ಪುತ್ತೂರು ತಾಲೂಕು ಆರ್ಯಾಪು ಗ್ರಾಮದಲ್ಲಿ, ಸರ್ಕಾರದ ಯೋಜನೆ ಅಡಿಯಲ್ಲಿ ಮನೆ ಮಂಜೂರಾತಿಗಾಗಿ ಕೊಡಲ್ಪಡುವ 1,50,000 ರೂ. ಹಣವನ್ನು ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಹಣ ಪಡೆದುಕೊಂಡ ಆರೋಪಿರುಗಳಾದ ಬಾಬು ಮೇರಾ, ಜ್ಯೋತಿ ಹಾಗೂ ತನಿಯ ಮೇರಾ ಎಂಬವರುಗಳ ವಿರುದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ, ಅ ಕ್ರ ಸಂಖ್ಯೆ: 57/2019 ರಂತೆ ಪ್ರಕರಣ ದಾಖಲಿಸಲಾಗಿತ್ತು.
ಸದ್ರಿ ಪ್ರಕರಣವನ್ನು ಅ ಸಮಯದಲ್ಲಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ನಿರೀಕ್ಷಕರುಗಳಾಗಿದ್ದ ಉದಯರವಿ ಮತ್ತು ಸಕ್ತಿವೇಲು ರವರು ತನಿಖೆ ನಡೆಸಿ, ಆರೋಪಿತರ ವಿರುದ್ಧ ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸಹಾಯಕ ಸರಕಾರಿ ಅಭಿಯೋಜಕರಾದ ಕುಮಾರಿ ಚೇತನಾ ದೇವಿರವರು ಮಾನ್ಯ ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ಸಮರ್ಥವಾಗಿ ವಾದ ಮಂಡನೆ ನಡೆಸಿದ್ದರು. ಪ್ರಕರಣದ ವಿಚಾರಣೆ ನಡೆದು, ನ್ಯಾಯಾಲಯವು ಆರೋಪಿತರುಗಳಿಗೆ 3 ವರ್ಷ ಸದಾ ಸಜೆ ಹಾಗೂ 5000 ರೂಪಾಯಿ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಮೂರು ತಿಂಗಳ ಕಾಲ ಸದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತದೆ।
