ದೇಶವನ್ನೇ ಬೆಚ್ಚಿ ಬೀಳಿಸಿದ ಭೀಕರ ವಿಮಾನ ದುರಂತ
ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಗುರುವಾರ ಮಧ್ಯಾಹ್ನ 1.38 ಕ್ಕೆ ತೆರಳಿದ ಏರ್ ಇಂಡಿಯಾ ವಿಮಾನ AI 171 ಪತನಗೊಂಡಿದೆ. ಮಂಗಳೂರು ಮೂಲದ ಸಹ ಪೈಲೆಟ್ ಕ್ಲೈವ್ ಕುಂದರ್ ಸೇರಿದಂತೆ 242 ಜನರಿದ್ದ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ದುರ್ಮರಣಕ್ಕೀಡಾಗಿರುವ ಸಾಧ್ಯತೆ ಹೆಚ್ಚಾಗಿದೆ.
ಅಹಮದಾಬಾದ್ನ ಮೇಘನಿ ನಗರದ ವಸತಿ ಪ್ರದೇಶಕ್ಕೆ ಅಪ್ಪಳಿಸಿದ ದುರದೃಷ್ಟಕರ ಏರ್ ಇಂಡಿಯಾ ವಿಮಾನ AI 171 ವಿಮಾನದಲ್ಲಿದ್ದ ಸಿಬ್ಬಂದಿಯಲ್ಲಿ ಮಂಗಳೂರು ಮೂಲದ ಮತ್ತು ಪ್ರಸ್ತುತ ಮುಂಬೈ ನಿವಾಸಿಯಾದ ಕ್ಲೈವ್ ಕುಂದರ್ ಸಹ ಪೈಲೆಟ್ ಆಗಿದ್ದರು ಅನ್ನುವ ಮಾಹಿತಿ ಈಗ ಲಭ್ಯವಾಗಿದೆ. ಇವರಿದ್ದ ಬೋಯಿಂಗ್ 787 ಡ್ರೀಮ್ಲೈನರ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:38 ಕ್ಕೆ ಹೊರಟಿತ್ತು.

1100 ಗಂಟೆಗಳ ಹಾರಾಟದ ಅನುಭವ ಹೊಂದಿದ್ದ ಕ್ಲೈವ್, 8200 ಗಂಟೆಗಳಿಗೂ ಹೆಚ್ಚು ಹಾರಾಟದ ಲೈನ್ ತರಬೇತಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ ಸಹಾಯ ಮಾಡುತ್ತಿದ್ದರು. ಇಬ್ಬರು ಶಿಶುಗಳು ಸೇರಿದಂತೆ 232 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಹಾರಾಟ ಆರಂಭಿಸಿದ ಸುಮಾರು ಐದು ನಿಮಿಷಗಳ ನಂತರ ಪತನಗೊಂಡಾಗ ಇವರಿಬ್ಬರೇ ಫ್ಲೈಟ್ಅನ್ನು ನಿಯಂತ್ರಣ ಮಾಡುತ್ತಿದ್ದರು.
ವಿಮಾನದಲ್ಲಿದ್ದ ಒಟ್ಟು ಪ್ರಯಾಣಿಕರ ಸಂಖ್ಯೆ 242.
