ಬಿಎಸ್ ಯಡಿಯೂರಪ್ಪರವರ ಮೇಲೆ ಮಹಿಳೆ ಒಬ್ಬರು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ದೂರು ನೀಡಿರೋ ಮಹಿಳೆ ಇದೇ ಮೊದಲ ಬಾರಿಗೆ ಠಾಣೆ ಮೆಟ್ಟಿಲೇರಿಲ್ಲ. ಈ ಹಿಂದೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಅಲೋಕ್ ಕುಮಾರ್ , ಹಿರಿಯ ರಾಜಕಾರಣಿ ಉಗ್ರಪ್ಪ ಸೇರಿದಂತೆ ಹಲವು ಉದ್ಯಮಿಗಳು ಮತ್ತು ವ್ಯಕ್ತಿಗಳ ಮೇಲೆ ಈ ಮಹಿಳೆ ದೂರು ನೀಡಿದ್ದಾರೆ.
ಮಾಜೀ ಮುಖ್ಯಮಂತ್ರಿ ಮನೆಗೆ ಸಹಾಯ ಕೇಳಿಕೊಂಡು ಹೋದಾಗ ಬಿಎಸ್ ಯಡಿಯೂರಪ್ಪ ಖುದ್ದು ಕಮಿಷನರ್ ಸಾಹೇಬರಿಗೆ ಪೋನ್ ಮಾಡಿ ಈ ಮಹಿಳೆಗೆ ಸಹಾಯ ಮಾಡಿ ಅವರಿಗೆ ಅನ್ಯಾಯ ಆಗಿದೆ ಎಂದು ಫೋನ್ ಮೂಲಕ ಕಮಿಷನರ್ ಸಾಹೇಬರಲ್ಲಿ ಮಾತನಾಡಿದ್ದಾರೆ. ಇನ್ನೂ ಈ ಮಹಿಳೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಬಳಿ ಸಹಾಯ ಕೇಳಿಕೊಂಡು ಹೋದಾಗ ಅವರಿಂದ ಸಹಾಯ ಆಗದಿದ್ರೆ ಈ ರೀತಿ ಅವರ ಮೇಲೆ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
