ಸಂಘಪರಿವಾರ ತೋಡಿದ ಖೆಡ್ಡಾಕ್ಕೆ ಮಂಗಳೂರು ನಂತರ ಮಂಡ್ಯದ ಜನತೆ ಬಲಿಪಶು ಆಗುತ್ತರಾ.?
ಕೆರೆಗೋಡಿನ ಹನುಮ ಧ್ವಜ ಗಲಾಟೆ, ನಾಗಮಂಗಲದ ಗಣೇಶನ ಗಲಾಟೆ, ಮದ್ದೂರಿನ ಗಣೇಶನ ಗಲಾಟೆ ಹೀಗೆ ಕಳೆದ 2-3 ವರ್ಷಗಳಿಂದ ಶಾಂತವಾಗಿದ್ದ ಸಕ್ಕರೆ ನಾಡು ಮಂಡ್ಯದಲ್ಲಿ ಕೋಮುದ್ವೇಷಗಳು, ಕೋಮು ಗಲಾಟೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಬಹಳ ದೊಡ್ಡ ಕಾರಣವೂ ಇದೆ. ಇತ್ತೀಚೆಗೆ ಕೇಂದ್ರ ಸರಕಾರದ ಅಧೀನದಲ್ಲಿರುವ ಡಿಪಾರ್ಟ್ ಮೆಂಟ್ ಆಫ್ ಅಟಾಮಿಕ್ ಎನರ್ಜಿ (DAF) ಎಂಬ ಸಂಸ್ಥೆಯು 2021 ರಲ್ಲಿ ನಡೆಸಿದ ಒಂದು ಸಂಶೋಧನೆಯಿಂದ ಇದರ ಹಿಂದಿನ ರಹಸ್ಯ ಬಯಲಾಗಿದೆ.
ಮಂಡ್ಯದ ಮರಳಗಾಲ ಅಲ್ಲಪಟ್ಟಣದ ಬಳಿಯಿರುವ ಲೀಥಿಯಂ ಎಂಬ ಕಚ್ಚಾವಸ್ತುವಿನ ಬೃಹತ್ ನಿಕ್ಷೇಪ ಇರೋದು ಕೇಂದ್ರವನ್ನಾಳುವ ಬಿಜೆಪಿ ಸರಕಾರದ ರಾಜಕಾರಣಿಗಳಿಗೆ ವಾಸನೆ ಬಡಿಯಿತು. ಇಲೆಕ್ಟ್ರಿಕ್ ವೆಹಿಕಲ್ ಗಳ ಅಯಾನ್ ಬ್ಯಾಟರಿಗಳ ತಯಾರಿಕೆಗೆ ಅತ್ಯಗತ್ಯವಾಗಿರುವ ಈ ಲೀಥಿಯಂಗೆ ವಿಶ್ವದಲ್ಲೇ ಬಹು ಬೇಡಿಕೆ ಬಂದಿರುತ್ತದೆ. ಹಾಗಾಗಿಯೇ ವಿಶ್ವದ ಅಗ್ರಗಣ್ಯ ಲೀಥಿಯಂ ಬ್ಯಾಟರಿ ಉತ್ಪಾದನಾ ಸಂಸ್ಥೆ ಸಿಎಟಿಎಲ್ (CATL) ಜೊತೆಗೂಡಿರುವ ಅದಾನಿ ಸಮೂಹ ಸಂಸ್ಥೆ ಆ ಪ್ರದೇಶದಲ್ಲಿ ಲೀಥಿಯಂ ಗಣಿಗಾರಿಕೆಗೆ ಉತ್ಸಾಹ ತೋರಿದೆ.

ಈ ಕಾರಣದಿಂದ ಬಿಜೆಪಿಗೆ ಮಂಡ್ಯ ರಾಜಕಾರಣದ ಮೇಲೆ ಕಣ್ಣು ಕುಕ್ಕಿದ್ದೆ ಆಗ. ಏಕಾಂಗಿಯಾಗಿ ಬಿಜೆಪಿಯು ಏಕಸ್ವಾಮ್ಯ ಸಾಧಿಸಲು ಸಾಧ್ಯವಿಲ್ಲ ಎಂದರಿತು ಬಿಜೆಪಿ ಸಕ್ಕರೆ ನಾಡಲ್ಲಿ ಉರೀಗೌಡ, ನಂಜೇಗೌಡ ಜನ್ಮಕೊಟ್ಟಿತು. ಮಂಡ್ಯದಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವೇ ಇಲ್ಲ ಎಂದರಿತ ಹೈಕಮಾಂಡ್ ರಾಜ್ಯ ನಾಯಕರಿಗೆ ಜೆಡಿಎಸ್ ಜೊತೆ ಕೈಜೋಡಿಸಲು ಫರ್ಮಾನು ಹೊರಡಿಸಿತು. ಮೈತ್ರಿ ಮಾಡಿಕೊಳ್ಳಲು ಮನಸ್ಸಿಲ್ಲದಿದ್ದರೂ ಕಾಂಗ್ರೆಸ್ಸೆ ಗೆಲ್ಲುವ ಜಿಲ್ಲೆಯಾಗಿರುವುದರಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯನ್ನು ಒತ್ತಾಯ ಮಾಡಿ ಕಣಕ್ಕಿಳಿಸಿ ಗೆಲ್ಲಿಸಿತು. ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲದ ತಮ್ಮದೇ ಪಾರ್ಟಿಯ ಸುಮಲತಾ ಅಂಬರೀಶ್ ಅವರನ್ನು ಮೂಲೆಗುಂಪು ಮಾಡಿತು. ಮಾತ್ರವಲ್ಲದೆ ಜೆಡಿಎಸ್ ಹೀರೋ ಕುಮಾರಣ್ಣ ಗೆದ್ದು, ಕುಮಾರ ಸ್ವಾಮಿಯನ್ನು ಕೇಂದ್ರದ ಬೃಹತ್ ಕೈಗಾರಿಕಾ ಸಚಿವರನ್ನಾಗಿ ಮಾಡಿ ತಮ್ಮ ಗುರಿ ಸಾಧಿಸಿತು.
ಇಷ್ಟೆ ಸಾಕಾಗದೆ ಜೆಡಿಎಸ್ ನಾಯಕರನ್ನು ನಂಬದ ಬಿಜೆಪಿ ಪಕ್ಷ ಜೆಡಿಎಸ್ ಮೈತ್ರಿ ಬಳಸಿಕೊಂಡು ತನ್ನ ಕೋಮು ಅಜೆಂಡಾ ಮೂಲಕ ಈ ಭಾಗದ ಪ್ರಬಲ ಸಮುದಾಯಗಳ ನಡುವೆ ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವುದು ಬಿಜೆಪಿ ಸಂಘಪರಿವಾರಕ್ಕೆ ಪೊಲಿಟಿಕಲ್ ಉದ್ದೇಶವಾಗಿತ್ತು. ಅದರ ಪ್ರತಿ ಫಲವೇ ಇಂದು ಮಂಡ್ಯ ಜಿಲ್ಲೆಯಲ್ಲಿ ಬಿತ್ತಿ ಬೆಳೆಸಿದ ಕೋಮು ಗಲಭೆಗಳು.

ಕೇವಲ ಮಂಡ್ಯ ಮಾತ್ರವಲ್ಲದೆ ಜಾತ್ಯಾತೀತ ನಿಲುವಿನ ಜೆಡಿಎಸ್ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗಗಳಲ್ಲೂ ಬಿಜೆಪಿ ತನ್ನ ಬುನಾದಿಯನ್ನು ಗಟ್ಟಿಗೊಳಿಸುತ್ತಾ ಬಂತು. ಕರಾವಳಿಯಂತೆ ಮಂಡ್ಯದಲ್ಲೂ ತನ್ನ ಏಕಸ್ವಾಮ್ಯ ಸಾಧಿಸಿಬಿಟ್ಟರೆ ತನ್ನ ಕನಸಿನ ಲೀಥಿಯಂ ಗಣಿಗಾರಿಕೆಗೆ ಯಾರೂ ಯಾವ ಅಡ್ಡಿಯೂ ತರಲು ಸಾಧ್ಯವಿಲ್ಲ ಎನ್ನುವುದರಿತು ತನ್ನ ಗುರಿ ಸಾಧಿಸುವ ಹುನ್ನಾರವೇ ಈ ಗಲಭೆಗಳ ಲೆಕ್ಕಾಚಾರ ಎನ್ನಲಾಗಿದೆ. ಈ ಲೆಕ್ಕಾಚಾರದಲ್ಲಿ ಯಾರು ಯಾವ ಮನಸ್ಸನ್ನು ಒಡೆಯುತ್ತಾರೋ, ಯಾರು ಬಲಿಯಾಗುತ್ತಾರೆ, ಯಾರು ಏನನ್ನು ಕಳೆದುಕೊಳ್ಳುತ್ತಾರೆ ಗೊತ್ತಿಲ್ಲ. ಆದರೆ ಈ ಲೆಕ್ಕಾಚಾರದಲ್ಲಿ ದೊಡ್ಡ ಮಟ್ಟದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವುದು ಮಾತ್ರ ಜೆಡಿಎಸ್. ಇದರ ಹಿಂದಿರುವ ಎಲ್ಲಾ ಉದ್ದೇಶವೇ ಲೀಥಿಯಂ ಗಣಿಗಾರಿಕೆಯ ಮೇಲಿರುವ ಕರಾಳ ಸತ್ಯ.!
