ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಆಫೀಸರ್ಸ್ ಟಾರ್ಗೆಟ್.. ಪುರುಷ ಪ್ರಧಾನ ವ್ಯವಸ್ಥೆಯ ಷಡ್ಯಂತ್ರಕ್ಕೆ ‘ನಾರಿಮಣಿ’ ಯರೇ ಬಲಿಪಶು.!

ಕರಾವಳಿ

ಯಾರಿಗೂ ಜಗ್ಗದ, ಬಗ್ಗದ ಗಟ್ಟಿಗಿತ್ತಿ ಗಣಿ ಮೇಡಂ.!

ಉಫ್.. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ರಾಜಕಾರಣ ಮಾತ್ರ ಮೇಳೈಸುತ್ತದೆ ಎಂದು ನೀವು ನಂಬಿ ಕೂತರೆ ಅದು ನಿಮ್ಮ ಮೂರ್ಖತನ. ಇಲ್ಲಿನ ಪುರುಷ ಪ್ರಧಾನ ವ್ಯವಸ್ಥೆ ಗಟ್ಟಿಗಿತ್ತಿ, ಧೈರ್ಯಶಾಲಿ ದೊಡ್ಡ ದೊಡ್ಡ ಗ್ರೇಡ್ ನ ಮಹಿಳಾ ಅಧಿಕಾರಿಗಳನ್ನು ಷಡ್ಯಂತ್ರ ನಡೆಸಿ ಬಲಿಪಶು ಮಾಡುವ ವ್ಯವಸ್ಥಿತ ಸಂಚು ಕೂಡ ಬಹಳ ಕರಾರುವಾಕ್ಕಾಗಿ ನಡೆಯುತ್ತಿದೆ. ತಮ್ಮ ತಾಳಕ್ಕೆ ಕುಣಿಯದ ಅಧಿಕಾರಿಗಳನ್ನು ಬೆದರಿಸಿ ತಮ್ಮ ಮರ್ಜಿಗೆ ಒಳಪಡಿಸುವ, ಅದಕ್ಕೂ ಬಗ್ಗದಿದ್ದರೆ ಲೋಕಾಯುಕ್ತ ರೈಡ್ ನಂತಹ ದಾಳಿಯನ್ನು ಮಾಡಿಸುವ ಮೂಲಕ ಮಹಿಳಾ ಅಧಿಕಾರಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತದೆ. ಕೆಲವು ಮಹಿಳಾ ಅಧಿಕಾರಿಗಳಂತೂ ಉಸ್ಸಪ್ಪಾ.‌.ದಕ್ಷಿಣ ಕನ್ನಡ ಜಿಲ್ಲೆಯ ಸಹವಾಸವೇ ಬೇಡವೆಂದೂ ಇಲ್ಲಿಂದ ಗಂಟು ಮೂಟೆ ಕಟ್ಟಿದ್ದು ಇದೆ. ಇನ್ನು ಕೆಲವು ಮಹಿಳಾ ಅಧಿಕಾರಿಗಳು ಸೊಪ್ಪು ಬೆದರಿಕೆಗೆಲ್ಲಾ ಅಂಜದೆ, ಏನಾಗುತ್ತೊ ನೋಡೋಣ ಅನ್ನುವ ಧೈರ್ಯ ಪ್ರದರ್ಶಿಸುವವರು ಇದ್ದಾರೆ. ಆದರೆ ಆ ಸಂಖ್ಯೆ ಅತ್ಯಂತ ಬೆರಳೆಣಿಕೆಯದ್ದು. ಅವರಲ್ಲಿ ಗಣಿ ಇಲಾಖೆಯ ಮೇಡಂ ಕೃಷ್ಣವೇಣಿ ಕೂಡ ಒಬ್ಬರು.

ಮೂಡಾ ಆಯುಕ್ತರಾಗಿದ್ದ ನೂರ್ ಝಹರಾ ಖಾನಂ ಅವರನ್ನು ಜಿಲ್ಲೆಯ ಕೆಲವು ಪಟ್ಟಭದ್ರ ಪುರುಷ ಪ್ರಧಾನ ವ್ಯವಸ್ಥೆ ಕಾಡಿದ್ದೇ ಕಾಡಿದ್ದು‌. ಬಹಳಷ್ಟು ಇನ್ ಫ್ಯುಯೆನ್ಸ್ ಹೊಂದಿದ್ದ ಈ ಮಹಿಳೆ ಬಗ್ಗದೇ ಇದ್ದಾಗ ಲೋಕಾಯುಕ್ತ ರೈಡ್ ಮಾಡಿಸುವ ಮೂಲಕ ಇಲ್ಲಿನ ಕೆಲವರು ಆತ್ಮಸ್ಥೈರ್ಯ ಕುಗ್ಗಿಸುವಂತೆ ಮಾಡಿದ್ದರು. ಕೊನೆಗೆ ಒಂದೇ ವರ್ಷದಲ್ಲಿ ಜಿಲ್ಲೆಯ ಸಹವಾಸ ಸಾಕಪ್ಪಾ ಎಂದೇಳಿ ಎತ್ತಂಗಡಿ ಆಗಿ ಹೋದರು. ಅದರಲ್ಲೂ ರಾಜಕರಣಿಯ ಬ್ರದರ್ಸ್ ಒಬ್ಬನಿಗೆ 25 ಪರ್ಸಂಟ್ ಮಾಮೂಲು ಸಂದಾಯವಾಗುವ ವಿಚಾರ ಬೆಳಕಿಗೆ ಬಂದಿತ್ತು.

ಗಣಿ ಇಲಾಖೆಯ ಕೃಷ್ಣವೇಣಿ ಮೇಡಂ ಯಾರಿಗೂ ಜಗ್ಗದ, ಬಗ್ಗದ ಖಡಕ್ ಮಹಿಳಾ ಆಫೀಸರ್ಸ್. ಮಂಗಳೂರಿಗೆ ಬಂದ ಮೂರೇ ತಿಂಗಳಲ್ಲಿ ಅವರ ವೆಲೆನ್ಸಿಯಾದ ಅಪಾರ್ಟ್ ಮೆಂಟ್ ಗೆ ಲೋಕಾಯುಕ್ತರಿಂದ ಧಾಳಿ ನಡೆಯುತ್ತದೆ. ಇದರ ಹಿಂದೆ ಕೆಲವು ಮಾಫಿಯಾ ದಂಧೆಕೋರರ ಚಿತಾವಣೆ ಇದ್ದಿದ್ದಂತೂ ಸತ್ಯ. ದಂಧೆಕೋರರನ್ನು, ಬಕೆಟ್ ಹಿಡಿಯುವ ಅಧಿಕಾರಿಗಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳದ ಕಾರಣ ಲೋಕಾಯುಕ್ತ ರೈಡ್ ಮಾಡಿಸಲಾಗಿತ್ತು. ಆದರೆ ಕೃಷ್ಣವೇಣಿಯವರು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತನ್ನ ವ್ಯಾಪ್ತಿಯಲ್ಲಿ ಪ್ರಾಮಾಣಿಕ, ದಕ್ಷತೆಯಿಂದ ಕಾರ್ಯ ನಿರ್ವಹಿಸತೊಡಗಿದರು. ಆದರೆ ತಾವು ಹೇಳಿದಂತೆ ಕೇಳಲ್ಲ ಅನ್ನುವ ಅಧಿಕಾರಿಗಳನ್ನು ಯಾವೆಲ್ಲ ಕಷ್ಟ ಕೊಟ್ಟು ಅಸಹಾಯಕರಾಗಿ ಮಾಡಿಬಿಡುತ್ತಾರೆ ಅನ್ನುವುದಕ್ಕೆ ಕೃಷ್ಣವೇಣಿ ಉತ್ತಮ ಉದಾಹರಣೆ.

ಕೆಲವು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಪ್ರಮುಖ ಅಧಿಕಾರಿಗಳು ಗಂಭೀರ ಆರೋಪ ಮಾಡಿ ಮಹಿಳಾ ಅಧಿಕಾರಿಯನ್ನೇ ಟಾರ್ಗೆಟ್ ಮಾಡಿದ್ದರು. ಕೃಷ್ಣವೇಣಿ ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ ನಿಲ್ಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾಲು ಸಾಲು ಆರೋಪ ಮಾಡಿದ್ದರು. ವಿಚಿತ್ರ ಅಂದರೆ ಆರೋಪಗೈದವರೇ ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ನಡೆಸುವವರಿಗೆ ಸಾಥ್ ಕೊಟ್ಟು, ಅವರಿಂದಲೇ ಮಂತ್ಲಿ ಮಾಮೂಲಿ ಪಡೆಯುತ್ತಿದ್ದರಂತೆ. ಆದರೆ ಕೃಷ್ಣವೇಣಿ ಏಕಾಂಗಿಯಾಗಿ ಈ ದಂಧೆ ನಿಲ್ಲಿಸಬೇಕಂತೆ. ವ್ಹಾವ್.. ಎಷ್ಟೊಂದು ಚಂದ ಅಲ್ವಾ…ಮಲ್ಲಿಕಟ್ಟೆಯಿಂದ ಬೆರಳೆಣಿಕೆಯ ಸಿಬ್ಬಂದಿ ಜತೆ ಕೃಷ್ಣವೇಣಿ ಬಂದು ಪಿಚ್ಚರಿನಲ್ಲಿ ತೋರಿಸುವಂತೆ ಲೇಡಿ ಡಾನ್ ಆಗಿ ಬಂದು ಅಕ್ರಮವನ್ನು ಮಟ್ಟ ಹಾಕಬೇಕಂತೆ. ಕೆಡಿಪಿ ಸಭೆಯಲ್ಲಿ ಹದ್ಥು ಕುಕ್ಕುವ ರೀತಿಯಲ್ಲಿ ಮಹಿಳಾ ಅಧಿಕಾರಿಯನ್ನು ಪುರುಷ ಪ್ರಧಾನ ವ್ಯವಸ್ಥೆ ಟಾರ್ಗೆಟ್ ಮಾಡುತ್ತಿದ್ದರೂ, ಗಟ್ಟಿಗಿತ್ತಿ ಗಣಿ ಮೇಡಂ ಎಲ್ಲವನ್ನೂ ಸೈಲೆಂಟ್ ಆಗಿ ಕೇಳಿಸಿಕೊಂಡು ಇತರ ಇಲಾಖೆಗಳು ಸಹಕಾರ, ಸ್ಪಂದನೆ ನೀಡುತ್ತಿಲ್ಲ ಎಂದು ಇಂಚಿಂಚು ಮಾಹಿತಿ ನೀಡಿ ಅವರ ಮುಖಕ್ಕೆ ಹೊಡೆದಂತೆ ಎಲ್ಲವನ್ನೂ ಹೇಳಿ ಬಿಟ್ಟಿದ್ದರು. ಅಲ್ಲಿಂದ ಶುರುವಾಗಿದೆ ಟಾರ್ಗೆಟ್.!

ಗಣಿ ಮೇಡಂ ಕೃಷ್ಣವೇಣಿ ವಿರುದ್ಧ ಪಕ್ಷ ಭೇದ ಮರೆತು ಎಲ್ಲಾ ಪಕ್ಷದವರು ರಂಗಕ್ಕಿಳಿದಿದ್ದಾರೆ. ಇದಕ್ಕೆ ಕಾರಣ ದಂಧೆಕೋರರ ಜೊತೆ ಅಂತರ ಕಾಯ್ದುಕೊಂಡಿದ್ದು, ಯಾವುದಕ್ಕೂ ಬಗ್ಗಲ್ಲ ಅನ್ನುವುದು ಗೊತ್ತಾದಾಗ ಎರಡನೇ ಬಾರಿಯೂ ಲೋಕಾಯುಕ್ತ ರೈಡ್ ಬೃಹನ್ನಾಟಕ ನಡೆಯುತ್ತದೆ. ಈ ಬಾರಿ ಅತ್ಯಂತ ಕರಾರುವಕ್ಕಾಗಿಯೇ ದಾಳಿಯ ತಯಾರಿ ದಂಧೆಕೋರರ ಮುಖಾಂತರ ನಡೆಯುತ್ತದೆ. ಹದಿನೆಂಟು ದಿನಗಳ ಕಾಲ ಜೈಲುವಾಸ ಅನುಭವಿಸುತ್ತಾರೆ. ಓರ್ವ ನಿಷ್ಠಾವಂತೆ, ಖಡಕ್ ಮಹಿಳಾ ಅಧಿಕಾರಿಯನ್ನು ಪುರುಷ ಪ್ರಧಾನ ವ್ಯವಸ್ಥೆ ಯಾವ ರೀತಿ ಜಂಘಾಬಲವನ್ನೇ ನುಚ್ಚು ನೂರು ಮಾಡುತ್ತದೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಆದರೆ ಕೃಷ್ಣವೇಣಿ ಧೈರ್ಯಶಾಲಿ, ಕೆಫಾಸಿಟ ಉಳ್ಳ ಮಹಿಳಾ ಅಧಿಕಾರಿ ಆದ ಕಾರಣ ತನ್ನ ಮೇಲೆ ನಡೆದ ಎಲ್ಲಾ ಷಡ್ಯಂತ್ರವನ್ನು ಧೈರ್ಯವಾಗಿಯೇ ಎದುರಿಸುತ್ತಾರೆ. ಲೋಕಾಯುಕ್ತ ಪ್ರಕರಣದ ವಿರುದ್ಧ ಹೈಕೋರ್ಟ್ ಗೆ ದಾವೆ ಸಲ್ಲಿಸಿ ತಡೆಯಾಜ್ಞೆ ತಂದು ಮತ್ತೆ ಗಣಿ ಇಲಾಖೆಯ ಡ್ಯೂಟಿಗೆ ಹಾಜರಾಗುತ್ತಾರೆ! ಇಂತಹ ಕೆಫಾಸಿಟಿ ಕೆಲವೇ ಕೆಲವು ಅಧಿಕಾರಿಗಳಿಗೆ ಇರಲು ಸಾಧ್ಯ. ಅದರಲ್ಲೂ ಮಹಿಳಾ ಅಧಿಕಾರಿ ಕೃಷ್ಣವೇಣಿ ಧೈರ್ಯವನ್ನು ಮೆಚ್ಚಲೇಬೇಕಿದೆ.

ಮಾಫಿಯಾ ಗ್ಯಾಂಗ್ ಕೈವಾಡ

ಗಣಿ ಮೇಡಂ ಕೃಷ್ಣವೇಣಿಯವರಿಗೆ ನಿರಂತರವಾಗಿ ಬೇತಾಳದಂತೆ ಕಾಡುತ್ತಿರುವವರು ದಂಧೆಕೋರರ ಮಾಫಿಯಾ ಗ್ಯಾಂಗ್. ಜೊತೆಗೆ ರಾಜಕಾರಣದ ವೇಷ ತೊಟ್ಟ ಸೆಟ್ಟಿಂಗ್ ವೀರನೊಬ್ಬ ಕೂಡ ಮಾಫಿಯಾದ ಜೊತೆಗೆ ಸಖ್ಯ ಬೆಳೆಸಿ ಗಣಿ ಮೇಡಂ ಗೆ ಕಷ್ಟಗಳ ಸರಮಾಲೆಯನ್ನೇ ತಂದೊಡ್ಡುತ್ತಿದ್ದಾರೆ. ಇವರೆಲ್ಲರೂ ಮಹಿಳಾ ಅಧಿಕಾರಿಗಳೆಂದರೆ ತಾವು ಹೇಳಿದಂತೆ ಕೇಳಬೇಕು, ತಮ್ಮ ಆಜ್ಞೆಯನ್ನು ಪಾಲಿಸಬೇಕು ಅನ್ನುವ ಮನಸ್ಥಿತಿ ಹೊಂದಿದವರು. ಮಹಿಳಾ ಅಧಿಕಾರಿಗಳು ಅಂದ ಮಾತ್ರಕ್ಕೆ ಪುರುಷ ಪ್ರಧಾನ ವ್ಯವಸ್ಥೆಯ ಕಾಲಾಳುಗಳಲ್ಲ. ಅವರಿಗೂ ಧೈರ್ಯ ಇದೆ. ಎಂತಹ ಸಂಧಿಗ್ಧತೆಯನ್ನು ಎದುರಿಸುವ ತಾಕತ್ತು ಇರುತ್ತದೆ.

ಕಿರಿಯ ‘ಮೋಹನ’ ರಾಗದ ತಾಳ -ಮೇಳ.!

ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಇಲಾಖೆಗೆ ವಕ್ಕರಿಸಿಕೊಂಡಿರುವ ಈ ಕಿರಿಯ ನ ಅಧಿಪತ್ಯಕ್ಕೆ ದಕ್ಷ ಮಹಿಳಾ ಆಫೀಸರ್ಸ್ ಪಡಬಾರದ ಕಷ್ಟ ಪಡುವಂತಾಗಿದೆ. ಮಾಫಿಯಾ ಗ್ಯಾಂಗ್ ಜೊತೆ ಗಳಸ್ಯ ಕಂಠಸ್ಥ ಸಂಬಂಧ ಹೊಂದಿರುವ ಈ ಕಿರಿಯ ಪುರುಷ ಅಧಿಕಾರಿ ವಸೂಲಿ ವೀರನಾಗಿಯೂ ಗುರುತಿಸಿಕೊಂಡಾತ. ಮೇಲಾಧಿಕಾರಿಯ ವಿರುದ್ಧವೇ ಷಡ್ಯಂತ್ರ ಹೂಡಿ ಮಾಫಿಯಾದರ ಕಾಲಾಳುಗಳಾಗಿ ಕೆಲಸ ಮಾಡುವುದೇ ಈತನ ಡ್ಯೂಟಿ! ಮರಳು, ಕಲ್ಲು ನುಂಗುಬಾಕತನಕ್ಕೆ ಕುಖ್ಯಾತಿ. ಸುಬಗನಂತೆ ನಟಿಸುವ ಈತ ಮಾಡುವುದೆಲ್ಲ ಹರಾಮ್ ಕೋರ ಕೆಲಸ. ಇತ್ತೀಚೆಗೆ ನಡೆದ ಹನಿ ಟ್ರ್ಯಾಪ್ ಪ್ರಕರಣದ ಓರ್ವ ಆರೋಪಿಯೂ ಈತನ ಆಪ್ತ. ಹನಿ ಟ್ರ್ಯಾಪ್ ಆರೋಪಿಯೊಂದಿಗೂ ಕಿರಿಯ ಅಧಿಕಾರಿಯ ವಹಿವಾಟು ಜೋರಿದೆಯಂತೆ. ಉಡುಪಿ ಮೂಲದ ಆರ್ ಟಿ ಐ ಕಾರ್ಯಕರ್ತನ ಮೂಲಕ ಎಲಿಗೇಷನ್ ಹಾಕಿಸಿ ಆ ನಂತರ ಸೆಟ್ಟಿಂಗ್ ನಡೆಸುವ ಚಾಲಾಕಿ ಈತ. ಉಡುಪಿ ಲೋಕಾಯುಕ್ತ ರೈಡ್ ಗೆ ಸಿಲುಕಿದರೂ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಮತ್ತೆ ಮಂಗಳೂರಿನ ಗಣಿ ಇಲಾಖೆಯಲ್ಲಿ ಗೂಟ ಹಾಕಿ ಕೂತಿದ್ದಾನೆ. ಅಚ್ಚರಿ ಅಂದರೆ ಈ ಕಿರಿಯ ಅಧಿಕಾರಿಯ ಪತ್ನಿ ನ್ಯಾಯದಾನ ನೀಡುವ ವ್ಯಕ್ತಿಯಂತೆ. ಹರ..ಹರ

ನ್ಯಾಯ ಯಾವತ್ತೂ ಸೋತ ಉದಾಹರಣೆ ಇಲ್ಲ. ಅನೇಕ ಕಷ್ಟ ಕೋಟಲೆಗಳು, ಹೆಸರಿಗೆ ಮಸಿ ಬಳಿಯುವ ಕೃತ್ಯಗಳು ನಡೆಯಬಹುದು. ಆದರೆ ಕೊನೆಗೆ ಗೆಲ್ಲುವುದು ನ್ಯಾಯ ಮಾತ್ರ. ನ್ಯಾಯಯುತ ಹಾದಿಯಲ್ಲಿದ್ದ ಗಣಿ ಮೇಡಂ ಕೃಷ್ಣವೇಣಿಗೆ ಗೆಲುವಾಗಿದೆ. ಇನ್ನಷ್ಟು ಸೇವೆ ಜಿಲ್ಲೆಯ ಜನತೆಗೆ ಸಿಗಲಿ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತ ಮಹಿಳಾ ಅಧಿಕಾರಿ ಹೊಸತೊಂದು ಇತಿಹಾಸ ಸೃಷ್ಟಿಸಿದ್ದಾರೆ. ಈ ಗಟ್ಟಿಗಿತ್ತಿ ಮಹಿಳಾ ಅಧಿಕಾರಿಣಿ ಕೃಷ್ಣವೇಣಿ ಇನ್ನಷ್ಟು ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲಿ ಎಂದು ಜಿಲ್ಲೆಯ ಜನತೆ ಆಶಿಸುತ್ತಿದ್ದಾರೆ. ಗುಡ್ ಲಕ್ ಗಣಿ ಮೇಡಂ!