ಅನ್ಯಾಯದ ಪರ ಮುಲಾಜಿಲ್ಲದೆ ಗಟ್ಟಿ ಧ್ವನಿ ಎತ್ತುತ್ತಿದ್ದ ಸಿರಾಜ್ ಬಜ್ಪೆ ಗೆ ಕಾಂಗ್ರೆಸ್ ಟಿಕೆಟ್ ನಿರಾಕರಣೆ; ಕಾಂಗ್ರೆಸ್ ಕಚೇರಿಗೆ ಬೀಗ

ಕರಾವಳಿ

ಕಾಂಗ್ರೆಸ್ ನಲ್ಲಿ ಬಕೆಟ್ ಶೂರರು, ಪೇಮೆಂಟ್ ಗಿರಾಕಿಗಳಿಗೆ ಮಾತ್ರ ಸ್ಥಾನವೇ.? ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಗ್ರಾಮ ಪಂಚಾಯತ್ ಆಗಿದ್ದ ಬಜಪೆ ಇದೀಗ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿ ಮೊದಲ ಬಾರಿ ಚುನಾವಣೆ ಎದುರಿಸುತ್ತಿದೆ. ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗೊಳಪಟ್ಟ ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ಡಿಸೆಂಬರ್ 21 ರಂದು ನಡೆಯಲಿದೆ. ಎಲ್ಲರ ಚಿತ್ತ ಬಜಪೆ ಪಟ್ಟಣ ಪಂಚಾಯತ್ ನತ್ತ ನೆಟ್ಟಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿ ಭಿನ್ನಮತ ತಾರಕಕ್ಕೇರಿದ್ದು, ಮೂರು ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಕ್ಷೇತ್ರದಾದ್ಯಂತ ಅಭಿಮಾನಿ ವರ್ಗವನ್ನು ಹೊಂದಿರುವ ಸಿರಾಜ್ ಬಜಪೆ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರೆಡೆಯಲ್ಲಿ ದೊಡ್ಡ ಸದ್ದು ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ಬಜಪೆ ಕಾಂಗ್ರೆಸ್ ಕಚೇರಿಗೆ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಸಮುದಾಯದ ಪರ ಧ್ವನಿ ಎತ್ತುವ ನಾಯಕರನ್ನು ಮೂಲೆಗೆ ಸರಿಸಲಾಗುತ್ತಿದೆ. ಕೇವಲ ಜೈಕಾರ ಹಾಕುವ ಬಕೆಟ್ ವೀರರಿಗೆ, ಪೇಮೆಂಟ್ ಶೂರರಿಗೆ ಸ್ಥಾನಮಾನ ನೀಡಲಾಗುತ್ತದೆ ಅನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಆದರೆ ಬಜಪೆ ವಿಚಾರದಲ್ಲಿ ಅದು ಈಗ ಪ್ರೂವ್ ಆಗಿದೆ.

ಬಜಪೆ ಓಲ್ಡ್ ಕಾನ್ವೆಂಟ್, ತಾರಿಕಂಬಳ ನಾಲ್ಕನೇ ವಾರ್ಡಿನ ಸದಸ್ಯರಾಗಿದ್ದ ಸಿರಾಜ್ ಬಜಪೆ ಸತತ ಮೂರು ಬಾರಿ ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಭದ್ರ ಬುನಾದಿ ಹಾಕಿದವರು. ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದಾಗ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಬೆರೆಳೆಣಿಕೆಯ ನಾಯಕರಲ್ಲಿ ಸಿರಾಜ್ ಬಜಪೆ ಕೂಡ ಒಬ್ಬರಾಗಿದ್ದರು. ನಾಯಕರಿಗೆ ಬಕೆಟ್ ಹಿಡಿಯಲಿಲ್ಲ, ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದಾಗ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಮುಲಾಜು ತೋರಿಸುತ್ತಿರಲಿಲ್ಲ. ಇದೇ ಇವರಿಗೆ ಮುಳುವಾಯಿತಾ ಅನ್ನುವ ಮಾತುಗಳು ಇದೀಗ ಕ್ಷೇತ್ರಾದ್ಯಂತ ಕೇಳಿ ಬರುತ್ತಿದೆ.

ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿದ್ದರು. ಇವರ ಕ್ಷೇತ್ರದಲ್ಲಿರುವ ಅಂಗನವಾಡಿ ಕಟ್ಟಡ ರಾಜ್ಯದಲ್ಲೇ ನಂಬರ್ ಒನ್ ಬಾಲವಾಡಿ ಕೇಂದ್ರ ಅನ್ನುವ ಹಿರಿಮೆಗೆ ಪಾತ್ರವಾಗಿತ್ತು. ಇದುವರೆಗೂ ಸುಣ್ಣ ಬಣ್ಣ ಕಾಣದ, ಬಜಪೆ ಪೇಟೆಯ ಮಧ್ಯಭಾಗದಲ್ಲಿದ್ದ ಪುರಾತನ ಹಳೆಯ ಬೆಂಚ್ ಕೋರ್ಟ್ (ಈಗಿನ ವಿ.ಎ ಕಚೇರಿ) ಒಂದು ಸುಂದರ ರೂಪ ಕೊಟ್ಟು, ಆಕರ್ಷಿಸುವಂತೆ ಮಾಡಿದ್ದು ಸಿರಾಜ್ ಅವರ ಹೆಗ್ಗಳಿಕೆ. ಬಜಪೆ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷನಾಗಿ ಊರಿನ ಸಮಸ್ಯೆ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಸಂಬಂಧಪಟ್ಟ ಇಲಾಖೆಗಳಿಂದ ಕೆಲಸ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಕ್ಷೇತ್ರಾದ್ಯಂತ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು.

ಇತ್ತೀಚೆಗೆ ಮತೀಯ ದುರ್ಷ್ಕರ್ಮಿಗಳಿಂದ ಹತ್ಯೆಯಾದ ಅಮಾಯಕ ಅಬ್ದುಲ್ ರಹಿಮಾನ್ ಕೊಳತ್ತಮಜಲು ಪರ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದರು. ಕಾಂಗ್ರೆಸ್ ಸರಕಾರ ಆಡಳಿತ ಇದ್ದರೂ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಪತ್ರಿಕಾಗೋಷ್ಠಿ ಕರೆದಿದ್ದರು. ಶಾದಿ ಮಹಲಿನಲ್ಲಿ ನಡೆದ ಅಲ್ಪಸಂಖ್ಯಾತ ನಾಯಕರ ಸಭೆಯಲ್ಲಿ ಧ್ವನಿ ಎತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಜನಪ್ರತಿನಿಧಿಗಳನ್ನು ಒಟ್ಟುಗೂಡಿಸಿ ಒಕ್ಕೂಟ ರಚಿಸಿದ್ದರು. ಇದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಕಾರಣವಾಗಿರಬಹುದಾ.?

ಇದೀಗ ಸಿರಾಜ್ ಬಜಪೆ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಲು ಅವರ ನೇರ ನುಡಿಯ ಮಾತುಗಳು ಕಾರಣವಾಯಿತೇ? ಮುಸ್ಲಿಂ ಪ್ರಭಾವಿ ನಾಯಕರೊಬ್ಬರ ಕೈ ಚಳಕಕ್ಕೆ ಸಿರಾಜ್ ಬಲಿಪಶುವಾದರೇ? ಯುವ ನಾಯಕನೊಬ್ಬನ ಪಾತ್ರವೇನು? ಸ್ಥಳೀಯವಾಗಿ ಕಾಂಗ್ರೆಸ್ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಮುಸ್ಲಿಂ ನಾಯಕರನ್ನು ಸೈಡ್ ಲೈನಿಗೆ ದೂಡುವ ಪ್ರಯತ್ನ ಮಾಡುತ್ತಿದೆ. ಇದು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಇನ್ನಷ್ಟು ಮಾರಕವಾಗುವ ಸಾಧ್ಯತೆ ಇದೆ.

ಸಿರಾಜ್ ಬಜಪೆ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಹನೀಫ್ ಹಿಲ್ ಟಾಫ್ ಮಾಲಕತ್ವದ ಕಟ್ಟಡದಲ್ಲಿರುವ ಕಾಂಗ್ರೆಸ್ ಕಚೇರಿಗೆ ಬೀಗ ಜಡಿಯಲಾಗಿದೆ. ಕಾಂಗ್ರೆಸ್ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಸಿರಾಜ್ ಪಕ್ಷೇತರನಾಗಿ ಕಣಕ್ಕಿಳಿದಿದ್ದಾರೆ. ಸಿರಾಜ್ ಸೈಡ್ ಲೈನ್ ಬಜಪೆ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಯಿಂದ ಜಾರುವ ಸಾಧ್ಯತೆಯೇ ಅಧಿಕವಾಗಿದೆ.