ರಾಜ್ಯದಲ್ಲಿ 215 ಬಾಲ್ಯವಿವಾಹ ಪ್ರಕರಣಗಳು; ದೇಶದಲ್ಲಿ ಕರ್ನಾಟಕವೇ ನಂಬರ್ ಒನ್.!

ರಾಜ್ಯ

ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ ಕಾನೂನು ಚಾಲ್ತಿಯಲ್ಲಿದ್ದರೂ 2022 ರಲ್ಲಿ ಒಟ್ಟಾರೆ ಸಾವಿರಕ್ಕೂ ಅಧಿಕ ಬಾಲ್ಯ ವಿವಾಹ ಪ್ರಕರಣಗಳು ಜರುಗಿವೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ ಸಿಪಿಆರ್) ವರದಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಅಂಕಿಅಂಶಗಳ ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಬಾಲ್ಯ ವಿವಾಹ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಒಟ್ಟು 215 ಬಾಲ್ಯ ವಿವಾಹಗಳು ನಡೆದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೇ ನಂಬರ್ ಒನ್ ಸ್ಥಾನದಲ್ಲಿದೆ.

ಭಾರತದಲ್ಲಿ ಬಾಲ್ಯ ವಿವಾಹ ನಿಷೇಧ 2006 ರ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ಆದಾಗ್ಯೂ 1002 ಬಾಲ್ಯವಿವಾಹಗಳು ನಡೆದಿದ್ದು ಕರ್ನಾಟಕದಲ್ಲಿ 215, ಅಸ್ಸಾಂನಲ್ಲಿ 163, ತಮಿಳುನಾಡಿನಲ್ಲಿ 155, ಪಶ್ಚಿಮ ಬಂಗಾಳದಲ್ಲಿ 121, ಮಹಾರಾಷ್ಟ್ರದಲ್ಲಿ 99 ಬಾಲ್ಯ ವಿವಾಹ ಪ್ರಕರಣಗಳು ನಡೆದಿವೆ. ದೆಹಲಿ ಕೊನೆಯ ಸ್ಥಾನ ಪಡೆದಿದೆ.

ಗಂಡಿಗೆ ಮದುವೆ ಪ್ರಾಯ 21, ಹೆಣ್ಣಿಗೆ 18 ವರ್ಷ ವಾಗಿರಬೇಕೆಂದು ಸರಕಾರ ಕಾನೂನು ತಂದಿದೆ. ಈ ನಡುವೆ ಗಂಡು- ಹೆಣ್ಣು 19-15 ರ ಪ್ರಾಯದಲ್ಲೇ ಮದುವೆ ಯಾಗುವ ಪ್ರಕರಣಗಳು ಹೆಚ್ಚಾಗಿದೆ ಎಂದು ಎನ್ ಪಿಸಿಆರ್ ಕಳವಳ ವ್ಯಕ್ತಪಡಿಸಿದೆ.