ಕ್ಯಾನ್ಸರ್ ಕುರಿತು ದೊಡ್ಡ ಮಟ್ಟದ ಜಾಗೃತಿಗಳು ಭಾರತದಲ್ಲಿ ನಡೆಯುತ್ತಿವೆ. ಆದರೂ ಭಾರತದಲ್ಲಿ ಕ್ಯಾನ್ಸರ್ಗಳ ಪತ್ತೆ ದಿನದಿಂದ ದಿನಕ್ಕೆ ಏರುತ್ತಿದೆ ಮಾತ್ರವಲ್ಲ ಭಾರತದಲ್ಲಿ ಅಪಾಯದ ಮಟ್ಟ ಮೀರಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತ ಕ್ಯಾನ್ಸರ್ನ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ. 2024 ರ ವಿಶ್ವ ಆರೋಗ್ಯ ದಿನದಂದು ಬಿಡುಗಡೆಯಾದ ಅಪೊಲೊ ಆಸ್ಪತ್ರೆಗಳ ‘ಹೆಲ್ತ್ ಆಫ್ ನೇಷನ್’ ವರದಿಯ 4 ನೇ ಆವೃತ್ತಿಯು ಭಾರತವನ್ನು “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂದು ಕರೆದಿದೆ.
ಮೂವರು ಭಾರತೀಯರಲ್ಲಿ ಒಬ್ಬರು ಪೂರ್ವ ಮಧುಮೇಹದಿಂದ ಬಳಲುತ್ತಿದ್ದರೆ, ಮೂವರಲ್ಲಿ ಇಬ್ಬರು ಪೂರ್ವ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. 10ರಲ್ಲಿ ಒಬ್ಬರು ಖಿನ್ನತೆಗೆ ಒಳಗಾದರೆ. ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳು ನಿರ್ಣಾಯಕ ಮಟ್ಟ ತಲುಪಿದೆ. ಇದು ರಾಷ್ಟ್ರದ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದ

ಕ್ಯಾನ್ಸರ್ ಪ್ರಕರಣಗಳ ಉಲ್ಬಣವು ಭಾರತದಲ್ಲಿ ಮಿತಿಮೀರಿದೆ ಮತ್ತು “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂಬ ಬಿರುದು ಬರುವಂತೆ ಮಾಡಿದೆ ಎಂಬುದೇ ಬಹಳ ಆತಂಕಕಾರಿ ವಿಷಯ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಅಂಡಾಶಯದ ಕ್ಯಾನ್ಸರ್, ಸಾಮಾನ್ಯ ಕ್ಯಾನ್ಸರ್. ಪುರುಷರಲ್ಲಿ, ಶ್ವಾಸಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿವೆ.
ಇತರ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಕ್ಯಾನ್ಸರ್ ವಕ್ಕರಿಸಿಕೊಳ್ಳುತ್ತಿದೆ. ಸ್ತನ ಕ್ಯಾನ್ಸರ್ ರೋಗ ನಿರ್ಣಯಕ್ಕೆ ಸರಾಸರಿ 52 ವರ್ಷವಾದರೆ, ಶ್ವಾಸಕೋಶದ ಕ್ಯಾನ್ಸರ್ಗೆ ಸರಾಸರಿ 54 ವರ್ಷವಾಗಿದೆ. ಆದರೆ, ಯುಎಸ್, ಯುಕೆ ಮತ್ತು ಚೀನಾದಲ್ಲಿ ರೋಗನಿರ್ಣಯದ ವಯಸ್ಸು 60 ಮತ್ತು 70 ವರ್ಸದ ಆಸುಪಾಸಿನಲ್ಲಿದೆ. ವರದಿಯ ಪ್ರಕಾರ, ಕ್ಯಾನ್ಸರ್ ವಿರುದ್ಧದ ಭಾರತದ ಹೋರಾಟದಲ್ಲಿ ಗಮನಾರ್ಹ ಅಡಚಣೆಯೆಂದರೆ ಅದರ ಅಸಮರ್ಪಕ ತಪಾಸಣೆ. ಇದು ಜಾಗತಿಕ ಮಾನದಂಡಗಳಿಗಿಂತ ಬಹಳ ಕಡಿಮೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಸಾಮಾನ್ಯ ಜೀವಕೋಶಗಳು ಬಹು-ಹಂತದ ಪ್ರಕ್ರಿಯೆಯ ಮೂಲಕ ಗೆಡ್ಡೆಯ ಕೋಶಗಳಾಗಿ ರೂಪಾಂತರಗೊಳ್ಳುವುದರಿಂದ ಕ್ಯಾನ್ಸರ್ ಬೆಳೆಯುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ತನ್ನ ಪೂರ್ವ ಸ್ಥಿತಿಯಿಂದ ಮಾರಣಾಂತಿಕವಾಗಿ ಮುಂದುವರಿಯುತ್ತದೆ. ಈ ಬದಲಾವಣೆಗಳು ವ್ಯಕ್ತಿಯ ಆನುವಂಶಿಕ ರಚನೆ ಮತ್ತು ಬಾಹ್ಯ ಅಂಶಗಳಿಂದ ಉಂಟಾಗುತ್ತದೆ.
ಅಯೋನೈಜಿಂಗ್ ವಿಕಿರಣದಂತಹ ಭೌತಿಕ ಕ್ಯಾನ್ಸರ್ ಕಾರಕಗಳು.
ತಂಬಾಕಿನ ಹೊಗೆಯಲ್ಲಿ ಕಂಡುಬರುವ ಘಟಕಗಳು, ಆಲ್ಕೋಹಾಲ್, ಅಫ್ಲಾಟಾಕ್ಸಿನ್ (ಆಹಾರದಲ್ಲಿನ ಮಾಲಿನ್ಯ ) ಮತ್ತು ಆರ್ಸೆನಿಕ್ (ಕುಡಿಯುವ ನೀರಿನಲ್ಲಿ ಮಾಲಿನ್ಯಕಾರಕ) ಸೇರಿದಂತೆ ಇನ್ನೂಹಲವು ರಾಸಾಯನಿಕ ಕ್ಯಾನ್ಸರ್ ಕಾರಕಗಳು.
ನಿರ್ದಿಷ್ಟ ವೈರಸ್ ಗಳು, ಬ್ಯಾಕ್ಟೀರಿಯಾ ಅಥವಾ ಪರಾವಲಂಬಿಗಳಿಂದ ಉಂಟಾಗುವ ಸೋಂಕುಗಳಂತಹ ಜೈವಿಕ ಕ್ಯಾನ್ಸರ್ ಕಾರಕಗಳು. ನಿಯಮಿತ ಆರೋಗ್ಯ ತಪಾಸಣೆಯ ಮಹತ್ವವನ್ನು ಎತ್ತಿ ತೋರಿಸಿದೆ. ರಕ್ತದೊತ್ತಡ ಮತ್ತು ಬಾಡಿ ಮಾಸ್ ಇಂಡೆಕ್ಸ್ ಮಟ್ಟಗಳ ಬಗ್ಗೆ ನಿಗಾ ಇಡುವ ಮೂಲಕ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬೇಕು ಎಂದು ಹೇಳಿದೆ. ಆರೋಗ್ಯ ತಪಾಸಣೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಹೆಚ್ಚಾಗಬೇಕು ಎಂದು ಹೇಳಿದೆ.
