ಮದುವೆಗೆ ಒಲ್ಲೆ ಅನ್ನುತ್ತಿರುವ ಯುವತಿಯರು.! ‘ಅವಿವಾಹಿತ’ ಟ್ರೆಂಡ್ ಗೆ ಮಾರುಹೋದ ಹೊಸ ತಲೆಮಾರಿನ ಯುವತಿಯರು.!

ರಾಷ್ಟ್ರೀಯ

ಭಾರತದಲ್ಲಿ ಬರೋಬ್ಬರಿ 72 ಮಿಲಿಯನ್ ಅವಿವಾಹಿತ ಮಹಿಳೆಯರು; ಮಾರ್ಗನ್ ಸ್ಟಾನ್ಲಿ ಬಿಚ್ಚಿಟ್ಟ ಭಯಾನಕ ಸರ್ವೇ

ಈಗಿನದ್ದು ತಂತ್ರಜ್ಞಾನದ ಯುಗ. ಹೊಸ ಹೊಸ ಟ್ರೆಂಡ್ ಗೆ ಹೊಸ ತಲೆಮಾರು ಮಾರುಹೋಗುತ್ತಿದ್ದಾರೆ. ಅದರಲ್ಲೂ ಯುವತಿಯರಂತೂ ಹೊಸ ಟ್ರೆಂಡ್ ಫಾಲೋ ಮಾಡುತ್ತಾ ಹೊಸ ಬಿಕ್ಕಟ್ಟಿಗೂ ಕಾರಣರಾಗುತ್ತಿದ್ದಾರೆ. ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅವಿವಾಹಿತ ಮಹಿಳೆಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಾರ್ಗನ್ ಸ್ಟಾನ್ಲಿ ಬಿಡುಗಡೆಗೊಳಿಸಿರುವ ಸರ್ವೇ ರಿಪೋರ್ಟ್ ಇದೀಗ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದೆ. ಯುವತಿಯರು ವಿವಾಹ ಬಂಧನ ಕ್ಕೆ ಒಲ್ಲೆ ಅನ್ನುತ್ತಿದ್ದು, 2030 ರ ವೇಳೆಗೆ 25 ರಿಂದ 44 ವರ್ಷ ವಯಸ್ಸಿನ ದುಡಿಯುವ ಸುಮಾರು 45% ಮಹಿಳೆಯರು ಅವಿವಾಹಿತರಾಗಿರುತ್ತಾರೆ. ಈ ಪ್ರವೃತ್ತಿಯು ಆರ್ಥಿಕ ಮಾದರಿಗಳು, ಕೆಲಸದ ನೀತಿಗಳು, ಮದುವೆ ಮತ್ತು ಪೋಷಕರಾಗುವಂತಹ ಸಾಮಾಜಿಕ ಪರಿಕಲ್ಪನೆಗಳ ಮೇಲೆ ಪರಿಣಾಮ ಬೀರಲಿದೆ.

ಭಾರತದಲ್ಲಿ 72 ಮಿಲಿಯನ್ ಯುವತಿಯರು ಅವಿವಾಹಿತರಾಗಿದ್ದಾರೆ. ಇದು ಬ್ರಿಟನ್ ಮತ್ತು ಸ್ವಿಟ್ಜರ್ಲ್ಯಾಂಡ್ ನ ಜನಸಂಖ್ಯೆಯನ್ನು ಒಟ್ಟುಗೂಡಿಸುವಷ್ಟು. ಈ ಸಂಖ್ಯೆಯಲ್ಲಿ ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತು ಅವಿವಾಹಿತ ಮಹಿಳೆಯರು ಸೇರಿದ್ದಾರೆ.

ಅವಿವಾಹಿತ ಯುವತಿಯರ ವಿಷಯಕ್ಕೆ ಬಂದಾಗ ಜಪಾನ್ ಮತ್ತು ಸ್ವೀಡನ್ ನಂಬರ್ ಒನ್ ಸ್ಥಾನದಲ್ಲಿದೆ. ಮಹಿಳೆಯರು ಈಗ ತಮ್ಮ ವೈಯಕ್ತಿಕ ಅಭಿವೃದ್ಧಿ ಮತ್ತು ವೃತ್ತಿ ಜೀವನಕ್ಕೆ ಆದ್ಯತೆ ನೀಡಲು ಬಯಸುತ್ತಿರುವುದು. ವರದಕ್ಷಿಣೆ, ಕೌಟುಂಬಿಕ ಹಿಂಸೆ, ಗೌರವದ ಕೊರತೆ ಮುಂತಾದ ಕಾರಣಗಳಿಗಾಗಿ ಮಹಿಳೆಯರು ಮದುವೆಯಾಗುವ ಮನಸ್ಸು ಮಾಡದೆ ಒಂಟಿಯಾಗಿ ಬದುಕಲು ಇಷ್ಟಪಡುತ್ತಿದ್ದಾರೆ. ಮಹಿಳೆಯರು ಈಗ ಹೆಚ್ಚು ವಿದ್ಯಾವಂತರಾಗುತ್ತಿದ್ದು ತಮ್ಮ ವೃತ್ತಿ ಜೀವನದ ಜೊತೆಗೆ ತಮ್ಮ ಸ್ವಾತಂತ್ರ್ಯಕ್ಕೂ ಆದ್ಯತೆ ನೀಡಲು ಬಯಸುತ್ತಿರುವುದು, ವಿಚ್ಛೇದನ ಪ್ರಕರಣಗಳ ಹೆಚ್ಚಳ, ಮದುವೆಯೊಂದಿಗೆ ಬರುವ ಜವಾಬ್ದಾರಿಗಳನ್ನು ತಪ್ಪಿಸಿಕೊಳ್ಳಲು ಅವಿವಾಹಿತ ಹಾದಿಯನ್ನು ತುಳಿಯುತ್ತಿದ್ದಾರೆ.

ಇದರ ಜೊತೆಗೆ ಅವಿವಾಹಿತರಾಗಿರುವುದು ಹೊಸ ಟ್ರೆಂಡ್ ರೀತಿಯಲ್ಲಿ ಮಹಿಳೆಯರು ಸ್ವೀಕರಿಸುತ್ತಿದ್ದಾರೆ. ಇದರ ಜೊತೆಗೆ ಕೆಲವು ಮಧ್ಯವಯಸ್ಸು ತಲುಪಿದ ನಂತರ 30 ರಿಂದ 40 ರ ಹರೆಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿರುವುದು, ಮತ್ತೆ ಮದುವೆಯಾಗದೆ ಒಂಟಿಯಾಗಿ ಜೀವಿಸುವ ಮಹಿಳೆಯರ ಸಂಖ್ಯೆ ದುಪ್ಪಟ್ಟು ಆಗುತ್ತಿರುವುದು ಕೂಡ ಕಳವಳಕಾರಿ ಸಂಗತಿಯಾಗಿದೆ.