ಮಂಗಳೂರಿನಲ್ಲೊಬ್ಬ ಸಜ್ಜನ ಮುಖವಾಡದ ಧರ್ಮ ದ್ವೇಷಿ ಶಿಕ್ಷಕ..!

ಕರಾವಳಿ

ಹಿಂದೂ ಮಕ್ಕಳನ್ನು ಹಿಂದೂ ಶಾಲೆಗೆ ಕಳುಹಿಸಿ ಎಂದು ಕರೆಕೊಟ್ಟ ಆಗ್ನೇಸ್ ಕಾಲೇಜಿನ ಶಿಕ್ಷಕ.!

ಇದೊಂದು ತರಹ ಭೂತದ ಬಾಯಲ್ಲಿ ಭಗವದ್ಗೀತೆ ಬಂದ ರೀತಿಯ ಮಾತಿದು. ಮೋಟಿವೇಷನ್ ಸ್ಪೀಚ್ ಅದೂ ಇದೂ ಎಂದು ಸಜ್ಜನ ಮುಖವಾಡದ ಈತ ಕೆಲಸ ಮಾಡುತ್ತಿರುವುದು ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ. ಆದರೆ ತನ್ನ ಸಮುದಾಯದವರಿಗೆ ಕರೆಕೊಡುತ್ತಿರುವುದು ತಮ್ಮ ಮಕ್ಕಳನ್ನು ಹಿಂದೂ ಶಾಲೆಗೆ ಕಳುಹಿಸಿ ಎಂದು. ಬುದ್ಧಿವಂತ ಜಿಲ್ಲೆಯಲ್ಲಿ ಎಂತೆಂತಹ ಕೋಮು ಮನಸ್ಥಿತಿಯ ಕರಾಳತೆ ಇದೆ ಅನ್ನುವುದಕ್ಕೆ ಈ ಧರ್ಮದ್ವೇಷಿ ಶಿಕ್ಷಕನೇ ಉದಾಹರಣೆ.

ಉಳ್ಳಾಲದ ಕಿನ್ಯ ಕೇಶವ ಶಿಶು ಮಂದಿರದಲ್ಲಿ ನಡೆದ ನವ ದಂಪತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ| ಅರುಣ್ ಉಳ್ಳಾಲರ ಉದ್ರೇಕಕಾರಿ ಭಾಷಣಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಿಕ್ಷಕನ ಕೋಮು ಪ್ರಚೋದನಕಾರಿ ಭಾಷಣಕ್ಕೆ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಶಿಕ್ಷಕ ಅರುಣ್ ಉಳ್ಳಾಲ್ ಹೇಳಿದ್ದೇನು.?

ಹಿಂದುಗಳು, ಹಿಂದೂ ಮಾಲಕತ್ವದ ಸಭಾಂಗಣಗಳಲ್ಲೇ ಮದುವೆ ಆಗಬೇಕು. ಅನ್ಯಮತೀಯರು ಕಟ್ಟಿದ ಸಭಾಂಗಣದಲ್ಲಿ ಅವರ ಸಮುದಾಯದವರು ಮದುವೆಯಾಗುವವರ ಸಂಖ್ಯೆ ಭಾರೀ ಕಡಿಮೆ. ಹಿಂದೂಗಳದ್ದೇ ಹೆಚ್ಚು ಮದುವೆಯಾಗುವುದು. ಇಲ್ಲಿಯ ದುಡ್ಡು ವಿದೇಶಕ್ಕೆ ಹೋಗುತ್ತದೆ. ಇನ್ನೂ ಮಾತು ಮುಂದುವರಿಸಿ, ಮಂಗಳೂರು ನಗರದಲ್ಲಿರುವ ಹಿಂದೂ ಶಾಲೆಗಳಲ್ಲಿ ವರ್ಷ ವರ್ಷವೂ ಹಿಂದೂ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ತಮ್ಮ ಹಿಂದೂ ಮಕ್ಕಳನ್ನು ಹಿಂದೂ ಶಾಲೆಗೆ ಕಳುಹಿಸಿ. ಮಂಗಳೂರಿನ ಪ್ರತಿಷ್ಠಿತ ಅನ್ಯಮತೀಯ ಕಾಲೇಜಿನಲ್ಲಿ ಹನ್ನೊಂದು ಕಾಮರ್ಸ್ ಬ್ಯಾಚುಗಳಿವೆ. ನಮ್ಮಲ್ಲಿ ಒಂದು ಕಾಮರ್ಸ್ ಕ್ಲಾಸಿಗೂ ಸ್ಟೂಡೆಂಟ್ ಇಲ್ಲ. ಎಲ್ಲ ಹಿಂದೂ ವಿಧ್ಯಾರ್ಥಿಗಳು ಅವರ ಮೇಲೆ ಅವಲಂಬಿತರಾಗಿದ್ದಾರೆ. ಉಳಿದ ಧರ್ಮದವರೊಂದಿಗೆ ವ್ಯವಹಾರಗಳನ್ನೆ ಮಾಡಬಾರದು ಎಂಬುದಾಗಿ ಸಜ್ಜನಿಕೆ ಮುಖವಾಡದ ಉಳ್ಳಾಲ ಭಾಗದ ಶಿಕ್ಷಕ ಕೆಲವು ಹಿಂದೂ ಗಳಿಗೆ ಪಾಠ ಮಾಡುತ್ತಾನೆ.

ಈತ ಈ ಹಿಂದೆ ತೊಕ್ಕೊಟ್ಟು ಸೈಂಟ್ ಸೆಬಾಸ್ಟಿಯನ್ ಪಿ.ಯು ಕಾಲೇಜಿನ ಶಿಕ್ಷಕನಾಗಿದ್ದ, ಈಗ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನ ಶಿಕ್ಷಕನಾಗಿದ್ದಾನೆ. ಬದುಕಲು ದ್ವಿಪಾತ್ರಾಭಿನಯ ಮಾಡುವ ಸಕಲಕಲಾವಲ್ಲಭ. ಇಂತಹ ನಂಜು ಕಾರುವ ಶಿಕ್ಷಕನಿದ್ದರೆ ಅಲ್ಲಿಯ ವಿಧ್ಯಾರ್ಥಿಗಳ ಕಥೆಯೇನು.? ಈತ ಕೊರೊನಾ ಸಂದರ್ಭದಲ್ಲಿ ಎಲ್ಲಿದ್ದ.? ತಮ್ಮವರ ಶವ ಹೂಳಲು ಮುಂದೆ ಬರದಿದ್ದಾಗ ಇಲ್ಲಿನ ಅಲ್ಪಸಂಖ್ಯಾತ ಸಮುದಾಯದವರು ಧೈರ್ಯ ತೋರಿ ಶವಸಂಸ್ಕಾರ ನಡೆಸಿದ ಅನೇಕ ಉಧಾಹರಣೆಗಳಿವೆ. ವಿದೇಶದಲ್ಲಿ ಉದ್ಯೋಗದಲ್ಲಿರುವ ಹಿಂದೂಗಳು ಊರು ಬಿಟ್ಟು ಬರಬೇಕೆ.? ಅನ್ಯಮತೀಯರ ರಕ್ತವನ್ನು ಹಿಂದೂಗಳು ಪಡೆಯಬಾರದೇ.? ಮುಸ್ಲಿಂ ರಾಷ್ಟ್ರದ ಪೆಟ್ರೋಲ್, ಡಿಸೇಲ್ ನ್ನು ಇಲ್ಲಿನ ಹಿಂದೂಗಳು ಬಹಿಷ್ಕರಿಸಬೇಕೇ..? ಅನ್ನುವ ವಿಶ್ಲೇಷಣೆಗಳು ಹರಿದಾಡುತ್ತಿದೆ.

ಧರ್ಮ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ, ಸೌಹಾರ್ದ ಸಮಾಜವನ್ನು ಕೆಡಿಸುವ ಈತನ ಮೇಲೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿ ಬರುತ್ತಿದೆ. ಧರ್ಮ ದ್ವೇಷಿ ಶಿಕ್ಷಕನನ್ನು ಇನ್ನೂ ಆಗ್ನೇಸ್ ಕಾಲೇಜ್ ಒಡಲಲ್ಲಿ ಇಟ್ಟುಕೊಳ್ಳುತ್ತಾ.? ಕಾದು ನೋಡಬೇಕಿದೆ.