ಉಪ ಚುನಾವಣೆ: ಆಂತರಿಕ ಸಮೀಕ್ಷೆಯ ವರದಿ, ಗುಪ್ತಚರ ಸಮೀಕ್ಷೆಯ ವರದಿ ನೋಡಿ ಬೆಚ್ಚಿಬಿದ್ದ ಕಾಂಗ್ರೆಸ್ ಪಕ್ಷದ ನಾಯಕರು

ರಾಜ್ಯ

ಉಪ ಚುನಾವಣಾ ಕಣ ರಂಗೇರಿದ್ದು. ಚುನಾವಣೆಗೆ ಮುನ್ನ ಕಾಂಗ್ರೆಸ್​​ ಪಕ್ಷದ ಆಂತರಿಕ ಸಮೀಕ್ಷೆಯ ವರದಿ ಮತ್ತು ಗುಪ್ತಚರ ಸಮೀಕ್ಷೆಯ ವರದಿ ಕಾಂಗ್ರೆಸ್​ ಪಕ್ಷದ ನಾಯಕರ ಕೈ ಸೇರಿದ್ದು. ವರದಿಯನ್ನು ನೋಡಿದ ಸಿಎಂ ಮತ್ತು ಡಿಸಿಎಂ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಯ ಆಂತರಿಕ ವರದಿಯಲ್ಲಿ ಕಾಂಗ್ರೆಸ್​​ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು. ಒಂದು ಕ್ಷೇತ್ರದಲ್ಲಿ ಸೋಲುತ್ತದೆ ಎಂದು ವರದಿಯನ್ನು ನೀಡಲಾಗಿದೆ.

ಶಿಗ್ಗಾಂವ್​​ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ರಾಜ್ಯ ಕಾಂಗ್ರೆಸ್​​ ನಾಯಕರು ಸೋತಿದ್ದು. ಕಾಂಗ್ರೆಸ್​​ ಅಭ್ಯರ್ಥಿ ಸೋಲಲಿದ್ದಾರೆ ಎಂಬ ಮಾಹಿತಿ ಕಾಂಗ್ರೆಸ್ ನಾಯಕರಿಗೆ ದೊರೆತಿದೆ. ಮೂರು ಕ್ಷೇತ್ರದ ಪೈಕಿ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್​ ವಶಪಡಿಸಿಕೊಳ್ಳಲಿದೆ ಎಂದು ಮಾಹಿತಿ ದೊರೆತಿದ್ದು. ಚನ್ನಪಟ್ಟಣದಲ್ಲಿ ಈ ಬಾರಿ ಸಿಪಿ ಯೋಗೇಶ್ವರ್​ ಗೆಲುವು ಸಾಧಿಸಲಿದ್ದಾರೆಂದು ಸಮೀಕ್ಷೆಯಲ್ಲಿ ವರದಿ ನೀಡಿದ್ದು. ಜಿದ್ದಾಜಿದ್ದಿನ ರಣಾಂಗಣದಲ್ಲಿ ನಿಖಿಲ್​ ವಿರುದ್ದ ಸಿಪಿವೈ ಸುಮಾರು 6 ರಿಂದ 7 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇದೇ ರೀತಿ ಸಂಡೂರಿನಲ್ಲಿಯು ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದ್ದು. ಈ ಹಿಂದೆ ತುಕಾರಂ ಅವರಿಗೆ ಇದ್ದ ಬೆಂಬಲ ಈ ಬಾರಿ ಅವರ ಪತ್ನಿಗೆ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ ಎನ್ನಲಾಗಿದೆ. ಆದರೂ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ವಿರುದ್ದ ಕಾಂಗ್ರೆಸ್​​ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಸುಮಾರು 2ರಿಂದ 3 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿದೆ.

ವೈಯಕ್ತಿಕವಾಗಿ ಯಾವುದೇ ವರ್ಚಸ್ಸನ್ನು ಹೊಂದಿರದ ಅನ್ನಪೂರ್ಣ ತುಕಾರಂ ಮಾಜಿ ಶಾಸಕ ತುಕಾರಂ ಮತ್ತು ಸಂತೋಶ್​​ ಲಾಡ್​​ ಪ್ರಭಾವದಿಂದಲೇ ಗೆಲ್ಲಬೇಕು ಎಂಬ ವಾತವರಣ ಸೃಷ್ಟಿಯಾಗಿದೆ. ಬಿಜೆಪಿ ಅಭ್ಯರ್ಥಿಗೆ ಜನಾರ್ಧನ ರೆಡ್ಡಿ ವಾಪಸಾತಿ ಹೆಚ್ಚು ಬಲ ನೀಡಿದ್ದರೆ ಮತ್ತೊಂದೆಡೆ ಜೆಡಿಎಸ್​​ ಮತಗಳು ಕೈಕೊಡಲಿದೆ ಎಂದು ವಿಶ್ಲೇಷಿಸಿದ್ದಾರೆ. ಇವೆಲ್ಲದರಿಂದಾಗಿ ಸಂಡೂರಿನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅನ್ನಪೂರ್ಣ ತುಕಾರಂ ಗೆಲ್ಲಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಕಾಂಗ್ರೆಸ್​​ ಆಂತರಿಕ ಸಮೀಕ್ಷೆಯ ವರದಿಯು ಕೈಸೇರುತ್ತಿದ್ದಂತೆ ಸಿಎಂ, ಡಿಸಿಎಂ ಸೇರಿದಂತೆ ಕೆಪಿಸಿಸಿ ನಾಯಕರು ಅಲರ್ಟ್​ ಆಗಿದ್ದು. ಮೂರು ಕ್ಷೇತ್ರಗಳಲ್ಲಿ ಕಾಲಿಗ ಚಕ್ರ ಕಟ್ಟಿಕೊಂಡು ಒಡಾಡುತ್ತಿದ್ದಾರೆ. ಹೇಗಾದರು ಮಾಡಿ ಸಂಡೂರು ಮತ್ತು ಚನ್ನಪಟ್ಟಣ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ರಾಜ್ಯ ಕಾಂಗ್ರೆಸ್​ಗೆ ಉಪ ಚುನಾವಣೆ ಪ್ರತಿಷ್ಟೆಯ ಕಣವಾಗಿ ಬದಲಾಗಿದೆ.