ಏಳು ವರ್ಷಗಳ ಹಿಂದೆ ಹಕ್ಕು ಪತ್ರ ಪಡೆದು, ನಿವೇಶನ ಸ್ವಾಧೀನ ದೊರಕದೆ ಸಂತ್ರಸ್ತರಾಗಿರುವ ಕುಪ್ಪೆಪದವು ಗ್ರಾಮಪಂಚಾಯತ್ ವ್ಯಾಪ್ತಿಯ 80 ವಸತಿ ರಹಿತ ಕುಟುಂಬಗಳ ಸಮಸ್ಯೆಗಳನ್ನು ಚರ್ಚಿಸಲು ನಿವೇಶನ ರಹಿತರ ಹೋರಾಟ ಸಮಿತಿ, ಕುಪ್ಪೆಪದವು ಸಂತ್ರಸ್ತರ ಸಭೆ ನಡೆಸಿತು.
ಕಳೆದ ಒಂದು ವರ್ಷದಿಂದ ಹಲವು ಹಂತದ ಹೋರಾಟಗಳು ನಡೆಸಿದ ಸಂದರ್ಭ ಗ್ರಾಮ ಪಂಚಾಯತ್, ತಾಲೂಕು ಆಡಳಿತಗಳು ಕೇವಲ ಭರವಸೆಗಳನ್ನು ನೀಡಿ ಕೈತೊಳೆದು ಕೊಳ್ಳುತ್ತಿದೆ. ಕೊಟ್ಟ ಭರವಸೆಗಳನ್ನು ಈಡೇರಿಸದೆ ವಂಚಿಸುತ್ತಿವೆ. ಈ ಹಿನ್ನಲೆಯಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅದರಂತೆ, ಪೆಬ್ರವರಿ ತಿಂಗಳ 16 ರಂದು ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಈ ಅವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಪಂಚಾಯತ್ ಹಾಗು ತಾಲೂಕು ಆಡಳಿತ ಮುಂದಾಗದಿದ್ದಲ್ಲಿ ಹೋರಾಟವನ್ನು ಅನಿರ್ದಿಷ್ಟವಾಗಿ ಮಂದುವರಿಸುವುದು, ಪಾದಯಾತ್ರೆಗಳನ್ನು ನಡೆಸುವುದಾಗಿ ನಿವೇಶನ ರಹಿತರ ಹೋರಾಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
