ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮ ನೀಡಿದ ಹಾಗೂ ಮಗು ಜನನವಾದ ಒಂದು ದಿನದ ಬಳಿಕ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯ ಕೊಲ್ಲಮೊಗ್ರುವಿನಲ್ಲಿ ನಡೆದಿದೆ.
ಅಪ್ರಾಪ್ತೆಯೊಬ್ಬಳನ್ನು ಸಂಬಂಧಿಕನೇ ಗರ್ಭವತಿ ಮಾಡಿದ್ದ ಪ್ರಕರಣ ಇದಾಗಿತ್ತು. ಅಪ್ರಾಪ್ತೆ ಬಾಲಕಿ ಕಂದ್ರಪ್ಪಾಡಿ ಸಂಬಂಧಿಕರ ಮನೆಗೆ ಬಂದಿದ್ದಾಗ ಸಂಬಂಧಿಕ ಯುವಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪರಿಣಾಮ ಆಕೆ ಗರ್ಭವತಿಯಾಗಿದ್ದಳು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಅಲ್ಲದೇ ಆರೋಪಿ ಯುವಕನನ್ನು ಬಂಧಿಸಲಾಗಿತ್ತು.

ಗರ್ಭವತಿಯಾಗಿದ್ದ ಯುವತಿ ಸೋಮವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದು, ಮಂಗಳವಾರ ರಾತ್ರಿ ಮಗು ಮೃತಪಟ್ಟಿದೆ. ಅವಧಿಪೂರ್ವ ಮಗು ಜನನವಾಗಿದ್ದರಿಂದ ಹಾಗೂ ಮಗು ತೂಕ ಇಲ್ಲದೇ ಇರುವುದರಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
