ಸ್ಪೆಷಲ್ ನ್ಯೂಸ್ ವರದಿಯ ಇಂಪ್ಯಾಕ್ಟ್.
ವಿಟ್ಲದ ನಲಿ-ಕಲಿ ಶಾಲಾ ವಿದ್ಯಾರ್ಥಿಗಳ ಪ್ರಾಣ ಬಲಿ ಪಡೆಯಲು ಇಂದಿರಾ ಕ್ಯಾಂಟೀನ್ ಕಾಮಗಾರಿ ಪಡೆದ ಗುತ್ತಿಗೆದಾರ ಮತ್ತು ಅಧಿಕಾರಿಗಳು ಕಾರಣರಾಗಿದ್ದರು. ಇಲ್ಲಿನ ನಲಿ-ಕಲಿ ಶಾಲಾ ವಠಾರದಲ್ಲೇ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಗುತ್ತಿಗೆದಾರ ಮತ್ತು ಇಂಜಿನಿಯರುಗಳ ಬೇಜವಾಬ್ದಾರಿ ಎದ್ದು ಕಂಡಿತ್ತು.

ಶಾಲಾ ಪುಟಾಣಿಗಳು ಓಡಾಡುತ್ತಿರುವ ಪರಿಸರದಲ್ಲೇ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಅನುಸರಿಸದೇ ಶಾಲಾ ಆವರಣದಲ್ಲಿ ತೋಡಿದ್ದ ಇಂದಿರಾ ಕ್ಯಾಂಟೀನ್ ತ್ಯಾಜ್ಯ ಶೇಖರಣಾ ಗುಂಡಿ ಮುಚ್ಚದೇ ನಿರ್ಲಕ್ಷ್ಯ ತೋರಿದ್ದರು.

ಪ್ರತಿನಿತ್ಯ ಶಿಕ್ಷಕರಿಗೆ ಪಾಠ ಮಾಡುವ ಬದಲು ಪುಟಾಣಿಗಳ ನೋಡಿಕೊಳ್ಳುವುದೇ ಶಿಕ್ಷಕರಿಗೆ ಸವಾಲಾಗಿತ್ತು. ಗುತ್ತಿಗೆದಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಎಚ್ಚರಿಸುವ ಹಿತದೃಷ್ಟಿಯಿಂದ ಸ್ಪೆಷಲ್ ನ್ಯೂಸ್ ವಿವರವಾದ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಗಂಟೆಗಳಲ್ಲೇ ವಿಟ್ಲ ಪ.ಪಂ.ಸದಸ್ಯ ಮಹಮ್ಮದ್ ಅಶ್ರಫ್ ಮೇಗಿನಪೇಟೆ ತಕ್ಷಣವೇ ಬೆಂಗಳೂರಿನ ಕಛೇರಿಗೆ ಮಾಹಿತಿ ನೀಡಿ ಅಪೂರ್ಣಗೊಂಡ ಕೆಲಸವನ್ನು ಪೂರ್ತಿಗೊಳಿಸಿದ್ದಾರೆ.
