ಕೊಲೆ ಪ್ರಕರಣದಲ್ಲಿ ಸದ್ಯ ಜೈಲಲ್ಲಿರುವ ಜ್ಯೋತಿಷಿ ಕಮಲಾಕರ ಭಟ್ಟನ ವಿರುದ್ಧ ಮತ್ತೊಂದು ಗಂಭೀರ ಆರೋಪ; ಗೋಶಾಲೆ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಸಂಪಾದನೆ

ರಾಜ್ಯ

ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರ ಸೇರಿದಂತೆ ಒಟ್ಟು ಎಂಟು ಆರೋಪಿಗಳು ವಸಂತ ನಾಯಕನ ಕೊಲೆ ಪ್ರಕರಣದಲ್ಲಿ ಸದ್ಯ ಕಂಬಿ ಎಣಿಸುತ್ತಿದ್ದಾರೆ. ಕಮಲಾಕರ ಭಟ್ಟ ಜ್ಯೋತಿಷಿ ವಿರುದ್ಧ ಮತ್ತೊಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಗೋಶಾಲೆ ಹೆಸರಿನಲ್ಲಿ ಈತ ಕೋಟಿ ಕೋಟಿ ಆಸ್ತಿ ಸಂಪಾದಿಸಿದ್ದಾನೆ ಅನ್ನುವ ಆರೋಪ ಕೇಳಿ ಬಂದಿದೆ.

ಗೋಶಾಲೆ ಹೆಸರಿನಲ್ಲಿ ಜ್ಯೋತಿಷಿ ಕಮಲಾಕಾರ್ ಭಟ್ ಕೋಟಿ ಕೋಟಿ ಆಸ್ತಿಗಳಿಕೆ ಮಾಡಿ ಶಿವಮೊಗ್ಗದ ಮುದುವಾಲ ಗ್ರಾಮದಲ್ಲಿ ಈ ಒಂದು ಜಮೀನು ಖರೀದಿಸಿದ್ದಾನೆ. ಮಠ ಹಾಗೂ ಗೋಶಾಲೆ ನಿರ್ಮಾಣಕ್ಕೆ 10 ಎಕರೆ ಜಮೀನು, ಖರೀದಿ ಮಾಡಿದ್ದು, ಐದು ವರ್ಷದ ಹಿಂದೆ ಮೂರುವರೆ ಕೋಟಿಗೆ 10 ಎಕರೆ ಜಮೀನು ಖರೀದಿ ಮಾಡಿದ್ದರು ಎನ್ನಲಾಗಿದೆ. ಇದೀಗ ಜಮೀನು ಕೊಟ್ಯಾಂತರ ಬೆಲೆ ಬಾಳುವ ಸ್ವತ್ತು ಆಗಿದೆ. ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಗೋಶಾಲೆ ಬಂದ್ ಆಗಿದೆ. ಗೋ ಶಾಲೆ ಹೆಸರಿನಲ್ಲಿ ಕಮಲಾಕರ್ ಭಟ್ ಕೋಟಿ ಆಸ್ತಿಗಳಿಕೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.