಕರ್ ಆಕೆಯ ನೆಚ್ಚಿನ ಹೀರೋ ಆಗಿದ್ದರು. ಬಾಬಾ ಸಾಹೇಬರಂತೆ ಸುರೇಖಾಳ ಕುಟುಂಬವು ಬೌದ್ದ ಧರ್ಮಕ್ಕೆ ಮತಾಂತರಗೊಂಡಿತು. ಆಕೆಯ ಇಬ್ಬರು ಗಂಡು ಮಕ್ಕಳು ಕಾಲೇಜಿನಲ್ಲಿ ಕಲಿಯುತ್ತಿದ್ದರೆ, ಪುತ್ರಿ ಪ್ರಿಯಾಂಕ ಹೈಸ್ಕೂಲ್ ಶಿಕ್ಷಣ ಮುಗಿಸಿ ಪಿಯುಸಿ ಮೆಟ್ಟಲು ಹತ್ತಿದ್ದಳು. ಮಕ್ಕಳು ಓದಿನಲ್ಲೂ ಪ್ರತಿಭಾವಂತರಾಗಿದ್ದರು.

​ಸುರೇಖ ಹಾಗೂ ಪತಿ ಬಯ್ಯಲಾಲ್ ಖೈರ್ಲಂಜಿ ಗ್ರಾಮದಲ್ಲಿ ಒಂದು ಪುಟ್ಟ ಜಮೀನನ್ನು ಖರೀದಿಸಿದ್ದರು. ಇದೇ ನೋಡಿ ಆ ಸುಂದರ ಕುಟುಂಬ ಮಾಡಿದ ಬಹು ದೊಡ್ಡ ಅಪರಾಧ ಈ ಸವರ್ಣಿಯರ ಪಾಲಿಗೆ. ಆ ಜಮೀನು ತಾವು ಶ್ರೇಷ್ಟರಲ್ಲಿ ಶ್ರೇಷ್ಟರೆಂದು ಕರೆಸಿಕೊಳ್ಳುವ ಸವರ್ಣಿಯರ ಹೊಲಗಳ ಮಧ್ಯದಲ್ಲಿತ್ತು. ಆಕೆ ದಲಿತಳಾಗಿದ್ದರಿಂದ ಒಂದು ಉತ್ತಮ ಜೀವನಕ್ಕಾಗಿ ಹಂಬಲಿಸಲು ಆಕೆಗೆ ಹಕ್ಕು ಇರಲಿಲ್ಲ ಸವರ್ಣಿಯರ ಪ್ರಕಾರ. ತನ್ನ ಹುಲ್ಲು ಚಾವಡಿಯ ಮಣ್ಣಿನ ಮನೆಯನ್ನು ಇಟ್ಟಿಗೆಯ ಮನೆಯನ್ನಾಗಿ ಪರಿವರ್ತಿಸಿ, ವಿದ್ಯುತ್, ನೀರು ಸೌಲಭ್ಯ ಪಡೆಯಲು ಸವರ್ಣಿಯರು ಅಧಿಕಾರದಲ್ಲಿರುವ ಗ್ರಾಮ ಪಂಚಾಯತ್ ಪರವಾನಿಗೆಯನ್ನು ನೀಡಲಿಲ್ಲ. ಆಕೆಯ ಜಮೀನಿನ ನೀರಾವರಿಗಾಗಿ ಕಾಲುವೆಯಿಂದ ನೀರು ಹರಿಸಲು ಸವರ್ಣೀಯರ ಗುಂಪು ಸಮ್ಮತಿಸಲಿಲ್ಲ. ಬದಲಾಗಿ ಆಕೆಯ ಜಮೀನಿನ ನಡುವೆ ಸಾರ್ವಜನಿಕ ರಸ್ತೆಯೊಂದನ್ನು ನಿರ್ಮಿಸಲು ಸವರ್ಣಿಯರು ಯತ್ನಿಸುತ್ತಾರೆ. ಅದನ್ನು ಸುರೇಖಾ ಪ್ರತಿಭಟಿಸುತ್ತಾಳೆ. ಅದಕ್ಕೆ ಅವಳ ಹೊಲಗಳ ಮೇಲೆ ಎತ್ತಿನ ಗಾಡಿಗಳನ್ನು ಓಡಿಸಿ ಜಾನುವಾರುಗಳನ್ನು ಬಿಟ್ಟು ಬೆಳೆ ಕೃಷಿಯನ್ನು ನಾಶಪಡಿಸುತ್ತಾರೆ. ಅಟ್ಟಹಾಸ ಮೆರೆಯುತ್ತಾರೆ ಈ ಸವರ್ಣೀಯರ ಗುಂಪು. ಅದರೂ ದೃತಿಗೆಡದ ಸುರೇಖಾ ಹಿಂಜರಿಯಲಿಲ್ಲ. ಈ ಬಗ್ಗೆ ಪೊಲೀಸು ದೂರು ನೀಡುತ್ತಾಳೆ. ಪೊಲೀಸರು ಆಕೆಯ ದೂರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ.
ಹಲವು ತಿಂಗಳವರೆಗೆ ಸವರ್ಣೀಯರಿಂದ ಕಿರುಕುಳದ ಭೀತಿಯನ್ನು ಎದುರಿಸುತ್ತಾಳೆ. ಹಲವಾರು ತಿಂಗಳುಗಳ ಕಾಲ ಅ ಗ್ರಾಮದಲ್ಲಿ ಸವರ್ಣೀಯರ ಕಿರುಕುಳ, ದಬ್ಬಾಳಿಕೆ ಅದೇ ಪರಿಸ್ಥಿತಿಯಲ್ಲೂ ಮುಂದುವರಿಯಿತು. ಆದರೂ ಸುರೇಖಾ ಎಲ್ಲವನ್ನು ಮೆಟ್ಟಿ ಸವರ್ಣೀಯರ ವಿರುದ್ಧ ಒಂಟಿಯಾಗಿ ಹೋರಾಡುತ್ತಾಳೆ. ಆದರೆ ಸುರೇಖಾಳಿಗೆ ಎಚ್ಚರಿಕೆ ನೀಡಲು ಸವರ್ಣೀಯರು ಆಕೆಯ ಸಂಬಂಧಿಯೊಬ್ಬರ ಮೇಳೆ ದಾಳಿ ಮಾಡಿ ಆತನನ್ನು ಭೀಕರವಾಗಿ ಹತ್ಯೆ ಮಾಡುತ್ತಾರೆ. ಆದರೂ ದೃತಿಗೆಡದ ಸುರೇಖಾ ಸವರ್ಣೀಯರ ವಿರುದ್ಧ ಇನ್ನೊಂದು ದೂರು ನೀಡಿತ್ತಾಳೆ. ದೂರಿನ ಮೇಲೆ ದೂರು ನೀಡಿದ ನಂತರ ಕೊಲೆ ಆರೋಪಿಗಳನ್ನು ಕೊನೆಗೂ ಪೊಲೀಸರು ಬಂಧಿಸುತ್ತಾರೆ. ಆದರೆ ಆರೋಪಿಗಳು ತಕ್ಷಣವೇ ಜಾಮೀನು ಪಡೆದು ಬಂದೇ ಬಿಡುತ್ತಾರೆ.

ಅವರು ಬಿಡುಗಡೆ ಹೊಂದಿದ ಆ ದಿನವೇ 2006 ಸೆಪ್ಟೆಂಬರ್ 29. ಅಂದು ಸಂಜೆ 6:00 ಗಂಟೆ ಸಮಯಕ್ಕೆ ಸವರ್ಣಿಯರ ಮಹಿಳೆಯರು, ಗಂಡಸರು ಸೇರಿದಂತೆ ಸರಿ-ಸುಮಾರು 50 ರಿಂದ 60 ಮಂದಿ ಖೈರ್ಲಂಜಿ ಗ್ರಾಮದ ಸವರ್ಣೀಯರು ಜೀಪು, ಟ್ರಾಕ್ಟರ್‌ಗಳಲ್ಲಿ ತಂಡ ತಂಡೋಪವಾಗಿ ಆಗಮಿಸಿ, ಸುರೇಖಾಳ ಮನೆಯನ್ನು ಸುತ್ತುವರಿದು ಮುತ್ತಿಗೆ ಹಾಕುತ್ತಾರೆ. ಆಗ ನಡೆದದ್ದೇ ಅತೀ ಭೀಕರ, ಮನುಷ್ಯತ್ವವೇ ಕಳಕೊಂಡ ಕ್ರೂರ ಘಟನೆ. ಆ ಸಮಯಕ್ಕೆ ಸುರೇಖಾಳ ಪತಿ ಬಯ್ಯಲಾಲ್ ತನ್ನ ಹೊಲದಲ್ಲಿ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಸವರ್ಣೀಯರ ಅಟ್ಟಹಾಸ ಕೂಗು ತನ್ನ ಮನೆ ಮುಂದೆ ಕೂಗುವುದನ್ನು ಕೇಳಿಸಿಕೊಂಡು ಹೊಲದಿಂದ ಓಡೋಡಿ ಮನೆಯ ಸಮೀಪಕ್ಕೆ ಬಂದು ಪೊದೆಯ ಬಳಿ ಅವಿತುಕೊಂಡು ಅತ ಅಸಾಹಯಕನಾಗಿ ತನ್ನ ಕುಟುಂಬದ ಮೇಲೆ ಸವರ್ಣೀಯರ ದಾಳಿ ಮಾಡುವುದನ್ನು ಕಣ್ಣಾರೆ ಕಂಡು ಭಯ ಭೀತನಾಗಿ ಜೈಸ್ವಾಲ್ ಪಟ್ಟಣಕ್ಕೆ ಧಾವಿಸಿ, ಅಲ್ಲಿ ತನ್ನ ಕುಟುಂಬದ ಸಂಬಂಧಿಕರ ಮೂಲಕ ಪೊಲೀಸರಿಗೆ ಕರೆ ಮಾಡಿ ಘಟನೆಯ ಭೀಕರತೆಯ ಇಂಚಿಂಚನ್ನು ವಿವರಿಸಿ, ತನ್ನ ಕುಟುಂಬವನ್ನು ರಕ್ಷಿಸುವಂತೆ ಕಾನೂನು ಪಾಲಕರಲ್ಲಿ ಕಾಡಿ, ಬೇಡಿ ಬಿಕ್ಕಿ-ಬಿಕ್ಕಿ ಅತ್ತು ಮನವಿ ಮಾಡಿತ್ತಾನೆ. ಆದರೆ ಮನ ಕರಗದ ಕಲ್ಲು ಹೃದಯಿ ಪೊಲೀಸರು ಆತನ ಕುಟುಂಬದ ರಕ್ಷಣೆಗೆ ಬರಲೇ ಇಲ್ಲ.

​ಇತ್ತ ಗ್ರಾಮದಲ್ಲಿ ಸವರ್ಣೀಯರ ಗುಂಪು ಸುರೇಖಾ, ಮಗಳಾದ ಪ್ರಿಯಾಂಕ, ರೋಶನ್ ಮತ್ತು ಸುಧೀರ್‌ರವರನ್ನು ಮನೆಯಿಂದ ಹೊರಗೆ ಧರ-ಧರನೆ ಎಳೆದು ತಂದು ನಾಲ್ವರ ಬಟ್ಟೆಯನ್ನು ಬಿಚ್ಚಿ, ಕಿತ್ತೆಸೆದು ಸಂಪೂರ್ಣ ನಗ್ನಗೊಳಿಸಿತು. ಉದ್ರಿಕ್ತ ಸವರ್ಣೀಯರ ಗುಂಪು ನಾಲ್ವರನ್ನು ಅಟ್ಟಾಡಿಸಿ ಹೊಡೆಯಲು, ಬಡಿಯಲು ಪ್ರಾರಂಭಿಸುತ್ತದೆ. ಜೀವ ಉಳಿಸಿಕೊಳ್ಳಲು ಅ ಬಡ ಜೀವ ಎತ್ತ ಓಡಿದರೂ ಕೊಡಲಿ, ಮಚ್ಚು, ದೊಣ್ಣೆಯ ಏಟುಗಳು ಅಟ್ಟಾಡಿಸಿಕೊಂಡು ಬಂದು ಬೀಳುತ್ತಾ ಇತ್ತು. ಸವರ್ಣೀಯರ ಭೀಕರತೆ ಇಷ್ಟಕ್ಕೆ ನಿಲ್ಲದೆ, ಮಗ ಸುಧೀರ್‌ನನ್ನು ತನ್ನ ತಾಯಿ ಸುರೇಖಾಳೊಂದಿಗೆ, ರೋಶನ್‌ನನ್ನು ತನ್ನ ಸಹೋದರಿ ಪ್ರ‍್ರಿಯಾಂಕಾಳೊಂದಿಗೆ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಈ ಕ್ರೂರಿ ಸವರ್ಣೀಯರ ಗುಂಫು ಒತ್ತಾಯಿಸುತ್ತದೆ. ಇದಕ್ಕೆ ಅ ಬಡ ದಲಿತ ಕುಟುಂಬ ನಿರಾಕರಿಸಿದಕ್ಕೆ ಅವರ ಮರ್ಮಾಂಗಕ್ಕೆ ಬಲವಾದ ಏಟುಗಳನ್ನು ನೀಡುತ್ತದೆ ಕ್ರೂರಿ ಸವರ್ಣೀಯರ ಗುಂಪು. ಮುಗ್ದ ಬಾಲೆ ಪ್ರಿಯಾಂಕಾಳನ್ನು ಬೆತ್ತಲಗೊಳಿಸಿದ ಸವರ್ಣೀಯರ ಗುಂಪು ಅವಳ ಸ್ತನಗಳಿಗೆ ಮಚ್ಚಿನಿಂದ ಏಟು ನೀಡಿ, ಸ್ತನಗಳನ್ನು ತುಂಡು-ತುಂಡಾಗಿ ಕತ್ತರಿಸಿ ಹಾಕುತ್ತದೆ. ಕೈಯಲ್ಲಿ ದೊಣ್ಣೆ ಹಿಡಿದು ಕೊಂಡು ಓಡೋಡಿ ಬಂದ ಸವರ್ಣೀಯರ ಯುವಕನೊಬ್ಬ ರಭಸವಾಗಿ ಅವಳ ಗುಪ್ತಾಂಗಕ್ಕೆ ದೊಣ್ಣೆಯನ್ನು ತುರುಕಿ ಬಿಡುತ್ತಾನೆ. ಪ್ರಜ್ಞೆ ತಪ್ಪಿ ಅಂಗಾತವಾಗಿ ನೆಲದ ಮೇಲೆ ಬಿದ್ದ ಆ ಮುಗ್ದೆ ಬಾಲೆ ಪ್ರಿಯಾಂಕಾಳ ಎರಡು ಕಾಲುಗಳನ್ನು ಮೇಲೆತ್ತಿ ವಿರುದ್ದ ದಿಕ್ಕಿಗೆ ಎಳೆದು ದೇಹವನ್ನು ಸೀಳಿ ಬಿಟ್ಟತು ಕ್ರೂರಿ ಸವರ್ಣೀಯರ ಗುಂಪು. ಅದಕ್ಕೂ ಮೊದಲು ಆಕೆಯನ್ನು ಸವರ್ಣೀಯರ ಗುಂಪಿನ ಗಂಡಸರು ಬಹಿರಂಗವಾಗಿಯೇ ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ. ದುರಂತ ಅಂದರೆ ಇಷ್ಟೊಂದು ದೊಡ್ಡ ಮಟ್ಟದ ಭೀಕರ ಹತ್ಯಾಕಾಂಡವನ್ನು ಅಲ್ಲಿ ನೆರೆದಿದ್ದ ಸವರ್ಣೀಯರ ಹೆಂಗಸರು ಬೆಂಬಲಿಸುತ್ತಾ, ಗಂಡಸರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲದೆ ಚಪ್ಪಾಳೆ ತಟ್ಟುತ್ತಾ,ಕೇಕೇ ಹಾಕುತ್ತಾ ವಿಕೃತ ಸವರ್ಣೀಯರ ಗಂಡಸರನ್ನೇ ಮತ್ತಷ್ಟು ಹುರಿದುಂಬಿಸುತ್ತಿದ್ದರು. ಅಂತಿಮವಾಗಿ ಸುರೇಖಾಳನ್ನು ಅವಳ ಮೂರು ಮಕ್ಕಳ ಕಣ್ಣೆದುರೇ ಅತ್ಯಾಚಾರ ಮಾಡಿದ ಗುಂಪು ಆಕೆಯ ಜನನಾಂಗವನ್ನು ಕತ್ತರಿಸಿ ತುಂಡು-ತುಂಡು ಮಾಡಿ ಬಿಸಾಕುತ್ತಾರೆ. ತರುವಾಯ ಈ ಕುಟುಂಬದ ನಾಲ್ವರನ್ನು ಬರ್ಭರವಾಗಿ ಕೊಚ್ಚಿ ಹಾಕಿಲಾಯಿತು. ರಕ್ತಸಿಕ್ತವಾಗಿದ್ದ ಆ ಶವಗಳನ್ನು ಎತ್ತಿನ ಬಂಡಿಯಲ್ಲಿ ಕಟ್ಟಿ ಊರಿನ ತುಂಬಾ ಮೆರವಣಿಗೆ ಮಾಡಿದ ಸವರ್ಣೀಯರ ಗುಂಪು ಅಂತಿಮವಾಗಿ ಶವಗಳನ್ನು ಸಮೀಪದ ಕಾಲುವೆ ಬಳಿ ಎಸೆದರು. ತನ್ಮೂಲಕ ದಲಿತರ ದೌರ್ಜನ್ಯದ ರಕ್ತಸಿಕ್ತ ಪುಟ ಇತಿಹಾಸವಾಗುತ್ತದೆ.

​ಈ ಅಮಾನುಷ ಹತ್ಯಾಕಾಂಡದಲ್ಲಿ ಅ ಹಳ್ಳಿಯ ಸವರ್ಣೀಯರ ಎಲ್ಲಾ 15 ಕುಟುಂಬದ ಜನರು ಹೆಂಗಸರ ಸಮೇತ ಭಾಗವಹಿಸಿದ್ದರು. ಆದರೆ ಮಹಾರಾಷ್ಟ್ರದ ಕೆಲವು ಮಾಧ್ಯಮಗಳು ಮಾತ್ರ ಈ ಘನಘೋರ ಅಮಾನವೀಯ ಕೃತ್ಯವನ್ನು ಒಂದೆರೆಡು ತಿಂಗಳ ಕಾಲ ವರದಿ ಮಾಡಲೇ ಇಲ್ಲ. ಈ ಪ್ರಕರಣದ ಕುರಿತು ಮುಂಬೈ ಹೈಕೋರ್ಟ್ ತೀರ್ಪು ಕೂಡಾ ಮಧ್ಯಮಗಳ ಉದಾಸೀನಕ್ಕೆ ಅನುಗುಣವಾಯಿತು. ಖೈರ್ಲಂಜಿಯ ಅ ದಲಿತ ಕುಟುಂಬವನ್ನು ರಾಜ್ಯ ಹೈಕೋರ್ಟ್ ಪ್ರಜೆಗಳೆಂದು ಪರಿಗಣಿಸಲಿಲ್ಲ.! ಮನುಷ್ಯರೆಂದು ಭಾವಿಸಲಿಲ್ಲ.! ಬಯ್ಯಲಾಲ್ ಅವರ ಕುಟುಂಬದ ಮೇಲೆ ನಡೆದ ಹಿಂಸೆ, ದಲಿತರ ಮೇಲೆ ನಡೆದ ಅತ್ಯಾಚಾರವೆಂದು ಪರಿಗಣಿಸಲು ನ್ಯಾಯಾಲಯ ಕೂಡಾ ನಿರಾಕರಿಸಿತು. ಬಯ್ಯಲಾಲ್ ಕುಟುಂಬ ದಲಿತರಾದರೂ ಕುಟುಂಬದ ಎಲ್ಲಾ ಸದಸ್ಯರು ಶಿಕ್ಷಣ ಪಡೆದು ಸುಶಿಕ್ಷಿತರಾಗಿದ್ದರು. ಕಾಲೇಜು ಮೆಟ್ಟಿಲು ಹತ್ತಿದ್ದರು. ಖೈರ್ಲಂಜಿಯ ಸವರ್ಣೀಯರ ಪಿತ್ತ ನೆತ್ತಿಗೇರಲು ಇದುವೆ ಮುಖ್ಯ ಕಾರಣವಾಗಿತ್ತು.

​ಮೊದಲಿಗೆ ಮಾಧ್ಯಮಗಳು ಇದೊಂದು ಮರ್ಯಾದೆ ಹತ್ಯೆ ಎಂಬಂತೆ ವರದಿ ಮಾಡಿತು. ಸುರೇಖಾಳು ತನ್ನ ಬಂಧು ಒಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ಗ್ರಾಮಸ್ಥರು ಆಕೆಯ ಬಗ್ಗೆ ಕುಪಿತರಾಗಿದ್ದರು ಎಂದು ಮಹಾರಾಷ್ಟ್ರದ ಸುದ್ದಿ ಮಾಧ್ಯಮಗಳಲ್ಲಿ ಹಸಿ-ಹಸಿ ಸುಳ್ಳುಗಳನ್ನೇ ತೇಲಿ ಬಿಡಲಾಯಿತು. ದಲಿತ ಸಂಘ ಸಂಸ್ಥೆಗಳ ಸಂಘಟನೆಗಳು, ಈ ಹತ್ಯಾಕಾಂಡದ ಬಗ್ಗೆ ಸಾಮೂಹಿಕ ಪ್ರತಿಭಟನೆಗಳು ನಡೆಸಿದ ಪರಿಣಾಮ ಮಹಾರಾಷ್ಟ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತು. ಈ ಭೀಕರ ಹತ್ಯಾಕಾಂಡದ ಕುರಿತು ಸಾಕ್ಷಾಧಾರಗಳನ್ನು ಹೇಗೆ ತಿಳಿಸಲಾಯಿತು ಎಂಬ ಬಗ್ಗೆ ನಾಗರಿಕ ಸತ್ಯ ಶೋಧನಾ ಸಂಸ್ಥೆಗಳು ವರದಿ ಮಾಡಿತು. ಕೆಳ ನ್ಯಾಯಾಲಯವು ಈ ಪ್ರಕರಣವನ್ನು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಗಣಿಸಲು ನಿರಾಕರಿಸಿತು. ಖೈರ್ಲಂಜಿಯ ಹತ್ಯಾಕಾಂಡವು ಈ ಸೇಡಿನ ಹಂಬಲದಿಂದ ನಡೆದ ಅಪರಾಧವಾಗಿದ್ದು, ಈ ಕೊಲೆ ಕೃತ್ಯದ ಹಿಂದೆ ಜಾತಿ ದೃಷ್ಟಿ ಕೋನವಿರಲಿಲ್ಲವೆಂದು ನ್ಯಾಯಾಧೀಶರು ನಿರ್ಧರಿಸಿದ್ದರು. ಇದರಿಂದಾಗಿ ಉನ್ನತ ನ್ಯಾಯಾಲಯಗಳಲ್ಲಿ ಪ್ರಕರಣದ ಅಪರಾದಿಗಳು ದೋಷ ಮುಕ್ತಗೊಂಡರೆ ಇನ್ನೂ ಕೆಲವರ ಶಿಕ್ಷೆಯ ಪ್ರಮಾಣ ಅ ಘಟನೆಯ ಕ್ರೂರತೆಗೆ ಹೋಲಿಸಿದಾಗ ತೀರಾ ಕಡಿಮೆಯಾಯಿತು. ವ್ಯವಸ್ಥಿತ ಸಂಚಿನ ಪಿತೂರಿಯ ಭಾಗವಾಗಿ ನಡೆದ ಖೈರ್ಲಂಜಿಯ ಹತ್ಯಾಕಾಂಡವು ಘನ ಘೋರ, ಭೀಕರತೆಯ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ, ಪ್ರಮುಖ ಆರೋಪಿ ಬಿಜೆಪಿಯ ಮುಖಂಡ ಬಾಸ್ಕರ್ ಕಾವಡೆ ಕೂಡಾ ಧೋಷ ಮುಕ್ತನಾದ. ಇನ್ನು ಈತ ಸಂಘ ಪರಿವಾರದ ಸದಸ್ಯನೆಂದು ಪ್ರತ್ಯೇಕವಾಗಿ ಹೇಳಬೇಕೆಂದಿಲ್ಲ. ಭಾರತದಲ್ಲಿ ದಲಿತರ ಮೇಲಾಗುವ ಪ್ರಕರಣಗಳು ಇದೇನು ಹೊಸತೇನಲ್ಲ. ಅಂತ್ಯವು ಅಲ್ಲ. ಇಂತಹ ಪ್ರಕರಣಗಳೂ ಕೂಡಾ ಮೊದಲನೆಯದು ಅಲ್ಲವೇ.. ಅಲ್ಲ. “ಹಿಂದುಗಳು ನಾವೆಲ್ಲಾ ಒಂದು” ಎಂದು ಪುಂಗಿ ಊದುವ ಸವರ್ಣೀಯರ ಮೋಸದ ಬಲೆಗೆ ದಲಿತರು, ಮೂಲ ನಿವಾಸಿಗಳು, ಕೆಲ ವರ್ಗದವರು ಬೀಳುತ್ತಾ ಇರುತ್ತಾರೆ, ಇದ್ದಾರೆ. ಇವರ ಮನಸ್ಸಿನ ಕ್ರೂರತೆಯನ್ನು ಅರಿವಿದ್ದರೂ ಇವರ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಆದರು ಇನ್ನೂ ಅರ್ಥವಾಗುತ್ತಿಲ್ಲ ಸವರ್ಣೀಯರ ಮೋಸದ ತಂತ್ರ ಮತ್ತು ಕುತಂತ್ರ. !!