12 ವರ್ಷದ ಬಾಲಕಿ ಮೇಲೆ ಸರಿ-ಸುಮಾರು 200 ಪುರುಷರು ಅತ್ಯಾಚಾರ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಇದೀಗ ಈ ಕೃತ್ಯ ಎಸಗಿದ 10 ಮಂದಿಯನ್ನು ಬಂಧಿಸಲಾಗಿದೆ. ಮುಂಬೈ ಸಮೀಪದ ವಸೈನಲ್ಲಿ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿದ ಹನ್ನೆರಡು ವರ್ಷದ ಬಾಂಗ್ಲಾದೇಶಿ ಬಾಲಕಿಯ ಮೇಲೆ ಮೂರು ತಿಂಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಪುರುಷರು ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಎಂದು ಬಾಲಕಿ ಹೇಳಿ ಕೊಂಡಿದ್ದಾಳೆ. ಈ ಘಟನೆ ಗುಜರಾತ್ನ ನಾಡಿಯಾಡ್ನಲ್ಲಿ ನಡೆದಿದೆ. ನಂತರ ಅವಳನ್ನು ವಸೈ ಸಮೀಪದ ನೈಗಾಂವ್ ನಲ್ಲಿರುವ ವೇಶ್ಯಾವಾಟಿಕೆ ಜಾಲದಿಂದ ರಕ್ಷಿಸಲಾಗಿದೆ.
ಶಾಲೆಯಲ್ಲಿ ಒಂದು ವಿಷಯದಲ್ಲಿ ಫೇಲ್ ಆಗಿದ್ದ ಬಾಲಕಿ ತನ್ನ ಪೋಷಕರಿಗೆ ಹೆದರಿ ತನಗೆ ಪರಿ ಚಯ ಮಹಿಳೆಯೊಂದಿಗೆ ಭಾರತಕ್ಕೆ ಬಂದಿದ್ದಳು. ಆ ಮಹಿಳೆಯೇ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಳು ಎಂದು ಆರೋಪಿಸಲಾಗಿದೆ. ಮಹಿಳೆ ಬಾಲಕಿಯನ್ನು ಮೊದಲು ಗುಜರಾತ್ನ ನಡಿಯಾಡ್ಗೆ ಕರೆದೊಯ್ದು ಅಲ್ಲಿ ಮೂರು ತಿಂಗಳ ಅವಧಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಪುರುಷರ ಲೈಂಗಿಕ ದೌರ್ಜನ್ಯಕ್ಕೆ ಬಲಿಪಶುವಾಗುವಂತೆ ಮಾಡಿದ್ದಳು ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

ಮೀರಾ-ಭಾಯಂದರ್ ವಸೈ-ವಿರಾರ್ (MBVV) ಪೊಲೀಸ್ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ಜುಲೈ 26, 2025 ರಂದು ಈ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿದೆ. ಎಕ್ಸೋಡಸ್ ರೋಡ್ ಇಂಡಿಯಾ ಫೌಂಡೇಶನ್ ಮತ್ತು ಹಾರ್ಮನಿ ಫೌಂಡೇಶನ್ ಎಂಬ NGO ಈ ಕಾರ್ಯಾಚರಣೆಗೆ ನೆರವು ನೀಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಹತ್ತಪ ಮಂದಿಯನ್ನು ಬಂಧಿಸಲಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸುವಂತೆ ಹಾರ್ಮನಿ ಫೌಂಡೇಶನ್ ಸಂಸ್ಥಾಪಕ ಅಬ್ರಹಾಂ ಮಥಾಯ್ ಇದೀಗ ಒತ್ತಾಯಿಸಿದ್ದಾರೆ. ಏನು ತಿಳಿಯಾದ ಸಣ್ಣ ಮಕ್ಕಳನ್ನು ಹಳ್ಳಿಗಳಿಂದ ಕರೆತಂದು ನಗರಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸ ಲಾಗುತ್ತಿದೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
