ಅಂಗಳದಲ್ಲಿ ಆಟವಾಡುತ್ತಿದ್ದಾಗ ಟೆಂಪೋ ಚಲಿಸಿ ಮಗು ಮೃತ್ಯು. ಬಂಟ್ವಾಳದ ಲೊರೆಟ್ಟೋಪದವಿನಲ್ಲಿ ನಡೆದ ದುರ್ಘಟನೆ.

ಕರಾವಳಿ

ಫರಂಗಿಪೇಟೆ 10ನೇ ಮೈಲಿಗಲ್ಲು ನಿವಾಸಿ ಅಶಿಕಾ (3) ಮೃತ ಪುಟಾಣಿ. ದಿ.ಉನೈಸ್ ಅವರ ಪುತ್ರಿ ಲೊರೆಟ್ಟೋಪದವಿನ ಅಜ್ಜಿ ಮನೆಗೆ ಹೋಗಿದ್ದ ಸಂದರ್ಭ ಇತರ ಮಕ್ಕಳ ಜೊತೆ ಆಟವಾಡುತ್ತಿತ್ತು.

ಮನೆ ಮುಂದೆ ನಿಲ್ಲಿಸಿದ್ದ ಟೆಂಪೋಗೆ ಹತ್ತಿದ್ದ ಇತರ ಮಕ್ಕಳು ಆಟವಾಡುತ್ತಾ ಚಾಲಕನಂತೆ ಕ್ಲಚ್ ತುಳಿದು ಗೇರ್ ಲಿವರ್ ಎಳೆದಿದ್ದಾರೆ. ತಕ್ಷಣವೇ ಮುಂದಕ್ಕೆ ಚಲಿಸಿದ ಟೆಂಪೋ ಅಂಗಳದಲ್ಲಿದ್ದ ಪುಟಾಣಿ ಅಶಿಕಾಳ ಮೇಲೆ ಹರಿದಿದೆ. ಪರಿಣಾಮ ಗಾಯಾಳು ಅಶಿಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ. ನಿಲ್ಲಿಸಿದ್ದ ಟೆಂಪೊದ ಚಕ್ರಕ್ಕೆ ಕಲ್ಲು ಇಟ್ಟಿರದ ಕಾರಣ ಅಮಾಯಕ ಪುಟಾಣಿಯ ಪ್ರಾಣ ಹೋಗುವಂತಾಗಿದೆ.