ಸೆಪ್ಟೆಂಬರ್ 29 ರಂದು ಗಾಜಿಯಾಬಾದ್‌ನ ಲೋಹಿಯಾ ನಗರದ ಹಿಂದಿ ಭವನದಲ್ಲಿ ದಾಸನ್ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಅವರು ಮಾಡಿದ ಭಾಷಣದಲ್ಲಿ ಪ್ರವಾದಿ ಮುಹಮ್ಮದ್ ಸ.ಅ ಅವರನ್ನು ಅವಮಾನಿಸಿರುವುದನ್ನು ಸೌದಿಯ ಹರಮ್ ಕಚೇರಿ ಖಂಡಿಸಿದೆ.
ಪ್ರತಿ ದಸರಾದಲ್ಲಿ ನೀವು ಪ್ರತಿಕೃತಿಯನ್ನು ಸುಡಬೇಕಾದರೆ ಮುಹಮ್ಮದ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿ ಎಂದು ಈ ಅರ್ಚಕ ಕಾಮೆಂಟ್ ಮಾಡಿದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಯತಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಹರಿದ್ವಾರದಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಅತನನ್ನು ಬಂಧಿಸಲಾಗಿತ್ತು ಮತ್ತು ನಂತರ ಯೇತಿ ನರಸಿಂಹಾನಂದ ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಗುರಿಯಾಗಿಟ್ಟುಕೊಂಡು ಟೀಕೆಗಳನ್ನು ಮಾಡಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವಿರುದ್ಧವೂ ಈತ ಟೀಕೆ ಮಾಡಿದ್ದ.
