ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದಲ್ಲಿ ಆ್ಯಕ್ಟಿವಾಗೆ ಡಿಕ್ಕಿ‌ ಹೊಡೆದು ಪರಾರಿಯಾದ ಕಾರು..

ಕರಾವಳಿ

ಸವಾರ ಇನ್ಫೋಸಿಸ್ ಸೆಕ್ಯೂರಿಟಿ ಉದ್ಯೋಗಿ ಚಿದಾನಂದ ಕಾಮತ್ ಸ್ಥಳದಲ್ಲೇ ಸಾವು.

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಬಳಿ ಆಕ್ಟಿವಾಗೆ ಡಿಕ್ಕಿ ಹೊಡೆದು ಕಾರು ಎಸ್ಕೇಪ್. ಪುತ್ತೂರಿನ ನೆಹರೂನಗರದ ಕಲ್ಲೇಗ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಡಿಪು ಇನ್ಫೋಸಿಸ್ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಚಿದಾನಂದ ಕಾಮತ್ ಅವಿವಾಹಿತರಾಗಿದ್ದು ತನ್ನ ತಾಯಿ ಜೊತೆ ವಾಸವಾಗಿದ್ದಾರೆ.
ಮೃತರು ತಾಯಿ, ವಿವೇಕಾನಂದ ಕಾಲೇಜು ಉಪನ್ಯಾಸಕ ರಮಾನಂದ ಕಾಮತ್, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಕಟ್ಟಡದಲ್ಲಿರುವ ಕಾಮತ್ಸ್ ಸ್ವೀಟ್ಸ್ ಮಾಲಕ ಮಂಜುನಾಥ್ ಕಾಮತ್ ಸಹಿತ ಐವರು ಸಹೋದರರನ್ನು ಅಗಲಿದ್ದಾರೆ.

ಘಟನೆ ಸಂಬಂಧ ಬಂಟ್ವಾಳ ಸಂಚಾರಿ ಠಾಣೆಯಲ್ಲಿ 304A ಪ್ರಕರಣ ದಾಖಲಾಗಿದ್ದು ಆಕ್ಟಿವಾ ಸವಾರನ ಸಾವಿಗೆ ಕಾರಣವಾಗಿ ಪರಾರಿಯಾದ ಕಾರಿನ ಪತ್ತೆ ಕಾರ್ಯದಲ್ಲಿ ಬಂಟ್ವಾಳ ಪೊಲೀಸರು ನಿರತರಾಗಿದ್ದಾರೆ.