25 ವರ್ಷಗಳಲ್ಲಿ ಏನೇನು ಅಕ್ರಮಗಳಾಗಿವೆ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸಮಗ್ರ ತನಿಖೆ ಆಗಬೇಕು: ಬಿ.ಕೆ. ಹರಿಪ್ರಸಾದ್‌

ರಾಷ್ಟ್ರೀಯ

ದ್ವೇಷ ರಾಜಕಾರಣ ಸಾಂಕ್ರಾಮಿಕ ರೋಗದಂತೆ, ಇವೆಲ್ಲಾ ಬಂದಿರುವುದು ನರೇಂದ್ರ ಮೋದಿ ಅವರಿಂದ

ಅರ್ಕಾವತಿ ಡಿನೋಟಿಫಿಕೇಶನ್‌ ಕುರಿತು ಯಾರೋ ವಿಚಾರಣೆ ಮಾಡಿದರೆ ಸಾಲದು. 25 ವರ್ಷಗಳಲ್ಲಿ ಏನೇನು ಅಕ್ರಮಗಳಾಗಿವೆ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯವರಿಂದ ಸಂಪೂರ್ಣ ತನಿಖೆ ನಡೆದರೆ ಯಾವುದೇ ಪಕ್ಷದವರಿರಲಿ, ಎಲ್ಲವೂ ಹೊರಗೆ ಬರಲಿದೆ. ಯಾರೆಲ್ಲ ಎಷ್ಟು ಶುದ್ದ ಹಸ್ತರು ಎಂಬುದು ಬಯಲಿಗೆ ಬರಲಿದೆ ಎಂದು ಹೇಳಿದರು. ಹಿಂದಿನ ಸರಕಾರದಲ್ಲಿ ಏನೇನು ನಡೆದಿದೆ ಎಂಬುದನ್ನು ಬಿಜೆಪಿಯವರು ಕೆದಕಿಕೊಂಡು ಬರುತ್ತಿದ್ದಾರೆ.

ಮೂವತ್ತು ವರ್ಷಗಳಿಂದ
ಬೊಫೋರ್ಸ್‌ ಪ್ರಕರಣ ಎಂದು ಹೇಳಿಕೊಂಡು ಬಂದರು. ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೆಲವು ಅಕ್ರಮಗಳನ್ನು ಸಕ್ರಮ ಮಾಡಿಕೊಂಡು ಬಂದಿದೆ. ಯಾವುದೇ ಸರಕಾರ ಇರಲಿ ಕೂಲಂಕಷ ತನಿಖೆಯಾಗಲು ಸುಪ್ರೀಂಕೋರ್ಟ್‌ ನ್ಯಾಯಾಧೀಶರನ್ನು ನೇಮಕ ಮಾಡಿ ತನಿಖೆ ನಡೆಸಬೇಕು ಎಂದರು. ಶಾಸಕ ಮುನಿರತ್ನ ಬಂಧನ ಪ್ರಕರಣ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ದ್ವೇಷ ರಾಜಕಾರಣವೋ, ಇನ್ನೊಂದೋ ಎಂಬುದು ಬದಿಗಿರಲಿ. ಇವೆಲ್ಲ ಸಾಂಕ್ರಾಮಿಕ ರೋಗದಂತೆ ಬಂದಿರುವುದು ನರೇಂದ್ರ ಮೋದಿ ಅವರಿಂದ. ಗುಜರಾತ್‌ನಲ್ಲಿ ಈ ಹಿಂದೆ ಇಂತಹ ಪ್ರಯೋಗ ನಡೆದಿತ್ತು ಎಂದರು.