ಅಮೆರಿಕಾದ ಮೂರ್ಖತನ, ಇಸ್ರೇಲಿನ ರಕ್ತದಾಹ, ಮತ್ತು ಮುಗ್ಧ ಜನರ ಹತ್ಯಾಕಾಂಡ
ಲೇಖಕರು: ಇಸ್ಮಾಯಿಲ್ ಎಸ್., ವಕೀಲರು, ಮಂಗಳೂರು
ಇತಿಹಾಸದ ಪುಟಗಳಲ್ಲಿ ಸಾವಿರಾರು ಯುದ್ಧಗಳು ದಾಖಲೆಗಳಾಗಿವೆ. ಈ ಯುದ್ಧಗಳ ಪಟ್ಟಿಗೆ ಹೊಸದಾಗಿ ಸೇರಿರುವುದೇ 2023ರ ಅಕ್ಟೋಬರ್ 7ರಿಂದ ಪ್ರಾರಂಭವಾದ ಗಾಝಾ ಯುದ್ಧ ಮತ್ತು 2026ರ ಫೆಬ್ರವರಿ 28ರಿಂದ ಆರಂಭವಾದ ಅಮೇರಿಕ – ಇಸ್ರೇಲ್ – ಇರಾನ್ ಯುದ್ಧ – ಈ ಎರಡು ಯುದ್ಧಗಳು ಮತ್ತೊಮ್ಮೆ ಅಮಾಯಕ ಜನರನ್ನು ವಿಶೇಷತಃ ಮುಗ್ಧ ಮಕ್ಕಳನ್ನು ಮತ್ತು ಮಹಿಳೆಯರನ್ನು ರಕ್ತದ ಮಡುವಿನಲ್ಲಿ ಮುಳುಗಿಸಿವೆ, ಮಾತ್ರವಲ್ಲದೆ ಇಡೀ ಪ್ರಪಂಚದ ಆರ್ಥಿಕತೆಯನ್ನು ಪಣಕ್ಕಿಟ್ಟಿವೆ. ಅಮೆರಿಕಾದ ಮೂರ್ಖತನ, ಇಸ್ರೇಲಿನ ರಕ್ತದಾಹ, ಮತ್ತು ಮುಗ್ಧ ಜನರ ಹತ್ಯಾಕಾಂಡ – ಇವು ಈ ಆಧುನಿಕ ಜಗತ್ತಿನ ಅತ್ಯಂತ ಕರಾಳ ಅಧ್ಯಾಯಗಳು ಎನ್ನದೆ ವಿಧಿಯಿಲ್ಲ.
ಈ ಲೇಖನವು ಯಾವುದೇ ದೇಶದ ಪರ ಅಥವಾ ವಿರುಧ್ದ ವ ಪರವಾಗಿ ಬರೆದಿಲ್ಲ; ಇದು ಮಾನವತೆಯ ಪರವಾಗಿ, ನೈತಿಕತೆಯ ಪರವಾಗಿ, ಆತ್ಮಸಾಕ್ಷಿಯ ಪರವಾಗಿ ಬರೆದಿರುತ್ತೇನೆ. ಗಾಝಾದಲ್ಲಿನ ಮಕ್ಕಳು, ಇರಾನಿನ 165 ರಷ್ಟು ಮುಗ್ಧ ಕಂದಮ್ಮಗಳು, ನಾಗರಿಕರು, ಲೆಬನಾನಿನ ಜನರು, ಯೆಮೆನಿನ ಹಸಿದ ಮಕ್ಕಳು – ಇವರೆಲ್ಲರ ನೋವು ಒಂದೇ ಪ್ರಶ್ನೆಯನ್ನು ಕೇಳುತ್ತದೆ, ಅದೇನೆಂದರೆ “ನಮ್ಮ ತಪ್ಪು ಏನು?”
ಗಾಝಾ ಯುದ್ಧ: ರಕ್ತದ ಲೆಕ್ಕಾಚಾರ
2023ರ ಅಕ್ಟೋಬರ್ 7ರಂದು, ಹಮಾಸ್ ನೇತೃತ್ವದ ಉಗ್ರಗಾಮಿಗಳು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿ, ಹಲವಾರು ಜನರನ್ನು (ಬಹುಪಾಲು ನಾಗರಿಕರು) ಕೊಂದರು ಮತ್ತು 250ಕ್ಕಿಂತ ಹೆಚ್ಚು ಜನರನ್ನು ಒತ್ತೆಯಾಗಿ ತೆಗೆದುಕೊಂಡರು. ಇದು ಹೋಲೋಕಾಸ್ಟಿನ ನಂತರ ಯಹೂದಿಯರಿಗೆ ಅತ್ಯಂತ ಮಾರಣಹೋಮದ ದಿನವಾಗಿತ್ತು. ಇದರ ವಿರುದ್ಧ ಇಸ್ರೇಲ್ ಹಮಾಸ್ ನ ವಿರುದ್ಧ ಯುದ್ಧ ಘೋಷಿಸಿತು.
ಇಸ್ರೇಲ್ ಹಮಾಸ್ ನ ಸೈನಿಕ ಸಾಮರ್ಥ್ಯ, ಆಡಳಿತ, ಮತ್ತು ಸುರಂಗ ಜಾಲವನ್ನು ನಾಶಮಾಡಲು ದೊಡ್ಡ ಸೈನಿಕ ಅಭಿಯಾನ ಪ್ರಾರಂಭಿಸಿತು. ವ್ಯಾಪಕ ವಾಯುದಾಳಿಗಳು, ನೆಲದ ಕಾರ್ಯಾಚರಣೆಗಳು, ಮತ್ತು ಗಾಝಾದಾದ್ಯಂತ ಸ್ಥಳಾಂತರ ಆದೇಶಗಳು ನಡೆದವು. ಮಕ್ಕಳು, ಮಹಿಳೆಯರು ಸೇರಿದಂತೆ ಮುಗ್ಧ ನಾಗರೀಕರ ಮಾರಣ ಹೋಮವಾಯಿತು.

ಸಾವು-ನೋವುಗಳ ಲೆಕ್ಕಾಚಾರ (2023–2026) ವಿವರ, ಅಂಕಿಅಂಶಗಳು
ಪೆಲೆಸ್ತೀನ್ ಒಟ್ಟು ಸಾವುಗಳು
72,000ಕ್ಕಿಂತ ಹೆಚ್ಚು (UN OCHA)
ಗಾಯಗೊಂಡವರು
1,70,000ಕ್ಕಿಂತ ಹೆಚ್ಚು
ಮಹಿಳೆಯರು ಮತ್ತು ಮಕ್ಕಳು
ಸಾವುಗಳಲ್ಲಿ 50–70%
ನಿರಾಶ್ರಿತರು (ಸ್ಥಳಾಂತರ)
ಗಾಝಾದ 90%ಕ್ಕಿಂತ ಹೆಚ್ಚು ಜನರು
ಕದನ ನಂತರ ಸಾವು (UNICEF)
600–700 ಜನರು (100+ ಮಕ್ಕಳು)
[ಮೂಲ: ಗಾಝಾ ಆರೋಗ್ಯ ಸಚಿವಾಲಯ, UN OCHA, UNICEF, Lancet]
ಗಾಝಾದಲ್ಲಿನ ಆಸ್ಪತ್ರೆಗಳು, ಶಾಲೆಗಳು, ನಿರಾಶ್ರಿತರ ಶಿಬಿರಗಳು ಇತ್ಯಾದಿಗಳ ಮೇಲೆ, ಇಸ್ರೇಲ್ ನಿರ್ಧಯವಾಗಿ ಬಾಂಬಗಳನ್ನು ಸುರಿಸಿ ಮಾನವ ಜೀವಗಳಿಗೆ ಬೆಲೆಯೇ ಇಲ್ಲದಂತೆ ಕೊಂದು ಹಾಕಿತು. ನ್ಯೂಸೆಯಿರತ್ ನಿರಾಶ್ರಿತರ ಶಿಬಿರದ ಮೇಲೆ ದಾಳಿಯಲ್ಲಿ ನೂರಾರು ಕುಟುಂಬಗಳೇ ನಾಶವಾಗಿವೆ. ಮಹಿಳೆಯರು, ಹೆಣ್ಣುಮಕ್ಕಳು, ಗರ್ಭಿಣಿಯರು ಗಾಯಗೊಂಡು ನರಳುತ್ತಿದ್ದಾರೆ. ಕ್ಷಾಮ, ರೋಗ, ಮತ್ತು ಕುಸಿದ ಆರೋಗ್ಯ ವ್ಯವಸ್ಥೆಯಿಂದ ಅಪರೋಕ್ಷ ಸಾವುಗಳು ಇನ್ನೂ ಹೆಚ್ಚಿರಬಹುದು ಎಂದು ಅಧ್ಯಯನ ಹೇಳುತ್ತದೆ. “ಒಂದು ಮಗು ತನ್ನ ತಾಯಿಯ ದೇಹದ ಅಡಿಯಲ್ಲಿ ಅಡಗಿಕೊಂಡು ಸತ್ತಾಗ, ಇನ್ನೊಂದು ತನ್ನ ತಂದೆಯ ಮೃತದೇಹದ ಮೇಲೆ ಅಳುತ್ತಿದೆ – ಇವು ಕೇವಲ ಅಂಕಿಅಂಶಗಳಲ್ಲ, ಇವು ನಿಜವಾದ ಮಾನವರ ನೋವುಗಳು.”
ಇಸ್ರೇಲಿನ ಈ ಎಲ್ಲಾ ಕುಕೃತ್ಯಗಳಿಗೆ ತೆರೆಮರೆಯಲ್ಲಿ ನಿಂತು ಸಹಕಾರ ನೀಡುತ್ತಿರುವುದೇ ಪ್ರಪಂಚದ ದೊಡ್ಡಣ್ಣನೆಂದು ತನ್ನನ್ನೇ ತಾನು ಗುರುತಿಸಿಕೊಂಡಿರುವ ಅಮೇರಿಕ. ಅಮೆರಿಕಾ ಇಸ್ರೇಲಿಗೆ ಪ್ರತಿವರ್ಷ ಸುಮಾರು $3.8 ಬಿಲಿಯನ್ ಸೈನಿಕ ನೆರವು ನೀಡುತ್ತದೆ Iron Dome ಮುಂತಾದ ರಕ್ಷಣಾ ವ್ಯವಸ್ಥೆಗಳಿಗೆ ಅಪಾರ ಪ್ರಮಾಣದ ರಾಕೆಟುಗಳ ಸರಬಾರಜು ಮಾಡುತ್ತಿವೆ. 2023ರ ನಂತರ ಇನ್ನೂ $21.7 ಬಿಲಿಯನ್ ತುರ್ತು ಶಸ್ತ್ರಾಸ್ತ್ರ, ಮದ್ದುಗುಂಡು, ಮತ್ತು ಸಹಾಯಕ ಒದಗಿಸಲಾಗಿದೆ. ವಿಶ್ವಸಂಸ್ಥೆಯಲ್ಲಿ ರಾಜತಾಂತ್ರಿಕ ರಕ್ಷಣೆ, ಗುಪ್ತಚರ ಹಂಚಿಕೊಳ್ಳುವಿಕೆ ಇತ್ಯಾದಿಗಳನ್ನು ಅಮೆರಿಕಾ ತನ್ನ ಅಕ್ರಮ ಸಂತಾನ ಇಸ್ರೇಲಿಗೆ ಒದಗಿಸುತ್ತದೆ. ವಿಮರ್ಶಕರು ಹೇಳುವ ಪ್ರಕಾರ ಈ ನೆರವು ದೀರ್ಘಕಾಲದ ಸಂಘರ್ಷ ಮತ್ತು ನಾಗರಿಕ ಹಾನಿಯನ್ನು ಸಾಧ್ಯವಾಗಿಸುತ್ತದೆ. ಅಮೆರಿಕಾ ಈ ಹಿಂದೆ ಇರಾಕ್, ಅಫ್ಘಾನಿಸ್ತಾನ್, ಲಿಬಿಯಾ ಮುಂತಾದ ಕಡೆ ಮಾಡಿರುವ ತಪ್ಪುಗಳನ್ನು ಮತ್ತೆ ಪುನರಾವರ್ತಿಸಿದೆ. ವೆನಿಜ್ವೇಲಾ ಎಂಬ ಸಾರ್ವಭೌಮ ರಾಷ್ಟ್ರದ ಮೇಲೆ ಅಚಾನಕ್ ದಾಳಿ ಮಾಡಿದ ಅಮೇರಿಕ ಅಲ್ಲಿನ ಅಧ್ಯಕ್ಷರನ್ನು ಅಪಹರಿಸಿ, ಆ ರಾಷ್ಟ್ರದ ಅಧ್ಯಕ್ಷತೆಯನ್ನು ತನ್ನ ಚಮಚಳೊಬ್ಬಳಿಗೆ ನೀಡಿದ ಅಮೇರಿಕ, ಅಂತಾರಾಷ್ಟ್ರೀಯ ಕಾನೂನುಗಳಿಗೆ ಯಾವುದೇ ಬೆಲೆಯಿಲ್ಲ, ವಿಶ್ವಸಂಸ್ಥೆ ಎಂಬುದು ಕೇವಲ ಒಂದು ನಾಮಕಾವಸ್ಥೆ ಸಂಘಟನೆ ಎಂಬ ಧೋರಣೆ ಜಗಜ್ಜಾಹೀರು ಮಾಡಿದೆ. ಸಾಲದೆಂಬಂತೆ ಅಲ್ಲಿನ ತೈಲ ಸಂಪತ್ತನ್ನು ಲೂಟಿ ಮಾಡಲು ತನ್ನ ದೇಶದ ತೈಲ ಕಂಪನಿಗಳಿಗೆ ಸೂಚನೆಯನ್ನು ನೀಡಿದೆ. ತನ್ನಲ್ಲಿ ಇಡೀ ವಿಶ್ವವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಸೈನಿಕ ಬಲವಿದೆ, ಆದ್ದರಿಂದ ವಿಶ್ವದ ಎಲ್ಲಾ ರಾಷ್ತ್ರಗಳು ತನ್ನ ಅಡಿಯಾಳುಗಳಾಗಿ ಇರಬೇಕೆಬುವುದು ಅಮೇರಿಕಾದ ಇಚ್ಛೆಯಾಗಿದೆ. ಇದನ್ನು ಪ್ರತಿರೋಧಿಸುವ ಯಾವುದೇ ವ್ಯಕ್ತಿ ಯಾ ರಾಷ್ತ್ರವನ್ನು ನಿರ್ನಾಮ ಮಾಡುವುದೊಂದೇ ದಾರಿ ಎಂದು ವರ್ತಿಸುತ್ತಿರುವ ಅಮೇರಿಕ ತಾನು ಆಡಿದ್ದೇ ಮಾತು, ತಾನು ನಡೆದದ್ದೇ ದಾರಿ ಎನ್ನುವ ಮನಸ್ಥಿತಿಯಲ್ಲಿದೆ. ಆದರೆ ದುರದೃಷ್ಟವಶಾತ್ ನಮ್ಮ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಅಮೆರಿಕಾದ ಈ ನೀತಿಯನ್ನು ಖಂಡಿಸುವ ಬದಲಾಗಿ, ಅಮೆರಿಕಾಗೆ ಬೆಂಬಲವನ್ನು ನೀಡುತ್ತಾ ಬಂದಿದೆ. ಆದರೆ ಫಲವೆಂಬಂತೆ ಅಮೆರಿಕಾದ ಅಧ್ಯಕ್ಷ ನಾವು ಯಾವಾಗ, ಯಾರಿಂದ, ಏನು ಖರೀದಿ ಮಾಡಬೇಕು ಹಾಗೂ ಎನ್ನನ್ನು ಖರೀದಿ ಮಾಡಬಾರದು ಎಂದು ನಿರ್ದೇಶಿಸುವ ಮಟ್ಟಕ್ಕೆ ಪರಿಸ್ಥಿತಿ ಬಂದು ತಲುಪಿದೆ. ಅಮೇರಿಕ ತಾನು ಏನೇ ಮಾಡಿದರೂ ಯಾರು ಕೇಳುವವರಿಲ್ಲ, ತಾನು ಮಾಡಿದ್ದೆಲ್ಲ ದಕ್ಕುತ್ತದೆ ಎಂಬ ಹುಂಬ ಮನೋಭಾವದೊಂದಿಗೆ ಫೆಬ್ರವರಿ 28, 2026ರಂದು, ಅಮೆರಿಕಾ ತನ್ನ ಜಾರ ಸಂತಾನ ಇಸ್ರೇಲ್ ನೊಂದಿಗೆ ಸೇರಿಕೊಂಡು ಇರಾನ್ ನ ಮೇಲೆ ಸಂಯುಕ್ತ ವಾಯುದಾಳಿಗಳನ್ನು ನಡೆಸಿದವು. Operation Epic Fury (ಅಮೆರಿಕಾ) ಮತ್ತು Operation Roaring Lion (ಇಸ್ರೇಲ್) ಎಂಬ ಹೆಸರಿನ ಈ ದಾಳಿಗಳಲ್ಲಿ ಇರಾನಿನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳು ಹತ್ಯೆಯಾದರು. ಇಸ್ರೇಲ್ 200ಕ್ಕಿಂತ ಹೆಚ್ಚು ಯುದ್ಧ ವಿಮಾನಗಳನ್ನು ಮತ್ತು 1,200 ಬಾಂಬುಗಳನ್ನು ಬಳಸಿತು.
IAEA ಇರಾನಿನಲ್ಲಿ ಸಕ್ರಿಯ ಅಣು ಶಸ್ತ್ರ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಯಾವುದೇ ಸಾಕ್ಷ್ಯವನ್ನು ಕಂಡುಹಿಡಿಯಲಿಲ್ಲ ಎಂದು ಹೇಳಿದ್ದರೂ ಅಮೆರಿಕಾ ಮತ್ತು ಇಸ್ರೇಲ್ ಆಡಳಿತ ಬದಲಾವಣೆ (regime change) ಮತ್ತು ಅಣು ಸಾಮರ್ಥ್ಯ ನಾಶದ ಗುರಿಯನ್ನು ಇಟ್ಟುಕೊಂಡು ದಾಳಿ ಮಾಡಿದ್ದೇವೆ ಎಂದು ಹೇಳಿದ್ಧವು. ಆ ಬಳಿಕ ಅಮೇರಿಕ ಪ್ರತಿನಿತ್ಯ ತನ್ನ ಗುರಿಯ ಬಗೆಗಿನ ಹೇಳಿಕೆಯನ್ನು ಬದಲಾಯಿಸುತ್ತಾ ಹೋಯಿತು. ಯುದ್ಧದ ಮೊದಲ ದಾಳಿಯಲ್ಲೇ ಈ ರಕ್ತ ಪಿಪಾಸು ರಾಷ್ತ್ರಗಳು ಇರಾನಿನ ಹೆಣ್ಣುಮಕ್ಕಳ ಎಲಿಮೆಂಟರಿ ಶಾಲೆಯ ಮೇಲೆ ತೊಮೊಹಾಕ್ ಮಿಸೈಲ್ ದಾಳಿ ನಡೆಸಿ ಸುಮಾರು 165 ರಷ್ಟು ಅಮಾಯಕ ಹೆಣ್ಣುಮಕ್ಕಳನ್ನು ಧಾರುಣವಾಗಿ ಬಲಿತೆಗೆದುಕೊಂಡವು.
ಆದರೆ ಇರಾನ್ ಅಮೇರಿಕ ಹಾಗೂ ಇಸ್ರೇಲ್ ನ ದಾಳಿಗೆ ಬಗ್ಗದೆ ಜಗ್ಗದೆ ಪ್ರತಿದಾಳಿ ನಡೆಸುವ ಮೂಲಕ ಅಮೆರಿಕಾಗೆ ದೊಡ್ಡ ಹೊಡೆದವನ್ನೇ ನೀಡಿದೆ. ಒಂದರ್ಥದಲ್ಲಿ ಹೇಳುವುದಾದರೆ ಯಾವುದೇ ಪೂರ್ವಾಲೋಚನೆ ಇಲ್ಲದೆ ಇರಾನ್ ಮೇಲೆ ದಾಳಿ ನಡೆಸಿದ ಅಮೇರಿಕ ತನ್ನೆರಡೂ ಕಾಲುಗಳಿಗೆ ತಾನೇ ಗುಂಡು ಹೊಡೆದುಕೊಂಡಿದೆ. ಇರಾನ್ ಅಮೇರಿಕಾದ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಅಮೆರಿಕಾಗೆ ನುಂಗಲೂ ಆಗದ ಉಗಿಯಲೂ ಆಗದ ಪರಿಸ್ಥಿತಿ ಏರ್ಪಟ್ಟಿದೆ. ದೊಡ್ಡಣ್ಣನ ವೇಷ ಕಳಚಿ, ಅಮೇರಿಕ ವಿಶ್ವದ ಮುಂದೆ ವಿವಸ್ತ್ರವಾಗಿದೆ.


ಈ ಯುದ್ಧದಲ್ಲಿ ಈ ತನಕ 1,100ಕ್ಕಿಂತ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಇರಾನಿನಲ್ಲಿ 200, ಲೆಬನಾನಿನಲ್ಲಿ 91 ಮಕ್ಕಳು. Minab ಹೆಣ್ಣುಮಕ್ಕಳ ಶಾಲೆಯ ಮೇಲೆ ದಾಳಿಯಲ್ಲಿ 180 ಜನರು ಸತ್ತರು – ಇದು ಮಾನವತೆಯ ಅತ್ಯಂತ ಕರಾಳ ಮುಖಗಳಲ್ಲೊಂದು. 13 ಆಸ್ಪತ್ರೆಗಳನ್ನು ದಾಳಿ ಮಾಡಲಾಗಿದೆ, 5,535 ಮನೆಗಳು ಹಾನಿಗೊಂಡಿವೆ. Golestan Palace ನಂತಹ ಸಾಂಸ್ಕೃತಿಕ ಪರಂಪರೆ ಸ್ಥಳಗಳು ಹಾನಿಗೊಂಡವು — UNESCO ಕಳವಳ ವ್ಯಕ್ತಪಡಿಸಿದೆ.
ಜಾಗತಿಕ ಪರಿಣಾಮಗಳು
ಇರಾನ್ Strait of Hormuz ಅನ್ನು ಮುಚ್ಚಿದೆ, ಇದರಿಂದ ಜಾಗತಿಕ ತೈಲ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ. ತೈಲದ ಬೆಲೆ ಪ್ರತಿ ಬ್ಯಾರಲ್ಗೆ $114ಕ್ಕೆ ಹೆಚ್ಚಿದೆ. Kharg Island ತೈಲ ಟರ್ಮಿನಲ್ ಮೇಲೆ ದಾಳಿ ನಡೆಯುತ್ತಲೇ ಇದೆ. ಇರಾನ್ನಲ್ಲಿ ಅಂತರ್ಜಾಲ ಕೇವಲ 1–4% ಸಂಪರ್ಕತೆಯಲ್ಲಿದೆ – ದೇಶವೇ ಕತ್ತಲೆಯಲ್ಲಿ ಮುಳುಗಿದೆ.
ಆಹಾರ ಬೆಲೆಗಳು ಜಾಗತಿಕವಾಗಿ ಹೆಚ್ಚುತ್ತಿವೆ (ರಸಗೊಬ್ಬರ ಪೂರೈಕೆ ಸರಪಳಿ ಅಸ್ಥಿರತೆಯಿಂದ). ವಿಮಾನಯಾನ ನಿಲ್ಲಿಸಲಾಗಿದೆ, ಪ್ರವಾಸೋದ್ಯಮವು ನಿಂತಿದೆ, ಲಕ್ಷಾಂತರ ಮಕ್ಕಳು ಶಾಲೆಗೆ ಹೋಗಲಾಗದಂತಾಗಿದೆ. ಲೆಲೆಬನಾನಿನಲ್ಲಿ 7,00,000ಕ್ಕಿಂತ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಅಮೆರಿಕಾದ ಮೊದಲ 100 ಗಂಟೆಗಳಲ್ಲಿಯೇ $3.7 ಬಿಲಿಯನ್ ಖರ್ಚು ಮಾಡಿದೆ.
ಈ ಯುದ್ಧ ಯಾವುದೇ ತತ್ವ ನ್ಯಾಯ ನೀತಿ ಆಧಾರದಲ್ಲಿ ನಡೆಯುತ್ತಿದೆ ಯಾರಾದರೂ ಬಗೆದಿದ್ದರೆ ಅದು ತಪ್ಪಾಗುತ್ತದೆ. ಈ ಯುದ್ಧಕ್ಕೆ ನಿಜವಾದ ಕಾರಣಕರ್ತರು ಯಾವು ಎಂಬುದನ್ನು ನೋಡುವುದಾರೆ ಅದರ ಸಂಪೂರ್ಣ ಹೊಣೆಗಾರಿಕೆ ಇಸ್ರೇಲ್’ಗೆ ಸಲ್ಲುತ್ತದೆ. ತನ್ನ ಮೊಸಾದ್ ಸಂಘಟನೆಯ ಮೂಲಕ ವಿಶ್ವದ ನಾಯಕರನ್ನು “Epstein” ಎಂಬ ಕಾಮುಕನ ಮೂಲಕ ತನ್ನ ಬಲೆಗೆ ಸಿಲುಕಿಸಿರುವ ಇಸ್ರೇಲ್, ಈಗ “Epstein” ನ ಮೂಲಕ ಸಂಗ್ರಹಿಸಿರುವ ಧಾಖಲೆಗಳನ್ನು ಬಹಿರಂಗ ಪಡಿಸುವ ಬೆದರಿಕೆಯೊಡ್ಡುತ್ತಾ, ವಿಶ್ವದ ನಾಯಕರುಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿದೆ. ಅದರ ಪರಿಣಾಮವೇ ವಿಶ್ವದ ನಾಯಕರುಗಳು ಆಹ್ವಾನವಿಲ್ಲದಿದ್ದರೂ ಇಸ್ರೇಲ್ ನ ಗುಣಗಾನ ಮಾಡುತ್ತಾ, ಅವರು ಯಾರ ಮೇಲೆ ಆಕ್ರಮಣ ಮಾಡಲು ಹೇಳುತ್ತಾರೋ ಅವರ ವಿರುದ್ಧ ಹಿಂದೂ ಮುಂದೂ ನೋಡದೆ, ಕುರುಡಾಗಿ ದಾಳಿ ಮಾಡುತ್ತಿವೆ. ಇಸ್ರೇಲ್ ಈಗ ವಿಶ್ವವನ್ನು ಎರಡು ಗುಂಪುಗಳಾಗಿ ವಿಂಗಡಣೆ ಮಾಡಿದೆ. ಅವುಗಳೇ “Epstein” ಗುಂಪು ಹಾಗೂ “non-Epstein” ಗುಂಪು. ಹಣ ಬಲ, ಸೈನ್ಯ ಬಲ ಹೊಂದಿರುವ “Epstein” ಗುಂಪನ್ನು, “Non-Epstein” ಗುಂಪುಗಳ ಮೇಲೆ ಛೂ ಬಿಡುತ್ತಿರುವುದರ ಪರಿಣಾಮವೇ ಇಂದಿನ ಈ ಯುದ್ಧ ಎನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ.
ಅಣುಯುದ್ಧದ ಭೀತಿ:ಮಾನವ ನಾಗರಿಕತೆಗೆ ಅಂತಿಮ ಆಪತ್ತು
ಇಸ್ರೇಲ್ ಅಣು ಶಸ್ತ್ರಗಳನ್ನು ಹೊಂದಿದೆ. ಇರಾನ್, ಪಾಕಿಸ್ತಾನ್, ಉತ್ತರ ಕೊರಿಯಾ – ಈ ಪ್ರದೇಶದಲ್ಲಿ ಅಣು ಶಕ್ತಿಗಳ ಉಪಸ್ಥಿತಿ ಇದೆ. ಹೀಗಿರುವಾಗ ಈ ಯುದ್ಧ ಅಣುಯುದ್ಧಕ್ಕೆ ಹೊರಳಿದರೆ? ಹಿರೋಶಿಮಾ ಮತ್ತು ನಾಗಸಾಕಿ ನಮಗೆ ಇತಿಹಾಸದ ಪಾಠ ಕಲಿಸಿವೆ. ಒಂದು ಅಣುಬಾಂಬ್ನ ಸ್ಫೋಟ ಇಡೀ ಪ್ರಪಂಚದ ಅಂತ್ಯದ ಆರಂಭವಾಗಬಹುದು. ನಗರಗಳು ಸರ್ವನಾಶವಾಗುತ್ತವೆ, ವಿಕಿರಣ ದಶಕಗಳಕಾಲ ಭೂಮಿಯನ್ನು ವಿಷಮಯಮಾಡುತ್ತದೆ, ಎಲ್’ನೈನೋ ಎಂಬ ಭಯಾನಕ ವಿದ್ಯಮಾನ ಸತ್ಯವಾಗುತ್ತದೆ. ಈ ಆಪತ್ತು ಕೇವಲ ಯುದ್ಧಮಾಡುವ ದೇಶಗಳಿಗೆ ಮಾತ್ರವಲ್ಲ, ಇಡೀ ಪ್ರಪಂಚಕ್ಕೇ.
“ಒಂದು ಅಣು ಬಾಂಬಿನ ಸ್ಫೋಟ ಇಡೀ ಪ್ರಪಂಚದ ಅಂತ್ಯದ ಆರಂಭವಾಗಬಹುದು; ಅದು ಮಾನವ ನಾಗರಿಕತೆಯ ಕೊನೆಯ ಅಧ್ಯಾಯವಾಗಬಹುದು.”

ನೈತಿಕ ಚಿಂತನೆ: ಮಾನವತೆ ಎಲ್ಲಿದೆ? ಧರ್ಮಗ್ರಂಥಗಳು ಯುದ್ಧವನ್ನು ನಿಷೇಧಿಸುತ್ತವೆ. ಪವಿತ್ರ ಕುರಾನ್ “ಒಂದು ಜೀವನನ್ನು ಕೊಲ್ಲುವವನು ಇಡೀ ಮಾನವಕುಲವನ್ನೇ ಕೊಂದಂತೆ” ಎಂದು ಸ್ಪಷ್ಟವಾಗಿ ಹೇಳುತ್ತದೆ (ಸೂರತುಲ್ ಮಾಇದಾ 5:32). ಬೈಬಲ್, ಗೀತೆ, ಧಮ್ಮಪದ – ಎಲ್ಲವೂ ಶಾಂತಿಯನ್ನು ಬೋಧಿಸುತ್ತವೆ. ಆದರೆ ಈ ಬೋಧನೆಗಳನ್ನು ಅಧಿಕಾರದಲ್ಲಿರುವವರು ಮರೆತಿದ್ದಾರೆ. 52% ಅಮೆರಿಕನ್ನರೇ ಈ ಯುದ್ಧದ ವಿರುದ್ಧವಾಗಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತವೆ. ಆದರೆ ಅಧಿಕಾರದಲ್ಲಿರುವವರು ಜನರ ಧ್ವನಿಯನ್ನು ಕೇಳುತ್ತಿಲ್ಲ. Congress War Powers Resolution ವಿಫಲವಾಗಿದೆ; ಪ್ರಜಾಪ್ರಭುತ್ವ ವಿಫಲವಾಗಿದೆ. ಜನರ ಇಚ್ಛೆಯ ವಿರುದ್ಧ ನಾಯಕರು ನಡೆಯುತ್ತಿದ್ದಾರೆ – ಇದು ಪ್ರಜಾಪ್ರಭುತ್ವದ ಅಪಹಾಸ್ಯ.
ಶಾಂತಿಯ ಕರೆ: ನಮ್ಮ ಕರ್ತವ್ಯ
ಶಾಂತಿಯು ಆಕಾಶದಿಂದ ಬೀಳುವುದಿಲ್ಲ; ಅದನ್ನು ನಾವು ನಿರ್ಮಿಸಬೇಕು. ರಕ್ಷಣೆ ಮತ್ತು ಸುರಕ್ಷತೆ – ಈ ಎರಡನ್ನೂ ಸಾಧಿಸಲು ಮಾತುಕತೆಯ ಮಾರ್ಗವೇ ಉತ್ತಮ. ಅಂತರರಾಷ್ಟ್ರೀಯ ಸಂಸ್ಥೆಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಹಿಂಸೆಯ ಚಕ್ರವನ್ನು ನಿಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ನಾವೆಲ್ಲರೂ ಒಂದೇ ಮಾನವ ಕುಟುಂಬದ ಸದಸ್ಯರು ಎಂದು ನೆನಪಿಡೊಣ. ಗಾಝಾದ ಮಗುವಿನ ನೋವು, ಇರಾನ್ನ ಹೆಣ್ಣುಮಗುವಿನ ನೋವು, ಲೆಬನಾನಿನ ತಾಯಿಯ ನೋವು – ಇವೆಲ್ಲವೂ ನಮ್ಮದೇ ನೋವುಗಳು. ಯುದ್ಧವು ಏನನ್ನೂ ಪರಿಹರಿಸುವುದಿಲ್ಲ, ಅದು ಎಲ್ಲವನ್ನೂ ನಾಶಮಾಡುತ್ತದೆ. ಹಾಗಾಗಿ, ಧ್ವನಿ ಎತ್ತೊಣ – ಯುದ್ಧವನ್ನು ನಿಲ್ಲಿಸಿ, ಶಾಂತಿಯನ್ನು ಬೇಡಿ. ಅಮಾಯಕ ಜನರ ರಕ್ತದಲ್ಲಿ ಅಧಿಕಾರದ ಕೈಗಳು ತೊಳೆದಿವೆ. ನಾವು ಮೌನವಾಗಿದ್ದರೆ, ನಮ್ಮ ಮೌನವು ಅನ್ಯಾಯಕ್ಕೆ ಸಮ್ಮತಿಯಾಗುತ್ತದೆ. ಹಾಗಾಗಿ, ಧ್ವನಿ ಎತ್ತೊಣ — ಯುದ್ಧವನ್ನು ನಿಲ್ಲಿಸಿ, ಶಾಂತಿಯನ್ನು ಬೇಡಿ.
