ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(CITU) ದ.ಕ.ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ 19-22-2024ರಂದು ಮಂಗಳೂರು ಮಿನಿ ವಿಧಾನ ಸೌಧದ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ಘಾಟಿಸುತ್ತಾ ಸಂಘದ ಜಿಲ್ಲಾಸಮಿತಿಯ ಗೌರವ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿರುವಂತೆ ಬಿಸಿಯೂಟ ನೌಕರರಿಗೆ ಮಾಸಿಕ ವೇತನ ರೂ, 6000 ಕೂಡಲೇ ಏರಿಸಬೇಕು. ನಿವೃತ್ತ ನೌಕರರಿಗೆ ಒಪ್ಪಿಕೊಂಡಂತೆ ಇಡಿಗಂಟು ವಿತರಣೆ ಮಾಡಬೇಕು. 2014ರಿಂದ ಕೇಂದ್ರ ಸರಕಾರ ಅನುದಾನವನ್ನೇ ನೀಡದಿರುವುದು ಖಂಡನೀಯವೆಂದ ಅವರು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡು ಬಿಸಿಯೂಟ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಯಂತಿ ಬಿ ಶೆಟ್ಟಿಯವರು ಮಾತನಾಡುತ್ತಾ ಮಹಿಳಾ ಕಾರ್ಮಿಕರಿಗೆ ಆರ್ಥಿಕ ಸ್ವಾತಂತ್ರ್ಯ ನೀಡದೆ ಮಹಿಳಾ ಸಬಳಿಕರಣ ಅಸಾದ್ಯ. ಅವರ ವೇತನ ಏರಿಕೆ, ಸಮಾನ ಕೆಲಸಕ್ಕೆ ಸಮಾನ ವೇತನ, ಕೆಲಸ ಮಾಡುವ ಸ್ಥಳಗಳಲ್ಲಿ ರಕ್ಷಣೆ ನೀಡುವುದು, ಸಾಮಾಜಿಕ ಭದ್ರತೆ ನೀಡುವುದರಿಂದ ಇದು ಸಾದ್ಯ. ಅಕ್ಷರದಾಸೋಹ ನೌಕರರ ವೇತನ ತೀರಾ ಕಡಿಮೆ ಇದೆ.ಅವರಿಗೆ ಗೌರವ ಘನತೆಯ ಬದುಕು ನೀಡಲು ಸಾದ್ಯವಾಗಬೇಕೆಂದರು.

ಜಿಲ್ಲಾಧ್ಯಕ್ಷರಾದ ಭವ್ಯರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ಗಿರಿಜರವರು ಸ್ವಾಗತಿಸಿ, ರತ್ನಮಾಲ ದನ್ಯವಾದಗೈದರು. ತಹಶೀಲ್ದಾರರಿಗೆ ಮನವಿ ನೀಡಲಾಯಿತು.