ಸಲಹಾ ಸಮಿತಿ ಅಧ್ಯಕ್ಷರಾಗಿ ಅಶ್ರಫ್ ಶಾ, ಗೌ.ಅ ನ್ಯಾಯವಾದಿ ಇಬ್ರಾಹಿಂ ಖಲೀಲ್, ಅಧ್ಯಕ್ಷರಾಗಿ ಅಮರ್ ಕಲ್ಲುರಾಯ, ಪ್ರ. ಕಾರ್ಯದರ್ಶಿ ಇಬ್ರಾಹಿಂ ಆಯ್ಕೆ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇಬಿನಮರ ಹಾಗೂ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವ ಕುಮಾರ ಅತಿವಾಲೆ, ಶ್ರೀ ಶಿವರೆಡ್ಡಿ ಖ್ಯಾಡೆದ್, ಅವರ ಉಪಸ್ಥಿತಿಯಲ್ಲಿ ದಿನಾಂಕ 19/04/25 ರಂದು ದುಬಾಯಿಯಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ವಾರ್ಷಿಕ ಮಹಾ ಸಭೆಯಲ್ಲಿ ಜಿಸಿಸಿಯ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಶ್ರೀ ಅಶ್ರಫ್ ಶಾ ಮಾಂತೂರ್ ಹಾಗೂ ಯು.ಎ.ಇ ಘಟಕದ ಗೌರವ ಅಧ್ಯಕ್ಷರಾಗಿ, ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ, ಅಧ್ಯಕ್ಷರಾಗಿ ಅಮರ್ ಕಲ್ಲುರಾಯ, ಪ್ರಧಾನ ಕಾರಿಯದರ್ಶಿಯಾಗಿ ಇಬ್ರಾಹಿಂ ಬಾಜೂರಿ, ಕೊಶಾಧಿಕಾರಿಯಾಗಿ ಅಶ್ರಫ್ ಭಾಯಾರ್ ರವರನ್ನು ಅಯ್ಕೆಮಾಡಲಾಯಿತು.
ಗಡಿನಾಡು ಸಾಂಸ್ಕೃತಿ ಅಕಾಡೆಮಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಝೆಡ್ ಎ ಕಯ್ಯಾರ್ ಹಾಗೂ
ಉದ್ಯಮಿ ಶಿವಶಂಕರ ನೆಕ್ರಾಜೆ ಯೂಸುಫ್ ಶೇಣಿ, ಪಿ. ಮಂಜುನಾಥ ಕಾಸರಗೋಡು, ಅಲಿ ಸಾಗ್ ವಿಜಯಕುಮಾರ ಶೆಟ್ಟಿ ಗಾಣದಮೂಲೆ ಮುಂತಾದವರು ಉಪಸ್ಥಿತರಿದ್ದರು
ಯು ಎ ಇ ಪ್ರವಾಸದಲ್ಲಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣ ಬೇವಿನಮರ ಹಾಗೂ ಪ್ರಾಧಿಕಾರದ ಸದ್ಯಸರನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು ಎ ಇ ಘಟಕದ ವತಿಯಿಂದ ಎಲ್ಲಾ ಪದಾಧಿಕಾರಿಗಳು ಸೇರಿ ಸನ್ಮಾನಿಸಲಾಯಿತು.
