ಸ್ಪೀಕರ್ ಸಾಹೇಬ್ರ ಕ್ಷೇತ್ರದಲ್ಲಿ ಇದೆಂತಹ ತಾರತಮ್ಯ.?
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿ ಇದ್ದಾಗ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರ್, ಫಾಝೀಲ್ ಸುರತ್ಕಲ್, ಸುಳ್ಯದ ಯುವಕನೊಬ್ಬನ ಹತ್ಯೆ ನಡೆದಿತ್ತು. ನೆಟ್ಟಾರ್ ಮನೆಗೆ ಭೇಟಿ ನೀಡಿದ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆಟ್ಟಾರ್ ಕುಟುಂಬಕ್ಕೆ ಸರಕಾರ ಪರಿಹಾರ ಘೋಷಿಸಿತ್ತು. ಇಬ್ಬರು ಮುಸ್ಲಿಂ ಅಮಾಯಕ ಯುವಕರ ಕುಟುಂಬಕ್ಕೆ ಪರಿಹಾರ ಘೋಷಿಸಿ ಆ ನಂತರ ಹಿಂಪಡೆದಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಪಸಂಖ್ಯಾತ ವರ್ಗದ ಪಾಲಿಗೆ ಬೊಮ್ಮಾಯಿ ವಿಲನ್ ಆಗಿದ್ದರು. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಮುಸ್ಲಿಂ ಸಮುದಾಯ ಸಿದ್ದರಾಮಯ್ಯ ರ ಕೈ ಹಿಡಿದಿತ್ತು. ಆದರೆ ಅವತ್ತು ಬೊಮ್ಮಾಯಿ ಮಾಡಿದ್ದನ್ನು ಇವತ್ತು ಸಿದ್ದರಾಮಯ್ಯ ಸರಕಾರ ಮಾಡಿದೆ. ಸ್ಥಳೀಯ ಅಲ್ಪಸಂಖ್ಯಾತ ಸಮುದಾಯದ ಶಾಸಕರಿದ್ದರೂ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಇದೆಂತಹ ಧೋರಣೆ ಸ್ವಾಮಿ..?
ಇತ್ತೀಚಿಗೆ ಸ್ಪೀಕರ್ ಕಾದರ್ ರವರ ಕ್ಷೇತ್ರ ಮಂಜನಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮೂರು ಮಕ್ಕಳು ಗಂಭೀರ ಗಾಯಗೊಂಡು ದೇರಳಕಟ್ಟೆಯ ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ತಾಯಿ ಹಾಗೂ ಮಗು ತೀರಿಕೊಂಡಿದೆ. ಇನ್ನು ಇಬ್ಬರು ಮಕ್ಕಳ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಇಡೀ ಜಿಲ್ಲೆಯೇ ಕಣ್ಣೀರು ಹಾಕಿದ ಈ ಪ್ರಕರಣದಲ್ಲಿ ಯುಟಿ ಖಾದರ್ ಮೌನವಾಗಿರುವುದು ದುರಂತ ಎಂದೇ ಹೇಳಬೇಕು. ಆದರೆ ಮದುವೆ, ಮುಂಜಿ, ಕೋಲಕ್ಕೆ ಭೇಟಿ ನೀಡುವ ಸ್ಪೀಕರ್ ಸಾಹೇಬರು ಈ ಘಟನೆಯ ಬಗ್ಗೆ ಕಿಂಚಿತ್ತು ಕರುಣೆ ಯಾಕೆ ಬಂದಿಲ್ಲ? ಮಂಗಳೂರಿನಲ್ಲಿ ಅದೆಷ್ಟೋ ದೊಡ್ಡ ದೊಡ್ಡ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಇದೆ. ಯಾಕೆ ಈ ಘಟನೆ ನಡೆದ ಗಾಯಾಳುಗಳನ್ನು ಅಲ್ಲಿಗೆ ಕಳಿಸಿಲ್ಲ? ಯಾಕೆ ಕೆ ಎಸ್ ಆಸ್ಪತ್ರೆಯಲ್ಲಿ ಇಡಬೇಕಾಯಿತು?

ಅವರು ಬಡವರ ಆದ ಕಾರಣಕ್ಕಾಗಿಯೇ?
ಇಷ್ಟು ದೊಡ್ಡ ಘಟನೆ ನಡೆದರೂ ಕೂಡ ಇವತ್ತಿಗೂ ಒಂದು ಪೊಲೀಸ್ ಕೇಸ್ ಆಗಿಲ್ಲ ! ಗ್ಯಾಸ್ ಏಜೆನ್ಸಿ ಯವರ ಪ್ರೀತಿಗೆ ಕಾದರ್ ರವರು ಪಾತ್ರರಾದರೆ?
ಆ ಮನೆಯವರು ಮುಸಲ್ಮಾನರಲ್ಲವೇ ಎಂಬ ತಾತ್ಸಾರವೇ? ಒಂದು ವೇಳೆ ಇನ್ನಿತರ ಸಮುದಾಯದವರಾಗಿದ್ದರೆ ಧಾವಿಸಿ ಬರುತ್ತಿದ್ದರೇನೋ.?
ಹುಬ್ಬಳ್ಳಿಯ ಉಣಕಲ್ ಎಂಬಲ್ಲಿನ ಅಚ್ಚವ್ವ ಕಾಲನಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ದುರ್ಘಟನೆಯಲ್ಲಿ ಮೃತರಾದವರಿಗೆ ಐದು ಲಕ್ಷ ರೂಪಾಯಿ ಸರಕಾರದ ವತಿಯಿಂದ ಪರಿಹಾರ ಘೋಷಿಸಲಾಗಿದೆ. ಆದರೆ ಸ್ಪೀಕರ್ ಕ್ಷೇತ್ರದ ತಾಯಿ ಮಗು ಗ್ಯಾಸ್ ದುರಂತದಲ್ಲಿ ಮೃತಪಟ್ಟರೂ ಈವರೆಗೂ ಪರಿಹಾರ ಘೋಷಿಸಲಿಲ್ಲ. ಇದ್ಯಾವ ನ್ಯಾಯ?