ಬಳ್ಳಾರಿ: ಯಾವುದೇ ಸಂದರ್ಭದಲ್ಲಿ ಪತ್ರಕರ್ತರ ಕೆಲಸಕ್ಕೆ ಅಡಿಪಡಿಸುವ ಹಾಗೂ ಸುದ್ದಿ ಮಾಡದಂತೆ ಬೆದರಿಸುವ ಮೂಲಕ ಪತ್ರಕರ್ತರ ದ್ವನಿ ಹತ್ತಿಕ್ಕುವ ಕೆಲಸ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಸಂಡೂರು ಶಾಸಕಿ ಈ ಅನ್ನಪೂರ್ಣ ಅವರು ಕಳವಳ ವ್ಯಕ್ತಪಡಿಸಿದರು. ನಗರದ ನಕ್ಷತ್ರ ಹೋಟೆಲ್ ನಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಿಕೆ ಸಂವಿಧಾನದ ನಾಲ್ಕನೇ ಅಂಗ ಅದರಲ್ಲಿಯೂ ಪ್ರಜಾಪ್ರಭುತ್ವ ಸರಿದಾರಿಯಲ್ಲಿ ಸಾಗಬೇಕಾದರೆ ಪತ್ರಿಕೆ ಅವಶ್ಯಕತೆ ಇದೆ ಮತ್ತು ಜಾಗೃತಿ ಮೂಡಿಸುವ ಜನಸಾಮಾನ್ಯರ ನೊಂದವರು ಶೋಷಿತರ ಪರ ಧ್ವನಿಯಾಗಿ ಪತ್ರಕರ್ತರು ನಿಖರವಾಗಿ ನಿಕ್ಷಪತವಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಆಧುನಿಕ ಎಐ ತಂತ್ರಜ್ಞಾನದಿಂದ ನೈಜತೆಗೆ ಅಡ್ಡಿ
ಈಗಿನ ಎಐ ತಂತ್ರಜ್ಞಾನ ಮುಂದುವರೆದ ಅಭಿವೃದ್ಧಿ ಒಂದೆಡೆ ಖುಷಿ ವಿಚಾರವಾದರೆ ಪತ್ರಿಕೆಯ ನೈಜ ಕಾರ್ಯಕ್ಕೆ ತುಸು ಅಡಚಣೆ ಆಗಿರುವುದು ಬೇಸರದ ಸಂಗತಿ, ಮಾದ್ಯಮಗಳು ರೆಟಿಂಗ್ ಗಾಗಿ ಕೆಲಸ ಮಾಡದೆ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸಬೇಕು ಮುಂದಿನ ದಿನಗಳಲ್ಲಿ ಸಂತ್ರಸ್ತ ಮಹಿಳೆ ಖಾಸಗಿತನ ಹಾಗೂ ಗೌರವಕ್ಕೆ ಧಕ್ಕೆ ಬಾರದಂತೆ ಸುದ್ದಿ ಪ್ರಸಾರ ಮಾಡಬೇಕು ಎಂದು ಕರೆ ನೀಡಿದರು. ಜನಪ್ರತಿನಿಧಿಗಳ ಅಭಿವೃದ್ಧಿ ಮಾಡದೆ ಹೊದರೆ ಪ್ರೇಶ್ನಿಸುವುದು ಪತ್ರಕತರ ಧರ್ಮ, ಹಾಗೆಯೇ ಜನಪ್ರತಿನಿಧಿಗಳು ಸಮಾಜ ಮುಖಿ ಕೆಲಸ ಮಾಡಿದಾಗ ಅದನ್ನು ಸಮಾಜಕ್ಕೆ ತೋರಿಸುವ ಮೂಲಕ ಪ್ರೋತ್ಸಾಹಿಸಿ ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅಂತವರಿಗೆ ಭದ್ರತೆ ಅವಶ್ಯಕತೆ ಇದೆ. ಪತ್ರಕರ್ತರ ದ್ವನಿ ಹತ್ತಿಕ್ಕುವ ಕೆಲಸ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ ಪತ್ರಕರ್ತ ಸೇವೆ ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಬಿ. ಪಂಡಿತ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವುಪೂಜಿ, ರಾಜ್ಯ ಉಪಾಧ್ಯಕ್ಷರಾದ ಸುದೇಶ್ ಕುಮಾರ್, ಕಲ್ಯಾಣ ಮಹಾಸ್ವಾಮಿ, ಮೇಯರ್ ಪಿ. ಗಾದೆಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ, ಮಲ್ಲಿಕಾರ್ಜುನ ಕರ್ಜಿಗಿ ಮಠ, ದತ್ತಾತ್ರಯ ಹೆಗ್ಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
