ಲಿಲ್ಲಿ ಮನೆ, ಪಳ್ಳಿ ಮನೆಯ ಬಾಡೂಟವೇ ಹೆಚ್ಚಾಯ್ತಾ.! ಬಹುಸಂಸ್ಕೃತಿ ಉತ್ಸವಕ್ಕೆ ಸಿ.ಎಂ. ಸಿದ್ದರಾಮಯ್ಯ ಗೈರು; ವ್ಯಾಪಕ ಅಸಮಾಧಾನ

ಕರಾವಳಿ

“ಮಧ್ಯಾಹ್ನ ಲಿಲ್ಲಿ ಮನೆ, ಸಂಜೆ ಪಳ್ಳಿ ಮನೆ!” – ಇದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಲೋಗನ್! ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ವಿವಿಧ ಆಕಾಡೆಮಿಗಳ ಜಂಟಿ ಸಹಭಾಗಿತ್ವದಲ್ಲಿ ನಡೆದ ಬಹುಸಂಸ್ಕೃತಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದರೂ ಭಾಗವಹಿಸದಿರುವುದು ಪ್ರಜ್ಞಾವಂತ ನಾಗರಿಕರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಸರಕಾರದ ಅಧೀನದಲ್ಲಿರುವ ನಿಗಮ ಮಂಡಳಿಯ ಕಾರ್ಯಕ್ರಮಕ್ಕಿಂತ ತಮ್ಮ ಹಿಂದೆ ಸುತ್ತಾಡುವ ಭಟ್ಟಂಗಿಗಳ ಬಾಡೂಟದ ಕಾರ್ಯಕ್ರಮವೇ ದೊಡ್ಡದಾಯಿತಾ ಅನ್ನುವ ಪ್ರಶ್ನೆ ಎದ್ದಿದೆ. ಮಧ್ಯಾಹ್ನ ಮತ್ತು ಸಂಜೆ ಟೌನ್ ಹಾಲ್ ಬಳಿಯೇ ಬಾಡೂಟ, ಚಹಾದ ಔತಣಕೂಟದಲ್ಲಿದ್ದರೂ ಅಲ್ಲಿಯೇ ಸಮೀಪ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಭಾಗವಹಿಸದಿರುವುದರ ಹಿಂದಿನ ಕಾರಣವಾದರೂ ಏನು?

ಹಲವು ತಿಂಗಳ ತಯಾರಿ, ಪರಿಶ್ರಮದಿಂದ, ಮುಖ್ಯಮಂತ್ರಿ ಬರುವ ದಿನಾಂಕವನ್ನೇ ಗೊತ್ತುಪಡಿಸಿ ಹಮ್ಮಿಕೊಂಡಿದ್ದ ಬಹುಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಗೈರಾಗಿರುವುದು ಸಂಘಟಕರನ್ನು ನಿರಾಸೆಗೊಳಿಸಿತು.

ಬಕೆಟ್ ಹಿಡಿಯುವವರ ಬಾಡೂಟವೇ ಸಿಎಂ ಗೆ ಮುಖ್ಯವಾಯಿತಾ? ಸಾಹಿತ್ಯ -ಸಂಸ್ಕೃತಿ ಎಂದು ಕೇವಲ ಇವರು ಬಡಾಯಿ ಕೊಚ್ಚಿಕೊಳ್ಳುವುದಾ? ಆರು ನಿಗಮಗಳು ಸೇರಿ ಮಾಡಿದ ಕಾರ್ಯಕ್ರಮಕ್ಕಿಂತ ಇವರಿಗೆ ಭಟ್ಟಂಗಿಗಳು ಹೆಚ್ಚಾದರಾ? ಕನಿಷ್ಠ ಅರ್ಧ ಗಂಟೆಯಾದರೂ ಕಾರ್ಯಕ್ರಮಕ್ಕೆ ಮೀಸಲಿಡಲು ಇವರಿಗೆ ಸಾಧ್ಯವಾಗಿಲ್ಲ ಯಾಕೆ? ಹಿಂಗಾದರೆ ಈ ಅಕಾಡೆಮಿಗಳು ಯಾವ ಮಣ್ಣಂಗಟ್ಟಿಗೆ ಮಾಡಿದ್ದು.