ರಾಶಿ ರಾಶಿ ಸೆಕ್ಸ್ ವಿಡಿಯೋ.. ತನ್ನದೇ ಭಂಗಿಯಾಟದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಕಾಮುಕ ‘ಧರ್ಮ ರಕ್ಷಕ’ ಧರೆಗುಡ್ಡೆ.!

ಕರಾವಳಿ

ಹೊರಗಡೆ ಹಿಂದುತ್ವದ ‘ಜಾಗರಣೆ’.. ಒಳಗಡೆ ‘ಕಾಮ ಕಸರತ್ತು’.. ಸಿಂಗಂ ಏಟಿಗೆ ಹೊರಬಂತು ಹಿಂದೂ ರಕ್ಷಕನ ಅಸಲಿ ಹಕೀಕತ್ತು.!

ಅಬ್ಬಬ್ಬಾ.. ವೇದಿಕೆ ಸಿಕ್ಕರೆ ಸಾಕು ಧರ್ಮ ರಕ್ಷಣೆಯ ಪುಂಖಾನುಪುಂಖ ಮಾತು, ಉದ್ದುದ್ದದ ನಾಮ, ಕೇಸರಿ ಶಾಲು ಹೆಗಲೇರಿಸಿಕೊಂಡು ಗೋರಕ್ಷಣೆ, ಧರ್ಮದ ಜಾಗರಣೆ ಹೆಸರಿನಲ್ಲಿ ಮಾಡುವುದು ಹಲಾಲುಕೋರತನದ ಕೆಲಸ. ಅಂತಹ ಕಾಮ ಪಿಶಾಚಿಯೊಬ್ಬನ ಅಸಲಿ ಹಕೀಕತ್ತು ಇದೀಗ ಬಯಲಿಗೆ ಬಂದಿದೆ.

ಮೂಡಬಿದ್ರೆ ಬಿಜೆಪಿ ನಾಯಕನ ಲೆಫ್ಟ್ ರೈಟ್ ಗಳಲ್ಲಿ ಗುರುತಿಸಿಕೊಂಡಿದ್ದ ಕಟ್ಟರ್ ಹಿಂದುತ್ವವಾದಿ ಸಮಿತ್ ರಾಜ್ ಧರೆಗುಡ್ಡೆಯ ಅಸಲಿ ಕಾಮಕಾಂಡ ಹೊರಬಿದ್ದಿದೆ. ಹಿಂದೂ ಜಾಗರಣ ವೇದಿಕೆಯ ಮುಖಂಡನಾಗಿ ಮೂಡಬಿದ್ರೆಯಲ್ಲಿ ಹಿಂದುತ್ವದ ರಕ್ಷಣೆ ತನ್ನಿಂದಲೇ ಎಂದು ಬೀದಿ ಬೀದಿಗಳಲ್ಲಿ ಭೋಂಗು ಬಿಡುತ್ತಿದ್ದ ಧರೆಗುಡ್ಡೆ ಪೌರುಷ ಮೊಬೈಲಿನಲ್ಲಿ ಅನಾವರಣಗೊಂಡಿದೆ.

ಇತ್ತೀಚೆಗೆ ತೋಡಾರು ಮೈಟ್ ಕಾಲೇಜು ಬಳಿ ಮಾಸ್ಟರ್ ಬಸ್ ಅಜಾಗರೂಕತೆಯಿಂದ ಸ್ಥಳೀಯ ಯುವತಿಯೊಬ್ಬಳಿಗೆ ಡಿಕ್ಕಿ ಹೊಡೆದು ಸಣ್ಣ ಪುಟ್ಟ ಗಾಯಗಳಾಗಿತ್ತು. ಮೂಡಬಿದ್ರೆ ಪರಿಸರದಲ್ಲಿ ಅನ್ಯಕೋಮಿನ ಕಡೆಯವರಿಂದ ಏನಾದರೂ ಅನಾಹುತ ನಡೆದರೆ ಹಿಂದುತ್ವದ ಹೆಸರಿನಲ್ಲಿ ಡೀಲಿಂಗ್ ಗೆ ಇಳಿಯುವ ಧರೆಗುಡ್ಡೆ ಅದನ್ನೇ ತನ್ನ ವ್ಯವಹಾರ ಮಾಡಿಕೊಳ್ಳುತ್ತಿದ್ದ. ಮಾಸ್ಟರ್ ಬಸ್ ಮಾಲೀಕನಿಗೂ ಧಮ್ಕಿ ಹಾಕಿ 5 ಲಕ್ಷ ರೂಪಾಯಿ ಪೀಕಿಸಿದ್ದ. ಬೆದ್ರದಲ್ಲಿ ಧರೆಗುಡ್ಡೆ ಹವಾ ಸ್ವಲ್ಪ ಮಟ್ಟಿಗೆ ಮೆಂಟೈನ್ ಇದ್ದುದರಿಂದ, ರಿಸ್ಕ್ ಯಾಕೆ ಬೇಕು ಎಂತೆಲ್ಲ ಆತ ಹೇಳಿದ ಹಂಗೆ ಕೊಟ್ಟು ಬಿಟ್ಟವರೇ ಹೆಚ್ಚು. ಮಾಸ್ಟರ್ ಬಸ್ಸಿನ ಮಾಲಿಕ ಧಮ್ಕಿ ಹಾಕಿ ವಸೂಲಿ ಮಾಡಿದ ಬಗ್ಗೆ ಮೂಡಬಿದ್ರೆ ಪೊಲೀಸರಿಗೆ ದೂರು ನೀಡಿದ್ದ. ಜೂನ್ 26 ರಂದು ಧರೆಗುಡ್ಡೆಯನ್ನು ಎತ್ತಾಕಿಕೊಂಡು ಬಂದ ಸಿಂಗಂ ಸಂದೇಶ್ ಪೊಲೀಸ್ ಸ್ಟೈಲಿನಲ್ಲೇ ವಿಚಾರಣೆ ನಡೆಸಿದ್ದಾಗ ಆತನ ಮೊಬೈಲಿನಲ್ಲಿ ಕಂಡುಬಂದ ದೃಶ್ಯ ಕಂಡು ಪೊಲೀಸರೇ ಒಮ್ಮೆ ಹೌಹಾರಿದ್ದರು. ಹಿಂದೂ ಧರ್ಮ ರಕ್ಷಕನ ಮೊಬೈಲಿನಲ್ಲಿತ್ತು 50 ಕ್ಕೂ ಅಧಿಕ ಬ್ಲೂ ಫಿಲಂಗಳು, ಅದರಲ್ಲಿ ತನ್ನದೇ ಕಾಮಕಚಗುಳಿಯಿಡುವ, ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ಸ್ವತಹ ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದ. ಇವಿಷ್ಟೇ ಮಾತ್ರವಲ್ಲ ಈತನ ಮೊಬೈಲಿನಲ್ಲೂ ಇನ್ನಷ್ಟು ಭಯಾನಕ ಸಂಗತಿಗಳು ಅಡಗಿತ್ತು. ತನ್ನದೇ ಸಂಘಟನೆಯ ಯುವತಿಯರು, ಹೆಣ್ಣು ಮಕ್ಕಳನ್ನೇ ಈತ ಟಾರ್ಗೆಟ್ ಮಾಡಿಕೊಂಡಿದ್ದ. ಹಿಂದುತ್ವದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವತಿಯರು, ಸ್ನೇಹಿತರ ಪತ್ನಿಯಂದಿರ ಪೋಟೋ ಗಳನ್ನು ಸ್ಕ್ರೀನ್ ಶಾಟ್ ಮಾಡಿ ಗ್ಯಾಲರಿಯಲ್ಲಿ ಇಟ್ಟುಕೊಂಡಿದ್ದ. ಹೊರಗಡೆ ಹಿಂದುತ್ವದ ‘ಜಾಗರಣೆ’, ಒಳಗಡೆ ಕಾಮ ಕಸರತ್ತಿನ ನಾನಾ ಮುಖಗಳು. ಈತನ ಈ ಅಸಹ್ಯ ಪುರಾಣದ ಬಗ್ಗೆ ಇನ್ಸ್ ಪೆಕ್ಟರ್ ಸಂದೇಶ್ ಸಮಿತ್ ರಾಜ್ ಧರೆಗುಡ್ಡೆ ವಿರುದ್ಧ ಬಿಎನ್ ಎಸ್ ಕಲಂ 294(2)(A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಸ್ಲಿಂ ಸಮುದಾಯದ ವಿರುದ್ಧ ಸದಾ ದ್ವೇಷಕಾರುತ್ತಿದ್ದ ಕಟ್ಟರ್ ಹಿಂದುತ್ವವಾದಿ ಧರೆಗುಡ್ಡೆ ಮುಸ್ಲಿಮರ ಜೊತೆ ಯಾವುದೇ ವ್ಯಾಪಾರ, ವಹಿವಾಟು ನಡೆಸಬಾರದು ಎಂದು ಹಿಂದೊಮ್ಮೆ ಫರ್ಮಾನು ಹೊರಡಿಸಿದ್ದ. ವಿಚಿತ್ರ ಅಂದರೆ ಅದೇ ಕಟ್ಟರ್ ಹಿಂದುತ್ವವಾದಿ ಧರೆಗುಡ್ಡೆ ಸ್ವರಾಜ್ ಮೈದಾನದಲ್ಲಿ ಸರಕಾರಿ ಮೀನಿನ ಮಾರುಕಟ್ಟೆಯನ್ನು ಏಲಂ ಗೆ ಪಡೆದು ಒಳಬಾಡಿಗೆಯಲ್ಲಿ ಸಾಬ್ರರಿಗೆ ಮಾರಿದ್ದ!

ಹೇಳುವುದೊಂದು ..ಮಾಡುವುದೊಂದು. ಇವರದ್ದೆಲ್ಲವೂ ಡೋಂಗಿ ಹಿಂದುತ್ವ. ಹಿಂದುತ್ವ, ಸಂಸ್ಕೃತಿ, ಮಹಿಳೆಯರನ್ನು ಮಾತೆ ಅನ್ನುವ ಸಂಘದ ಮುಖಂಡನೇ ಅಶ್ಲೀಲ ಕ್ರೀಡೆಯಲ್ಲಿ ತೊಡಗಿಕೊಂಡರೆ ಇವರ ಜೊತೆ ಹಿಂದೂ ಮಹಿಳೆಯರನ್ನು ಹೇಗೆ ಕಳುಹಿಸಿಕೊಡುವುದು. ಇತ್ತೀಚೆಗೆ ಉಪ ಅರಣ್ಯ ಅಧಿಕಾರಿಯೊಬ್ಬರು ಭಜನೆ, ಹಿಂದುತ್ವದ ಹೆಸರಿನಲ್ಲಿ ಹಿಂದೂ ಮಹಿಳೆಯರನ್ನೇ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಈಗಿನ ಹಿಂದುತ್ವದ ಹೆಸರಿನಲ್ಲಿ ಸಾಲು ಸಾಲು ಪ್ರಕರಣ ಹೊರಬರುತ್ತಿರುವುದನ್ನು ನೋಡುವಾಗ ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಅನ್ನಿಸುತ್ತದೆ.

ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಮಗನಿಂದಲೇ ಹಿಂದೂ ಯುವತಿಗೆ ಗರ್ಭ ಮಾಡಿ ಓಡಿ ಹೋದ ಪ್ರಕರಣ, ಹಿಂದುತ್ವದ ಪ್ರಮುಖ ವಿದ್ಯಾಸಂಸ್ಥೆಯೊಂದರಲ್ಲಿ ನಾಲ್ವರು ಎಬಿವಿಪಿ ವಿದ್ಯಾರ್ಥಿಗಳು ತಮ್ಮದೇ ಹಿಂದೂ ಸಮುದಾಯದ ವಿದ್ಯಾರ್ಥಿನಿಯನ್ನು ಗ್ಯಾಂಗ್ ರೇಪ್ ಮಾಡಿ ವಿಡಿಯೋ ವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿದುಬಿಟ್ಟಿದ್ದು, ಈಗ ಹಿಂದೂ ಜಾಗರಣ ವೇದಿಕೆ ಮುಖಂಡನೇ ತನ್ನ ಕಾಮಕೇಳಿಯ ದೃಶ್ಯಗಳನ್ನು ರೆಕಾರ್ಡ್ ಮಾಡಿ ಇಟ್ಟುಕೊಂಡು ತನ್ನ ಮೊಬೈಲಿನಲ್ಲಿ ರಾಶಿ ರಾಶಿ ಸೆಕ್ಸ್ ವಿಡಿಯೋ ಗಳನ್ನು ಸೇವ್ ಮಾಡಿ ಇಟ್ಟುಕೊಂಡಿರುವುದು ನೋಡುವಾಗ ಇವರ ಹಿಂದೂ ಸಂಸ್ಕೃತಿ ಇದೇನಾ.? ಅನ್ನುವ ಅನುಮಾನ ಮೂಡುತ್ತದೆ. ‘ಹಿಂದೂ ಖತ್ರೇಮೆ’ ಅನ್ನುತ್ತಾರಲ್ಲ, ಇಂತಹ ಡೋಂಗಿ ಹಿಂದೂ ರಕ್ಷಕರಿಂದ ಹಿಂದೂ ಸಮಾಜ ಅಪಾಯದಲ್ಲಿದೆ. ಹಿಂದೂ ಸಮುದಾಯದ ಗೌರವಾನ್ವಿತರು ಇಂತಹ ಢೋಂಗಿ ಹಿಂದೂ ರಕ್ಷಕರ ಕೈಗೆ ಸಮಾಜವನ್ನು ಕೊಡುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.