ಅಧಿಕಾರ ಅವಧಿ ಮುಗಿದರೂ ಅಧಿಕಾರ ಗುಂಗಿನಿಂದ ಹೊರಬರದ ಸದಸ್ಯರು; ಪ್ರತಿಭೆಗಳ ‘ಮಾಸ್ಟರ್’ ಪೀಸ್.!
ಅಬ್ಬಬ್ಬಾ..ಅಧಿಕಾರದ ಅವಧಿ ಮುಗಿದು ಹತ್ತಿರ ಹತ್ತಿರ ಆರು ತಿಂಗಳಾಗುತ್ತಾ ಬಂದರೂ ಅಧಿಕಾರದ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಫ್ಲೆಕ್ಸ್, ಸಮಾರಂಭಗಳಲ್ಲಿ ಇವರದ್ದೇ ರಾರಾಜಿಸುವ ಪೋಟೋಗಳು. ಸರಕಾರ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದರೂ ತಾವಿನ್ನೂ ಮಾಜಿಗಳು ಎಂಬುದನ್ನು ಮರೆತು ಹಾಲಿ ರೀತಿ ವರ್ತಿಸುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ವಕ್ಫ್ ಸಲಹಾ ಸಮಿತಿಯ ಕಥೆ ವ್ಯಥೆಯ ಕಥೆ.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ 2025 ಏಪ್ರಿಲ್ 8 ರಂದು ಮುಗಿದಿದ್ದು, ಸರಕಾರ ಅಧಿಕೃತವಾಗಿ ಜೂನ್ ತಿಂಗಳಲ್ಲಿ ಅವಧಿ ಮುಗಿದಿರುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಈ ಹಿಂದೆ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗುತ್ತಿದ್ದರು. ಆದರೆ ಇದೀಗ ಅವಧಿ ಮುಗಿದ ಕಾರಣ ವಕ್ಫ್ ಅಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದಾರೆ. ಸರಕಾರದ ನಿಯಮದ ಪ್ರಕಾರ ಹೊಸ ಅಧ್ಯಕ್ಷ, ಸದಸ್ಯರನ್ನು ಘೋಷಿಸುವವರೆಗೂ ವಕ್ಫ್ ಅಧಿಕಾರಿಗಳೇ ಆಡಳಿತ ನಡೆಸತಕ್ಕದ್ದು. ಇನ್ಯಾರಿಗೂ ಅವಕಾಶವೇ ಇಲ್ಲ. ಆಡಳಿತದ ಅವಧಿ ಮುಗಿಯುದರಿಂದ ಈ ಹಿಂದೆ ಇದ್ದ ಪದಾಧಿಕಾರಿಗಳು ಹಾಲಿ ರೀತಿ ವರ್ತಿಸುವುದು ಕಾನೂನು ಬಾಹಿರವಾಗಿದೆ.

ಆದರೆ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಬಹುತೇಕ ಪದಾಧಿಕಾರಿಗಳು ತಮ್ಮ ಅವಧಿ ಮುಗಿದರೂ, ಈಗಲೂ ತಾವಿನ್ನೂ ಪದಾಧಿಕಾರಿಗಳ ರೀತಿ ವರ್ತಿಸುತ್ತಿದ್ದಾರೆ ಅನ್ನುವ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಸರಕಾರ ಈಗಾಗಲೇ ಆಡಳಿತವನ್ನು ವಿಸರ್ಜಿಸುವುದರಿಂದ ಈ ಹಿಂದೆ ಇರುವ ಯಾವುದೇ ಸದಸ್ಯರು ತಮ್ಮ ಹಕ್ಕು ಚಲಾಯಿಸುವಂತ್ತಿಲ್ಲ. ಅಧಿಕಾರಿಗಳೇ ಹೆಡ್. ಆದರೆ ಈ ಹಿಂದೆ ಇದ್ದ ಕೆಲವು ಸದಸ್ಯರುಗಳು ಈಗ ತಾವೇ ಸದಸ್ಯರು ಅನ್ನುವ ರೀತಿಯ ಪೋಸ್ ಕೊಡುತ್ತಿದ್ದಾರೆ. ಮೋದಿ ಸರಕಾರ ಬಂದಿದ್ದಕ್ಕೆ ಊರಿಡೀ ಲಾಡ್ ಹಂಚಿದ ಮಾಸ್ಟರ್ ವೊಬ್ಬರು ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಅವರ ಅವಧಿ ಮುಗಿದರೂ ಈಗ ತಾವೂ ಹೋದ ಕಡೆ ಬಂದ ಕಡೆ ತಮ್ಮ ಕಾರಿನಲ್ಲಿ ಉದ್ದದ ರೀತಿ ಬರೆದುಕೊಂಡಿದ್ದ ಬೋರ್ಡ್ ಗಳು ಈಗಲೂ ಹಾಗೆಯೇ ಇದೆ. ಅದನ್ನು ಇನ್ನು ತೆಗೆಸಿಲ್ಲ. ಅಧಿಕಾರ ಹೋದರೂ ತಾವಿನ್ನೂ ಅಧಿಕಾರದಲ್ಲಿ ಇದ್ದೇವೆ ಅನ್ನುವ ರಾಜ ಗಾಂಭೀರ್ಯತೆಯಲ್ಲಿ ಇದ್ದಾರೆ. ಎಂತೆಂತಹ ಪ್ರತಿಭೆಗಳು ಇದೆಯೋ ನಮ್ಮ ಸಮುದಾಯದಲ್ಲಿ.
