ಹಿಂದೂ ಧರ್ಮ ವಿರೋಧಿ ಧೋರಣೆ ಜಗದೀಶ್ ಶೆಟ್ಟರ್ ಸರ್ಕಾರವೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ

ಕರಾವಳಿ

ಪೂಂಜಾರಿಗೆ ತಾಕತ್ತಿದ್ದರೆ 2013 ರ ಬಿಜೆಪಿ ನೇತೃತ್ವದ ಜಗದೀಶ್ ಶೆಟ್ಟರ್ ಅವರ ಸರ್ಕಾರವನ್ನು ಟೀಕಿಸಿ‌ ಗಂಡಸ್ತನ ತೋರಿಸಲಿ: ಶೇಖರ್ ಎಲ್. ಸಿಪಿಐ(ಎಂ) ಮುಖಂಡರು

ಶಾಲಾ ಮೈದಾನ ಸೇರಿದಂತೆ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರ್ಕಾರ ದಿನಾಂಕ 7-2-2013 ರಂದು ಆದೇಶ ಹೊರಡಿಸಿದರೂ ಕೂಡ 6 ವರ್ಷಗಳ ಕಾಲ ಶಾಸಕನಾಗಿರುವ ಶಾಸಕ ಹರೀಶ್ ಪೂಂಜಾರಿಗೆ ಇನ್ನೂ ತಿಳಿಯದಿರುವುದು ಜಗತ್ತಿನ ಅತ್ಯಂತ ದೊಡ್ಡ ಅಜ್ಞಾನಿ ಎಂಬುದಕ್ಕೆ ಸಾಕ್ಷಿ.

ಬುಧವಾರ ಮಂಗಳೂರಿನಲ್ಲಿ ಮಾದ್ಯಮಗೊಂದಿಗೆ ಮಾತನಾಡುತ್ತಾ ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಆಚರಣೆಗೆ ತಡೆ ಎಂಬ ರೀತಿಯಲ್ಲಿ ಅಜ್ಞಾನಿಗಳಂತೆ ಮಾತನಾಡಿದ್ದಾರೆ. ನಿಜವಾಗಿಯೂ ಇದು ನಿಮ್ಮದೇ ಬಿಜೆಪಿ ಪಕ್ಷದ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರ ಹೊರಡಿಸಿದ ಸುತ್ತೋಲೆಯೇ ಹೊರತು ಈಗಿನ ಸರ್ಕಾರ ಹೊರಡಿಸಿದ ಸುತ್ತೋಲೆ ಅಲ್ಲ. ಪ್ರತಿಯೊಂದು ವಿಚಾರದಲ್ಲಿಯೂ ಪತ್ರಿಕಾ- ಮಾಧ್ಯಮಗಳಲ್ಲಿ ಹೆಸರು ಬರಲು ಅವಿವೇಕಿಗಳಂತೆ ಮಾತನಾಡುವ ಮೂಲಕ ವಿದ್ಯಾವಂತ, ಬುದ್ಧಿವಂತ ದ.ಕ ಜಿಲ್ಲೆಯ ಹೆಸರು ಕೆಡಿಸುವ ಕೆಲಸ ಮಾಡಬೇಡಿ. ಒಬ್ಬ ಶಾಸಕನಾಗಿ , ಅದರಲ್ಲೂ ಒಬ್ಬ ವಕೀಲನಾಗಿ ಈ ರೀತಿ ಅವಿವೇಕಿಗಳಂತೆ ತಮ್ಮ ಪಕ್ಷದ ತಪ್ಪನ್ನು ಮರೆಮಾಚಲು ಸುಳ್ಳು ಅಪಪ್ರಚಾರ ನಡೆಸುವುದು ನಮ್ಮ ಜಿಲ್ಲೆಯ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಇಟ್ಟಂತೆ.

ಕಡಬ ತಾಲೂಕಿನ ಸರ್ಕಾರಿ ಹಿ.ಪ್ರಾ ಶಾಲೆಯೊಂದರಲ್ಲಿ 2013 ರಲ್ಲಿ ಬಿಜೆಪಿ ಪಕ್ಷದ ಸರ್ಕಾರ ಹೊರಡಿಸಿದ ನಿಯಮಗಳನ್ನು ಉಲ್ಲಂಘಿಸಿ RSS ನ ಕಾರ್ಯಕ್ರಮ ನಡೆಸಿದ ಬಗ್ಗೆ ದ.ಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹೊರಡಿಸಿದ ಮರು ಆದೇಶವನ್ನು ಉಲ್ಲೇಖಿಸಿ ಈಗಿನ ಸರ್ಕಾರವನ್ನು ಟೀಕಿಸುವ ಬದಲಾಗಿ ದಮ್ಮು , ತಾಕತ್ತಿದ್ದರೆ 2013 ರ ಬಿಜೆಪಿ ನೇತೃತ್ವದ ಜಗದೀಶ್ ಶೆಟ್ಟರ್ ಅವರ ಸರ್ಕಾರವನ್ನು ಟೀಕಿಸಿ‌ ನಿಮ್ಮ ಗಂಡಸ್ತನವನ್ನು ತೋರಿಸಿದರೆ ಒಳ್ಳೆಯದು. ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಹಬ್ಬ ಹರಿದಿನಗಳನ್ನು ಆಚರಿಸಲು ದೇಶದ ಸಂವಿಧಾನದಲ್ಲಿಯೇ ಅವಕಾಶವಿಲ್ಲ. ‌ಅದೂ ಒಬ್ಬ ವಕೀಲನಾಗಿ ತಮಗೆ ಗೊತ್ತಿಲ್ಲದಿದ್ದರೆ ಸಾಮಾನ್ಯ ಜನರ ಗತಿಯೇನು ? ಹಿಂದೂ ಧರ್ಮ ವಿರೋಧಿ ಧೋರಣೆ ಜಗದೀಶ್ ಶೆಟ್ಟರ್ ಸರ್ಕಾರವೇ ಹೊರತು ಈಗಿನ ಸರ್ಕಾರವಲ್ಲ. ನಿಮಗೆ ಜ್ಞಾನದ ಕೊರತೆ ಇದ್ದರೆ ಕೋಚಿಂಗ್ ಕ್ಲಾಸ್ ತೆಗೆದುಕೊಂಡರೆ ಉತ್ತಮ.