ಅಕ್ರಮವಾಗಿ ಸರಿ-ಸುಮಾರು 328 ಮೂತ್ರಪಿಂಡ ಕಸಿ ಮಾಡಿದ್ದ ವೈದ್ಯ ಮತ್ತು ಮೋಟಾರ್ ಮೆಕ್ಯಾನಿಕ್ ನಡೆಸುತ್ತಿದ್ದ ಅಂಗಾಂಗ ಕಳ್ಳಸಾಗಣೆ ಜಾಲವನ್ನು ಪಾಕಿಸ್ತಾನ ಪೊಲೀಸರು ಭೇದಿಸಿದ್ದಾರೆ.ವೈದ್ಯ ಫವಾದ್ ಮುಖ್ತಾರ್ ಬಂಧಿತ ಆರೋಪಿ. ದುಷ್ಕೃತ್ಯಕ್ಕಾಗಿ ಈಗಾಗಲೇ ಐದು ಬಾರಿ ಈತನನ್ನು ಬಂಧಿಸಲಾಗಿತ್ತು. ಆಸ್ಪತ್ರೆಗಳಿಂದ ಆಮಿಷವೊಡ್ಡಿ ದುರ್ಬಲ ರೋಗಿಗಳಿಗೆ ಶಸ್ತ್ರಚಿಕಿತ್ಸಾ ಸಹಾಯಕ ಮತ್ತು ಅರಿವಳಿಕೆ ತಜ್ಞನಾಗಿ ಮೆಕ್ಯಾನಿಕ್ ನನ್ನು ವೈದ್ಯ ಬಳಸಿಕೊಳ್ಳುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಖಾಸಗಿ ಮನೆಗಳಲ್ಲಿ ಕಿಡ್ನಿ ಕಸಿ ನಡೆಸಲಾಗುತಿತ್ತು. ಕೆಲವೊಮ್ಮೆ ರೋಗಿಗೆ ತಿಳಿಯದೆ, ಪ್ರತಿ ಮೂತ್ರಪಿಂಡಗಳನ್ನು 35,000 ಡಾಲರ್ ಗಳಿಗೆ ಮಾರಾಟ ಮಾಡುತ್ತಿದ್ದರು.ಬಂಧಿತ ಎಂಟು ಜನರ ಗ್ಯಾಂಗ್ ಪೂರ್ವ ಪಂಜಾಬ್ ಪ್ರಾಂತ್ಯದಾದ್ಯಂತ ಹಾಗೂ ಪಾಕಿಸ್ತಾನ-ಆಡಳಿತದ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಲಾಗಿದ್ದು, ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದಾರೆ.
ಇದಕ್ಕಿಂತಲೂ ಹೆಚ್ಚು ಮೂತ್ರಪಿಂಡ ಕಸಿ ಮತ್ತು ಅಕ್ರಮ ಶಸ್ತ್ರಚಿಕಿತ್ಸೆ ಮಾಡಲಾಗಿವೆ.ಇವುಗಳಲ್ಲಿ ಇದನ್ನು ಮಾತ್ರ ದೃಢಪಡಿಸಿದ್ದೇವೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಲ್ಲಿ 2010 ರಿಂದ ಮಾನವ ಅಂಗಗಳ ಮಾರಾಟ ಕಾನೂನುಬಾಹಿರಗೊಳಿಸಿತ್ತು. ಅಲ್ಲದೇ 10 ವರ್ಷಗಳ ಜೈಲು ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ.