ಭಾರತದ ಜೇಮ್ಸ್ ಬಾಂಡ್ ದೋವಲ್ ಹೇಳಿಕೆ ಸಿಕ್ರೇಟ್ ರಿವೀಲ್.!

ರಾಷ್ಟ್ರೀಯ

ಪಾಕಿಸ್ತಾನ ಪರ ಗೂಢಾಚಾರಿಕೆ ಯಲ್ಲಿ ಹಿಂದುಗಳ ಸಂಖ್ಯೆಯೇ ಅಧಿಕ.!

ಪಾಕಿಸ್ತಾನದ ಗುಪ್ತಚಾರ ಸಂಸ್ಥೆ ಐ.ಎಸ್.ಐ ಪರವಾಗಿ ಭಾರತದಲ್ಲಿ ಕೆಲಸ ಮಾಡಿದವರ ಪೈಕಿ 80 ಪರ್ಸೆಂಟ್ ಹಿಂದುಗಳಿದ್ದಾರೆ, ಕೇವಲ 20 ಪರ್ಸೆಂಟ್ ಮುಸ್ಲಿಮರಿದ್ದಾರೆ ಎಂದು ಹೇಳಿದ ಅಜಿತ್ ದೋವಲ್ ರವರ ಒಂದು ಹಳೆಯ ವೀಡಿಯೊ ತುಣುಕು ಸಾಮಾಜಿನ ಜಾಲತಾಣದಲ್ಲಿ ಹರಿದಾಡಿತ್ತು. ಇದು ಎಡಿಟಿಂಗ್ ವಿಡಿಯೋ ಎಂದು ಸೃಷ್ಟೀಕರಣ ನೀಡಿದ್ದಾರೆ. ಆದರೆ ಇದರ ಸತ್ಯಾಸತ್ಯತೆಯನ್ನು ಮಾಧ್ಯಮದ ಪ್ರತಿನಿಧಿರೊಬ್ಬರು ಬೆನ್ನು ಹತ್ತಿದಾಗ ವಿಡಿಯೋ ಎಡಿಟಿಂಗ್ ಮಾಡಿದ್ದಲ್ಲ, ವಿಡಿಯೋ ಮಾಡಿರುವ ಸಮಯದಲ್ಲಿ ಎಐ ತಂತ್ರಜ್ಞಾನ ಇದ್ದಿರಲಿಲ್ಲ ಎಂಬ ಸತ್ಯ ಹೊರಬಂತು. ಆದರೂ ಅಜಿತ್ ದೋವೆಲ್ ರವರು ಹೇಳಿರುವ ಸತ್ಯಾಸತ್ಯತೆಯ ಬಗ್ಗೆ ನಾವು ಒಮ್ಮೆ ಯೋಚಿಸಿ ಚಿಂತಿಸಬೇಕಾಗಿದೆ.

ಐ.ಎಸ್.ಐ. ಪರವಾಗಿ ಭಾರತದಲ್ಲಿ ಗೂಢಾಚಾರ್ಯೆ ನಡೆಸಲು ಪಾಕಿಸ್ತಾನ ಹಿಂದುಗಳನ್ನೇ ಯಾತಕ್ಕಾಗಿ ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಿದೆ. ಇದಕ್ಕೂ ಒಂದು ಕಾರಣವಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಸೆಕ್ಯುರಿಟಿ ಏಜೆನ್ಸಿಗಳು ಮತ್ತು ವಿವಿಧ ರಾಜ್ಯಗಳ ಆ್ಯಂಟಿ ಟೆರಟಿಸ್ಟ್ ಸ್ಕ್ವಾಡ್ ಗಳು ಪಾಕಿಸ್ತಾನ ಪರ ಗೂಢಾಚಾರ್ಯೆ ನಡೆಸಿದ ಆರೋಪದಲ್ಲಿ ಬಂಧಿಸಿದ ಕೆಲವು ಉದಾಹರಣೆಗಳು. ಹೀಗೆ ಬಂಧಿತರಾದವರಲ್ಲಿ ಬಹುಪಾಲು ಹಿಂದೂಗಳೆ ಇದ್ದಾರೆ. 2017ರ ಫೆಬ್ರವರಿಯಲ್ಲಿ ಮಧ್ಯಪ್ರದೇಶದ ಎಟಿಎಸ್ ಪೋಲಿಸರು ಭೂಪಾಳಿನಲ್ಲಿ ದ್ರುವ ಸಕ್ಸೇನಾ ಎಂಬಾತನನ್ನು ISI ನಂಟಿನ ವಿಚಾರದಲ್ಲಿ ಬಂಧಿಸಿದರು. ಈತ ಬಿ.ಜೆ.ಪಿ. ಐಟಿ ಸೆಲ್ ನ ಕಾರ್ಯಕರ್ತ. ಸಾಸ್ಣ ಎಂಬಲ್ಲಿ ಇದೇ ಕಾರಣಕ್ಕೆ ಬಂಧಿಸಲ್ಪಟ್ಟ ಬಲರಾಮ್ ಸಿಂಗ್ ಭಜರಂಗದಳದ ಕಾರ್ಯಕರ್ತ. ಸಾಸ್ಣದಲ್ಲಿ ಬಂಧನಕ್ಕೊಳಗಾದ ಆಶಿತ್ ಸಿಂಗ್ ರಾಥೋಡ್ ವಿಶ್ವ ಹಿಂದು ಪರಿಷತ್ ಗೋರಕ್ಷಾ ಸಮಿತಿಯ ಸಂಚಾಲಕನಾಗಿದ್ದ. 2019 ರಲ್ಲಿ ಮಧ್ಯಪ್ರದೇಶದ ಬಲಾರಾಮ್ ಸಿಂಗ್, ಸುನೀಲ್ ಸಿಂಗ್, ಶುಭ ಮಿಷರಣ ರವರನ್ನು ಪೋಲಿಸರು ಬಂಧಿಸಿದ್ದರು. ಇವರೆಲ್ಲರೂ ಭಜರಂಗ ದಳದ ಕಾರ್ಯಕರ್ತರಾಗಿದ್ದರು.

​CRPF ಸಿಬ್ಬಂದಿ ಮೋತಿರಾಮ್ ಸಿಂಗ್ ಹಣದಾಸೆಗಾಗಿ ISI ಪರವಾಗಿ ಕೆಲಸ ಮಾಡಿದ್ದ. ಮಹಾರಾಷ್ಟದ ಇಂಜಿನಿಯರ್ ರವೀಂದ್ರ ವರ್ಮ ಹನಿಟ್ರ‍್ಯಾಪ್‌ಗೆ ಒಳಗಾಗಿ ಭಾರತ ದೇಶದ ಸೇನಾ ನೌಕೆಯ ಬ್ಲೂಪ್ರಿಂಟ್ ನ್ನು ISI ಗೆ ರವಾನಿಸಿದ್ದ. ಗುಜರಾತಿನ ಸರಕಾರಿ ನೌಕರ ಸಹದೇವ ಸಿಂಗ್ ಗೋಯಲ್ ಕೂಡಾ ISI ನಂಟಿನ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ. ಪಟಿಯಾಲದ ದೇವೇಂದ್ರ ಸಿಂಗ್ ದಿಲೋನ್ ಎಂಬಾತ ಪಾಕಿಸ್ತಾನಕ್ಕೆ ಭೇಟಿ ನೀಡಿ, ಭಾರತದ ರಕ್ಷಣಾ ಸ್ಥಳಗಳ ಪೋಟೊಗಳನ್ನು ಕೊಟ್ಟು ಬಂದದ್ದಕ್ಕಾಗಿ ಹರಿಯಾಣ ಪೋಲಿಸರು ಆತನನ್ನು ಬಂಧಿಸಿದರು.

ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ನಿವಾಸಿ ದೀಪ್ ರಾಜ್‌ ಚಂದ್ರ ಶಂಕಿತ ಗೂಢಚಾರ. ಬಿಇಎಲ್ ಉದ್ಯೋಗಿಯಾಗಿದ್ದುಕೊಂಡೇ ಈತ ವಾಟ್ಸ್‌ಆ್ಯಪ್‌ ಹಾಗೂ ಟೆಲಿಗ್ರಾಂ ಬಳಸಿ ಮಾಹಿತಿ ರವಾನಿಸುತ್ತಿದ್ದ ವಿಚಾರ ತನಿಖೆ ವೇಳೆ ಗೊತ್ತಾಗಿದೆ. ದೆಹಲಿಯ ನೌಕಾ ಪ್ರಧಾನ ಕಚೇರಿಯ ಸತ್ವೀಂದರ್ ಸಿಂಗ್ ಮತ್ತು ದಾದು ಎಂದು ಗುರುತಿಸಲಾಗಿದ್ದು ಇವರು ಅಂತರಾಷ್ಟ್ರೀಯ ಗಡಿ ಬಳಿಯ ಸುಚೇರ್‌ಗರ್ ಪ್ರದೇಶದಲ್ಲಿ ವಾಟ್ಸ್‌ಅಪ್ ಮೂಲಕ ರಹಸ್ಯ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಕಾಶ್ಮೀರದ ವಿಶಾಲ್ ಯಾದವ್ ಆಪರೇಷನ್ ಸಿಂಧೂರ್ ವೇಳೆ ಐಎಸ್‌ಐಗೆ ರಹಸ್ಯ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಜೈಪುರದಲ್ಲಿ ಬಂಧನಕ್ಕೊಳಗಾಗಿದ್ದಾನೆ.

ತೀರಾ ಇತ್ತೀಚೆಗೆ ಪಾಲ್ಗಾಮ್ ದಾಳಿ ನಂತರದಲ್ಲಿ NIA ಬಂಧಿಸಿದವರಲ್ಲಿ ಯೂಟ್ಯೂಬರ್ ಜ್ಯೊತಿ ಮಲ್ಹೊತ್ರ, ನಾಸಿಕದ ಇಂಡಿಯನ್ ಅರ್ಮಿ ಸಿಬ್ಬಂದಿ ನಾಯಕ್ ಸಂದೀಪ್ ಸಿಂಗ್, ಸೈನಿಕ ಗುರುಪ್ರೀತ್ ಸಿಂಗ್, ಗೆಸ್ಟ್ ಹೌಸ್ ಮ್ಯಾನೇಜರ್ ಮಹೇಂದರ್ ಪ್ರಸಾದ್ ಮೊದಲಾದವರು ಯಾರು ಮುಸ್ಲಿಮರಾಗಿರಲಿಲ್ಲ.

ಮಾತ್ರವಲ್ಲದೆ ಇತ್ತೀಚೆಗೆ ಕರಾವಳಿಯ ಉಡುಪಿಯಲ್ಲಿ ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಕ್ಕೊಳಗಾದ ರೋಹಿತ್, ಸಂತ್ರಿ ಕೂಡ ಹಿಂದೂಗಳೇ, ಆದರೆ ಕೆಲವು ಆರೋಪದ ಮೇಲೆ ಮುಸ್ಲಿಮರನ್ನೂ ಪೋಲಿಸರು ಬಂಧಿಸಿದರು. ಅಜೀತ್ ದೋವಲ್ ರವರು ಹೇಳಿದಂತೆ ಐಎಸ್ಐ ಪರ ಕೆಲಸ ಮಾಡಿದವರಲ್ಲಿ ಮುಸ್ಲಿಮರ ಸಂಖ್ಯೆ ತೀರಾ ಕಡಿಮೆ. ಹಣದ ಆಸೆಗಾಗಿ ಅಥವಾ ಹನಿಟ್ರ್ಯಾಪ್ ಮೂಲಕ ISI ಹಿಂದುಗಳನ್ನು ತನ್ನ ಕಾರ್ಯ ಸಾದನೆಗಾಗಿ ಬಳಸಿಕೊಳ್ಳುತ್ತದೆ. ಹಣದ ಆಸೆ, ಹೆಣ್ಣಿನ ಆಸೆಗಾಗಿ ರಾಷ್ಟ ಭಕ್ತರೆಂದೆನಿಸಿಕೊಂಡವರು ಮಾತೃಭೂಮಿಯ ಮಾಹಿತಿಗಳನ್ನು ರವಾನೆ ಮಾಡಿ, ಜನ್ಮ ಭೂಮಿಗೆ ದ್ರೊಹ ಬಗೆಯುತ್ತಿದ್ದಾರೆ. ಇದನ್ನು ನಾವು ಅರ್ಥಮಾಡಿ ಕೊಳ್ಳಬೇಕಾಗಿದೆ.

​ಆವತ್ತು ಅಜಿತ್ ದೋವೆಲ್ ಹೇಳಿದ್ದು ಇದೇ ಸತ್ಯವನ್ನು. ರಾಜಕೀಯ ಲಾಭಕ್ಕಾಗಿ ನಮ್ಮವರೇ ನಮ್ಮೊಳಗೆ ಹುಟ್ಟುಹಾಕಿರುವ ಹಿಂದೂ, ಮುಸ್ಲಿಂ ಬಿರುಕಿನ ಲಾಭವನ್ನು ಪಾಕಿಸ್ತಾನ ಪಡಕೊಳ್ಳುತ್ತಿದೆ. ಇದು ಇಲ್ಲಿನ ನಾ(ಲಾ)ಯಕರಿಗೆ ಅರ್ಥವಾಗಲಿಲ್ಲ. ಇದನ್ನೆಲ್ಲಾ ಬದಿಗೆ ಸರಿಸಿ, ನಾವೆಲ್ಲರೂ ಭಾರತೀಯರು ಎಂದು ಒಗ್ಗೂಡುವುದೇ ಇದಕ್ಕಿರುವ ಪರಿಹಾರ.