ಮಳೆಗಾಲ ಆರಂಭಗೊಂಡು ಎರಡು ತಿಂಗಳು ಕಳೆದರೂ ಕಾಟಿಪಳ್ಳ ಭಾಗದಲ್ಲಿ ಕುಡಿಯುವ ನೀರಿಗೆ ಬರ

ಕರಾವಳಿ

ಖಾಲಿ ಕೊಡಪಾನಗಳ ಮೆರವಣಿಗೆ ಮಾಡಲು ನಾಗರಿಕ ಹೋರಾಟ ಸಮಿತಿ ನಿರ್ಧಾರ

ಮಳೆಗಾಲದಲ್ಲೂ ನಗರ ಪಾಲಿಕೆಯಿಂದ ನೀರು ಸರಬರರಾಜು ಇಲ್ಲದೆ ಮನೆಯ ಮೇಲಿನಿಂದ ಹರಿದು ಬರುವ ಮಳೆ ನೀರಿಗೆ ಟ್ಯಾಂಕ್ ಇಟ್ಟು ಕಾಯುತ್ತಿರುವ ಕಾಟಿಪಳ್ಳದ ನಾಗರಿಕರು. ನಾಲ್ಕು ದಿನಗಳಿಗೊಮ್ಮೆ ಮಾತ್ರ ತುಂಬೆಯಿಂದ ನೀರು ಸರಬರಾಜು ಮಾಡುತ್ತಿರುವ ನಗರ ಪಾಲಿಕೆ. ಬೋರ್ ವೆಲ್ ಪಂಪ್ ಹಾಳಾಗಿ ತಿಂಗಳುಗಳು ದಾಟಿದರು ರಿಪೇರಿ ಮಾಡದೆ ಕೂತಿರುವ ಪಾಲಿಕೆ ಅಧಿಕಾರಿಗಳು. ಮಳೆಗಾಲ ಆರಂಭಗೊಂಡು ಎರಡು ತಿಂಗಳಾದರೂ ಸುರತ್ಕಲ್ ಉಪವಿಭಾಗದಲ್ಲಿ ಈಗಲೂ ನೀರು ಸರಬರಾಜಿನಲ್ಲಿ ಅಧಿಕೃತವಾಗಿ ಮುಂದುವರಿದಿರುವ ಬೇಸಗೆಯ ರೇಷನಿಂಗ್ ಪದ್ದತಿ. ಮೂರು ದಿನಗಳಿಗೊಮ್ಮೆ ನೀರು ಪೂರೈಕೆ. ಡ್ಯಾಂ ತುಂಬಿ ನೆರೆ ಬಂದರೂ ಇನ್ನೂ ತೆರವುಗೊಳ್ಳದ ರೇಷನಿಂಗ್ ಪದ್ದತಿ.

ಸುರತ್ಕಲ್ ಉಪವಿಭಾಗದಲ್ಲಿ ಜನರ ನೆರವಿಗೆ ಬಾರದ ಸೋಮಾರಿ ಕಾರ್ಪೊರೇಟರ್ ಗಳು, ಜಡ್ಡುಗಟ್ಟಿರುವ, ಉಡಾಫೆ ನಡವಳಿಕೆಯ ಅಧಿಕಾರಿಗಳು. ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಖಾಲಿ ಕೊಡಪಾನಗಳೊಂದಿಗೆ ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲು ನಾಗರಿಕ ಹೋರಾಟ ಸಮಿತಿ ನಿರ್ಧಾರ.