ತಿರುವೈಲ್, ನಾಲ್ಯಪದವು, ಹಳೆಕೋಟೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ: ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ ಭಾಗಿ

ಕರಾವಳಿ

ಮಳೆಯ ಕಾರಣದಿಂದ ಮೇ ಅಂತ್ಯಕ್ಕೆ ಆರಂಭಗೊಳ್ಳಬೇಕಿದ್ದ ಪ್ರಸಕ್ತ ವರ್ಷದ ಶೈಕ್ಷಣಿಕ ವರ್ಷ ಜೂನ್ 2 ರಂದು ಆರಂಭವಾಗಿದ್ದು , ರಾಜ್ಯದಾದ್ಯಂತ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿದವು. ಇದರ ಭಾಗವಾಗಿ ಮಂಗಳೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್, ನಾಲ್ಯಪದವು ಸರಕಾರಿ ಶಾಲೆ ಹಾಗೂ ಉಳ್ಳಾಲದ ಹಳೆ ಕೋಟೆ ಸೈಯದ್ ಮದನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಆರ್ ಈಶ್ವರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿರುವೈಲು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್ಆರ್ ಈಶ್ವರ, ಕ್ಷೇತ್ರ ಸಮನ್ವಯ ಅಧಿಕಾರಿ ಸುಷ್ಮಾ ಕಿಣಿ , ಶಿಕ್ಷಣ ಸಂಯೋಜಕ ಅನ್ನಪೂರ್ಣ ಬಚ್ಚನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಹಸೀನ್ ಹಾಗೂ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಲಿಲ್ಲಿ ಬಾಯ್ಸ್ , ಅನಿತಾ ಮತ್ತು ಕುಮುದುನಿ ಹಾಜರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಪುಷ್ಪಾವತಿ ಹಾಗೂ ಗೋಪಾಲ್ ರವರನ್ನು ಸನ್ಮಾನಿಸ ಲಾಯಿತು. ಶಾಲಾ ಹಿತೈಷಿಗಳು ಹಾಗೂ ಶಿಕ್ಷಣ ಪ್ರೇಮಿಗಳಾದ ರಘು ಸಾಲಿಯಾನ್, ಗಿರೀಶ್ ಆಚಾರ್ಯ, ರಾಕೇಶ್ ಮಲ್ಲಿ ಹಾಗೂ ಓಂ ಪ್ರಕಾಶ್ ಶೆಟ್ಟಿ ಹಾಗೂ ಎಸ್ಡಿಎಂಸಿ ಅಧ್ಯಕ್ಷರಾದ ರೇಷ್ಮಾ ಹಾಗೂ ಮಾಜಿ ಕಾರ್ಪೊರೇಟರ್ ಹೇಮಲತಾ ರವರು ಹಾಜರಿದ್ದರು.