ಉದ್ಯಮಿ ಸಾವಿನ ಸುತ್ತ ಸಂಶಯದ ಹುತ್ತ.
ವಿಟ್ಲದ ಸ್ವಾಮಿ ಹೋಲೋ ಬ್ಲಾಕ್ & ಇಂಟರ್ ಲಾಕ್ ಕಂಪನಿಯ ಮಾಲಿಕ ನಿಡ್ಯ ದಾಮೋದರ ಪೂಜಾರಿ(59) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ವಿಟ್ಲ-ಕುಂಡಡ್ಕ ರಸ್ತೆಯ ಪರನೀರು ಎಂಬಲ್ಲಿ ಹೋಲೋ ಬ್ಲಾಕ್ ಕಂಪನಿ ನಡೆಸುತ್ತಿದ್ದ ದಾಮೋದರ ಪೂಜಾರಿಗೆ ಮೇಲ್ನೋಟಕ್ಕೆ ಯಾವುದೇ ರೀತಿಯಲ್ಲೂ ಆರ್ಥಿಕ ಸಂಕಷ್ಟಗಳಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಾ ಎಲ್ಲರೊಂದಿಗೂ ಸಹಬಾಳ್ವೆಯಿಂದ ಕೊಡುಗೈ ದಾನಿಯಾಗಿದ್ದ ದಾಮೋದರ ಪೂಜಾರಿಯವರ ಸಾವಿನ ಸುತ್ತ ಹಲವಾರು ಸಂಶಯಗಳು ವ್ಯಕ್ತವಾಗಿವೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸರ ತನಿಖೆಯಿಂದ ಸಾವಿನ ಹಿನ್ನೆಲೆ ಬಯಲಾಗಬೇಕೆಂದು ಸ್ನೇಹಿತರು ಮತ್ತು ಸಂಬಂಧಿಕರು ಒತ್ತಾಯಿಸಿದ್ದಾರೆ.
