ಅಖಿಲ ಭಾರತ ಬಾರ್ ಎಕ್ಸಾಮ್ ರದ್ದತಿಗೆ AILU ಒತ್ತಾಯ; ಮುಖ್ಯಮಂತ್ರಿಗಳಿಗೆ ಮನವಿ

ಕರಾವಳಿ

ಅಖಿಲ ಭಾರತ ವಕೀಲರ ಒಕ್ಕೂಟದ ವತಿಯಿಂದ ಅವೈಜ್ಞಾನಿಕವಾದ ಅಖಿಲ ಭಾರತ ಬಾರ್ ಎಕ್ಸಾಮ್ (AIBE) ಸೇರಿದಂತೆ ವಕೀಲ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ವಕೀಲರಿಂದ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಅಖಿಲ ಭಾರತ ವಕೀಲರ ಒಕ್ಕೂಟ,ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಸಿ ಇಂದು ದಿನಾಂಕ 13-06-2026ರಂದು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷರರಾದ ಹಿರಿಯ ವಕೀಲರಾದ ಯಶವಂತ ಮರೋಳಿ, ಉಪಾಧ್ಯಕ್ಷರಾದ ರಾಮಚಂದ್ರ ಬಬ್ಬುಕಟ್ಟೆ, ಕಾರ್ಯದರ್ಶಿಯಾದ ನಿತಿನ್ ಕುತ್ತಾರ್, ಹಿರಿಯ ವಕೀಲರಾದ ಶಾಲಿನಿ ಮನೋಹರ್, ರಾಮ ಗಟ್ಟಿ, ನಾರಾಯಣ್, ವಿದ್ಯಾ ಭಟ್, ಮನೋಜ್ ವಾಮಂಜೂರು, ಸುನಂದ ಕೊಂಚಾಡಿ ಉಪಸ್ಥಿತರಿದ್ದರು.