ವಿಟ್ಲ: ಬಂಟ್ವಾಳ ನೇರಳಕಟ್ಟೆ ಮನೆಯೊಂದರಲ್ಲಿ MDMA ಪತ್ತೆ; ನಾಲ್ವರು ಆರೋಪಿಗಳ ಬಂಧನ. ಪ್ರಕರಣ ದಾಖಲು

ಕರಾವಳಿ

ಬಂಟ್ವಾಳ ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಶ್ರಪ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತು MDMA ಅನ್ನು ಸ್ವಾಧೀನದಲ್ಲಿಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಬಂಟ್ವಾಳ, ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಎಂಬಲ್ಲಿ, ಬಂಟ್ವಾಳ ನಿವಾಸಿ ಅಶ್ರಫ್‌ ಜಿ ಎಂಬಾತನು ವಾಸವಿದ್ದ ಮನೆಗೆ ತೆರಳಿದಾಗ, ಸದ್ರಿ ಆರೋಪಿಗಳಾದ ಹಫೀಝ್‌ ಯಾನೆ ಅಪ್ಪಿ, ಅಫ್ವಾನ್‌ ಮತ್ತು ಅಶ್ರಫ್‌ರವರೊಂದಿಗೆ ಮನೆಯಲ್ಲಿದ್ದು, ಆತನ ಮನೆಯನ್ನು ಪೊಲೀಸರು ಪರಿಶೀಲಿಸಿದಾಗ, 17.97 ಗ್ರಾಂ ತೂಕದ 1,79,700 ಮೌಲ್ಯದ MDMA ಮಾದಕವಸ್ತು, ಚೂರಿ ಹಾಗೂ ಇತರೆ ಸೊತ್ತುಗಳು ಪತ್ತೆಯಾಗಿರುತ್ತದೆ.

ಪತ್ತೆಯಾದ ಸ್ವತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿ, ಅ.ಕ್ರ.ಸಂ: 61/2026, ರಂತೆ ಪ್ರಕರಣ ದಾಖಲಿಸಿಕೊಂಡು, ರೂ 1,79,700/- ಅಂದಾಜು ಮೌಲ್ಯದ 17.97 ಗ್ರಾಂ MDMA ಯೊಂದಿಗೆ, ನಾಲ್ವರು ಆರೋಪಿಗಳ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.