ಸ್ಪೆಷಲ್ ನ್ಯೂಸ್ ಬಿಗ್ ಇಂಪ್ಯಾಕ್ಟ್|| ಮಂಗಳೂರು ಮೂಡಾ ಕಮೀಷನರ್ ನೂರ್ ಝಹರಾ ಖಾನಂ ಎತ್ತಂಗಡಿ: ಮುಹಮ್ಮದ್ ನಝೀರ್ ನೂತನ ಆಯುಕ್ತ

ಕರಾವಳಿ

ಕಳೆದ ಒಂದು ವರ್ಷಗಳಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಆಯುಕ್ತರಾಗಿದ್ದ ನೂರ್ ಝಹರಾ ಖಾನಂ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಮುಹಮ್ಮದ್ ನಝೀರ್ ಅವರನ್ನು ನೂತನ ಆಯುಕ್ತರಾಗಿ ನೇಮಕಗೊಳಿಸಿದೆ.

ಮೂಡಾ ಆಯುಕ್ತೆ ನೂರ್ ಝಹರಾ ಖಾನಂ ಬಿಲ್ಡರ್ ಲಾಬಿಗೆ ಮಣಿದು ಬಡವರು, ಮಧ್ಯಮ ವರ್ಗದವರು ಮನೆಕಟ್ಟಲು 3 ಸೆಂಟ್ಸ್, 5 ಸೆಂಟ್ಸ್ ಜಾಗಕ್ಕೆ ಸಿಂಗಲ್ ಸೈಟಿಗೆ ಅರ್ಜಿ ಹಾಕಿದರೆ ಕೇವಲ ಹಿಂಬರಹ ಕೊಟ್ಟು ಪೆಂಡಿಂಗ್ ಇಡುತ್ತಿದ್ದರು. ಇದರ ಹಿಂದೆ ಬಿಲ್ಡರ್ ಮಾಫಿಯಾಗಳ ಕೈವಾಡವಿತ್ತು. ಬಿಲ್ಡರ್ ಮಾಫಿಯಾದವರ ಬಿಲ್ಡಿಂಗ್ ಮಾರಾಟಕ್ಕೆ ಬಡ, ಮಧ್ಯಮವರ್ಗದವರನ್ನು ಬಲಿಪಶು ಮಾಡಲಾಗುತ್ತಿತ್ತು. ಬಿಲ್ಡರ್ ಗಳ ಬಿಲ್ಡಿಂಗ್ ನ ಒಂದು ಚದರ ಅಡಿಗೆ 50 ರೂಪಾಯಿಯಂತೆ ಆಯುಕ್ತರ ಜೇಬಿಗೆ ಸಂದಾಯವಾಗುತ್ತಿತ್ತು. ಈ ರೀತಿ ಬಿಲ್ಡರ್ ಮಾಫಿಯಾ ಜೊತೆ ಸಖ್ಯ ಬೆಳೆಸಿ ಕೋಟಿ ಕೋಟಿ ಡೀಲ್ ನಡೆಯುತ್ತಿತ್ತು. ಈ ಬಗ್ಗೆ ಸ್ಪೆಷಲ್ ನ್ಯೂಸ್ ಪತ್ರಿಕೆ ಮೂಡಾ ಆಯುಕ್ತರ ಸ್ವಾಹಾ ಪುರಾಣದ ಬಗ್ಗೆ ಇಂಚಿಂಚು ಮಾಹಿತಿ ಪ್ರಕಟಿಸಿತ್ತು. ಅಲ್ಲದೆ ಮೂಡಾ ದಲ್ಲಿ ನಡೆಯುತ್ತಿದ್ದ ಹಲವಾರು ಗೋಲ್ಮಾಲ್ ಪುರಾಣದ ಬಗ್ಗೆ ಈ ಹಿಂದೆ ಸ್ಪೆಷಲ್ ನ್ಯೂಸ್ ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

ಇದೀಗ ಎಚ್ಚೆತ್ತುಕೊಂಡ ನಗರಾಭಿವೃದ್ಧಿ ಇಲಾಖೆ ಮೂಡಾ ಆಯುಕ್ತರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಅವರ ಜಾಗಕ್ಕೆ ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ, 2016 ರಲ್ಲಿ ಮೂಡಾ ಕಮೀಷನರ್ ಆಗಿ ಒಂದು ವರ್ಷ ಕೆಲಸ ಮಾಡಿದ್ದ, ದ.ಕ ಜಿಲ್ಲಾ ಪಂಚಾಯತ್ ನಗರ ಯೋಜನಾಧಿಕಾರಿಯಾಗಿದ್ದ, ಪ್ರಸ್ತುತ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಜಂಟಿ ಆಯುಕ್ತರಾಗಿರುವ ಮುಹಮ್ಮದ್ ನಝೀರ್ ಅವರನ್ನು ನೇಮಿಸಲಾಗಿದೆ.