ಬಿಜೆಪಿಯಿಂದ ಆರ್ಎಸ್ಎಸ್ ಗೆ ಅಚ್ಛೇ ದಿನ್ ಬಂದಿಲ್ಲ; ಸ್ವಯಂಸೇವಕರ ಕಠಿಣ ಪರಿಶ್ರಮ, ಸೈದ್ಧಾಂತಿಕ ನೀತಿಗಳ ಬದ್ಧತೆಯಿಂದ ಆರ್‌ಎಸ್‌ಎಸ್‌ಗೆ ‘ಅಚ್ಛೇ ದಿನ್’ ಬಂದಿದೆ: ಮೋಹನ್ ಭಾಗವತ್

ರಾಷ್ಟ್ರೀಯ

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು (UCC) ರೂಪಿಸಬೇಕು ಮತ್ತು ಅದು ವಿಭಜನೆಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ RSSಗೆ ಅಚ್ಛೇ ದಿನ್’ ಬಂದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ. ಅದು ಬೇರೆ ದಾರಿ, ನಾವು ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೇವು. ನಮ್ಮನ್ನು ಬೆಂಬಲಿಸಿದವರಿಗೆ ಲಾಭವಾಗಿದೆ ಎಂದರು.

ಸ್ವಯಂಸೇವಕರ ಕಠಿಣ ಪರಿಶ್ರಮ ಮತ್ತು ಸೈದ್ಧಾಂತಿಕ ನೀತಿಗಳ ಬದ್ಧತೆಯಿಂದ ಆರ್‌ಎಸ್‌ಎಸ್‌ಗೆ ‘ಅಚ್ಛೇ ದಿನ್’ ಬಂದಿದೆ. ಅಗತ್ಯವಿದ್ದಾಗ ಆರ್‌ಎಸ್‌ಎಸ್ ಸಲಹೆ ನೀಡುತ್ತದೆ. ಅವರು ನಮ್ಮೊಳಗಿಂದ ಬಂದವರಾಗಿರುವುದರಿಂದ ಅವರ ಪಾಪಗಳು ನಮ್ಮ ಮೇಲೆ ಹೊರಿಸಲ್ಪಡುತ್ತವೆ. ರಾಜಕೀಯ ಒತ್ತಡವು ಮತದಾರರಿಂದ ಬರುತ್ತದೆಯೇ ಹೊರತು ಆರ್‌ಎಸ್‌ಎಸ್‌ನಿಂದಲ್ಲ ಎಂದು ಹೇಳಿದ್ದಾರೆ.