ಅಲಂತಾಯ ಗ್ರಾಮದ ಪೆರ್ಲ ನಿವಾಸಿ ಪ್ರಗತಿಪರ ಕೃಷಿಕ ರಮೇಶ ಗೌಡ(51)ಕೊಲೆಯಾದ ದುರ್ಧೈವಿ. ಹತ್ತಿರದ ಸಂಬಂಧಿಕನಾದ ಹರೀಶ್ ಕೊಲೆಗೈದ ಪಾಪಿ ಇಂದು ರಾತ್ರಿ 7 ಗಂಟೆಯ ಸುಮಾರಿಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಮೇಶ ಗೌಡ ಮತ್ತು ಸಂಬಂಧಿ ಹರೀಶ್ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು ಮುಂದುವರಿದ ಭಾಗವಾಗಿ ಹರೀಶ್ ಕತ್ತಿಯಿಂದ ಕಡಿದು ಹತ್ಯೆಗೈದನೆಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಾಗಿದೆ.

