ಉಜಿರೆ: ಸರ್ವಧರ್ಮದ ಭಾವೈಕ್ಯತೆಯಿಂದ ನಡೆದ ಉಜಿರೆಯ ಬ್ರಹ್ಮಕಲಶಕ್ಕೆ ಸ್ನೇಹಿತರ ಜೊತೆಗೂಡಿ ತೆರಳಿದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯ ಮೇಲೆ ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ನಡೆಸಿದ ಸಂಘಪರಿವಾರದ ಅನೈತಿಕ ಪೋಲಿಸ್ ಗಿರಿ ಅತ್ಯಂತ ಖಂಡನೀಯ.
ಸರ್ವಜನಾಂಗದ ಶಾಂತಿಯ ತೋಟವನ್ನು ಹಾಳುಗೇಡುವುವ ಸಂಘಪರಿವಾರದ ಕುತಂತ್ರ ಮತ್ತು ಶಾಸಕರ ದ್ವೇಷಕೋರತನದ ಭಾಗವಾಗಿ ಸಂಘಿ ಗೂಂಡಾಗಳು ಕಾನೂನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಉಜಿರೆ ಬ್ರಹ್ಮಕಲಶವು ಹಿಂದೂ , ಮುಸ್ಲಿಂ, ಕ್ರೈಸ್ತ ಸಮುದಾಯದ ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಇದನ್ನು ಸಹಿಸದ ಸಂಘಪರಿವಾರ ಕಾರ್ಯಕ್ರಮಕ್ಕೆ ಧಕ್ಕೆ ತರಲು ಮತ್ತು ರಂಜಾನ್ ಉಪವಾಸ ತಿಂಗಳಲ್ಲಿ ಗಲಭೆ ಸೃಷ್ಟಿಸಲು ಪೂರ್ವಭಾವಿಯಾಗಿ ನಿರ್ಧರಿಸಿ ಈ ಸಂಘಟಿತ ಗೂಂಡಾಗಿರಿ ನಡೆಸಿದೆ. ಸಂಘಪರಿವಾರವು ನಿರಂತರವಾಗಿ ಜನರ ನೆಮ್ಮದಿಯ ಬದುಕಿಗೆ ಹುಳಿ ಹಿಂಡಿ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿರುವುದು ಅಪಾಯಕಾರಿ ಬೆಳವಣಿಗೆ.
ಕಾಲೇಜ್ ವಿದ್ಯಾರ್ಥಿಯಾಗಿದ್ದ ಆತನಿಗೆ ಬ್ರಹ್ಮಕಲಶದ ಸಂದರ್ಭದಲ್ಲಿ ಮಾತಿಗೆ ಸಿಕ್ಕಿದ ಸಹಪಾಠಿಗಳೊಂದಿಗೆ ಮಾತನಾಡಿದನ್ನು ನೆಪವಾಗಿಟ್ಟುಕೊಂಡು ಈ ರೀತಿಯಲ್ಲಿ ಹಲ್ಲೆ ನಡೆಸುವುದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಾತಿ, ಧರ್ಮಕ್ಕೊಂದು ಧಾರ್ಮಿಕ ಕೇಂದ್ರಗಳು ಇರುವಂತೆ ಜಾತಿ, ಧರ್ಮಕ್ಕೊಂದು ಶಾಲಾ ಕಾಲೇಜುಗಳನ್ನು ನಿರ್ಮಾಣ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಧರ್ಮ, ದೇವರ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡು ಅನೈತಿಕ ಗೂಂಡಾಗಿರಿ ನಡೆಸಿದ ಸಂಘಪರಿವಾರದ ಗೂಂಡಾಗಳನ್ನು ಗೂಂಡಾ ಕಾಯ್ದೆಯಡಿ ತಕ್ಷಣ ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.
