ಪತಿಯ ಜೊತೆ ಪತ್ನಿ ಸೆಕ್ಸ್ ನಿರಾಕರಿಸುವುದು ಕೂಡ ಕ್ರೂರತನವಾಗಿದ್ದು, ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಹಿಂದೂ ಮದುವೆ ನಿಯಮದ ಪ್ರಕಾರ ಮಹಿಳೆ ತನ್ನ ಪತಿ ಜೊತೆ ದೈಹಿಕ ಸಂಪರ್ಕ ನಿರಾಕರಿಸುವುದು ಮಾನಸಿಕ ಕ್ರೂರತನವಾಗಿದೆ. ಇದರಿಂದ ಪತಿ ಡಿವೋರ್ಸ್ ನೀಡಲು ಪ್ರಮುಖ ಕಾರಣವಾಗಿ ಪ್ರಸ್ತಾಪಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಧೀಶ ಶೀಲ್ ನಾಗು ಮತ್ತು ಸರಫ್ ಸೇಟ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಜನವರಿ 3-2024ರ ಸುದೀಪ್ಟೊ ಸಾಹಾ ಮತ್ತು ಮೌಮಿತಾ ಸಾಹ ಪ್ರಕರಣದಲ್ಲಿ ಈ ತೀರ್ಪು ನೀಡಿದೆ. ಮೌಮಿತಾ ಸಾಹ ವಿರುದ್ಧ ಸುದೀಪ್ಟೊ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದು, 2006, ಜುಲೈ 16ರಂದು ಮದುವೆ ಆಗಿದ್ದರು. ಅಂದಿನಿಂದ ಪತ್ನಿ ತನ್ನೊಂದಿಗೆ ದೈಹಿಕ ಸಂಪರ್ಕ ನಿರಾಕರಿಸುತ್ತಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಮದುವೆ ನಂತರ ಮೌಮಿತಾ ನನಗೆ ಬಾಯ್ ಫ್ರೆಂಡ್ ಇದ್ದಾನೆ. ಪೋಷಕರು ನನ್ನನ್ನು ಒತ್ತಾಯ ಮಾಡಿ ಮದುವೆ ಮಾಡಿದ್ದಾರೆ. ಹಾಗಾಗಿ ನಾನು ದೈಹಿಕ ಸಂಪರ್ಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಪಶ್ಚಿಮ ಬಂಗಾಳ ಮೂಲದ ಮೌಮಿತಾ, ನನ್ನನ್ನು ನನ್ನ ಬಾಯ್ ಫ್ರೆಂಡ್ ಜೊತೆ ಹೋಗಲು ಬಿಡಬೇಕು ಎಂದು ಪಟ್ಟು ಹಿಡಿದಿದ್ದಳು. ಅಲ್ಲದೇ ಒಮ್ಮೆ ಮನೆ ಬಿಟ್ಟು ಹೋಗಿದ್ದಳು.