ಅಕಸ್ಮಾತ್ ಇದು ನಿಜವಾದರೆ, ಸಿಟಿ ರವಿಯ ರಾಜಕೀಯ ಜೀವನವೇ ಅಂತ್ಯ.?
ಹೆಬ್ಬಾಳ್ಕರ್ ಅವರ ವಿರುದ್ಧ ಬಾಯಿಗೆ ಬಂದ ರೀತಿ ಮಾತನಾಡಿ, ಅಶ್ಲೀಲ ಪದ ಬಳಕೆ ಮಾಡಿರುವ ಆರೋಪ ಹೊತ್ತಿರುವ ಸಿಟಿ ರವಿಗೆ ಇದೀಗ ನಡುಕ ಶುರುವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವೇ ಇದ್ದು, ಇನ್ನೊಂದು ಕಡೆ ಈ ರೀತಿ ಮಹಿಳಾ ಸಚಿವರ ಬಗ್ಗೆ ವಿರೋಧ ಪಕ್ಷದ ನಾಯಕ ಅಸಭ್ಯವಾಗಿ ಮಾತನಾಡಿದ್ದಾರೆ ಎಂಬ ಆರೋಪ ಹೊಸ ಅಸ್ತ್ರವಾಗಿದೆ. ಈ ಕಾರಣಕ್ಕೆ ಸಿಟಿ ರವಿ ವಿರುದ್ಧ ದೊಡ್ಡ ಅಸ್ತ್ರ ಪ್ರಯೋಗ ಮಾಡಲು ಕರ್ನಾಟಕ ಸರ್ಕಾರ & ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ!
ಈ ಸಮಯದಲ್ಲಿ ಬಿಜೆಪಿ ನಾಯಕರು ಸಿಟಿ ರವಿ ಬೆಂಬಲಕ್ಕೆ ಬಂದಿದ್ದರೂ ಪ್ರಯೋಜನ ಆಗ್ತಾ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಬಿಜೆಪಿ ನಾಯಕರ ಒಳಗೇ ಈ ವಿಚಾರವಾಗಿ ಗೊಂದಲ ಇದೆ ಎಂಬ ಆರೋಪ ಕೂಡ ಕೇಳಿ ಬಂದಿದ್ದು, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಇರುವ ಸಿಟಿ ರವಿ ಅವರಿಗೆ ಹೊಸ ಆತಂಕ ಕೂಡ ಎದುರಾಗಿದೆ. ಇಷ್ಟೆಲ್ಲದರ ನಡುವೆ ಮಾಜಿ ಸಚಿವರ ರಾಜಕೀಯ ಜೀವನವೇ ಅಂತ್ಯ? ಎಂಬ ಪ್ರಶ್ನೆ ಮೂಡಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜೊತೆಗೆ ಕಾಂಗ್ರೆಸ್ ನಾಯಕರು ಸದನದಲ್ಲಿ ಇರುವ ವೇಳೆ, ಮಾಜಿ ಸಚಿವ ಸಿಟಿ ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಸಿಟಿ ರವಿ ವಿರುದ್ಧ ಇದೇ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೆಟ್ಟ ಪದ ಬಳಸಿದ್ದ ಸಿಟಿ ರವಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಸದನದಲ್ಲಿಯೇ ಕ್ಲಾಸ್ ತೆಗೆದುಕೊಂಡರು. ನಿನಗೆ ತಾಯಿ ಇಲ್ವಾ..? ಹೆಂಡತಿ ಇಲ್ವಾ..? ಎಂದು ಏಕ ವಚನದಲ್ಲಿಯೇ ಆಕ್ರೋಶ ಹೊರ ಹಾಕಿದರು. ಈ ಸಂಬಂಧ ಪೊಲೀಸರಿಗೂ ದೂರನ್ನು ನೀಡಿದರು. ಹೀಗಾಗಿ ಪೊಲೀಸರು ಸಿಟಿ ರವಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ನಾನು ಆ ಪದ ಬಳಕೆ ಮಾಡಿಲ್ಲ ಎಂದೇ ಸಿಟಿ ರವಿ ವಾದ ಮಾಡಿದರು. ಅಧಿವೇಶನದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ರಾಸ್ಟಿಟ್ಯೂಟ್ ಎಂಬ ಪದ ಬಳಕೆ ಮಾಡಿದ್ದರು. ಈ ಪದ ಬಳಕೆಯನ್ನು ಎಲ್ಲರೂ ಖಂಡಿಸಿದ್ದಾರೆ. ಸಂಚಲನ ಮೂಡಿಸಿದ್ದ ಈ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರಸಾರವಾಗಿ ತನ್ನ ತೀವ್ರತೆ ಹೆಚ್ಚಿಸಿಕೊಳ್ಳುತ್ತಿದೆ. ಮತ್ತೊಂದು ಕಡೆ ರಾಜಕೀಯ ತಿರುವುಗಳೂ ಹೆಚ್ಚಾಗ್ತಿವೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಬಿಎನ್‌ಎಸ್ ಕಾಯ್ದೆ ಅಡಿಯಲ್ಲೇ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ದಾಖಲಿಸಿ ಪೊಲೀಸರು ಸಿಟಿ ರವಿ ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಹೀಗಿದ್ದಾಗಲೇ ಪೊಲೀಸರು ಈಗ ಸಿಟಿ ರವಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತಾರಾ.? ಅನ್ನೋ ಪ್ರಶ್ನೆ ಮೂಡಿದೆ. ಅಕಸ್ಮಾತ್ ಇದು ನಿಜವಾದರೆ, ಸಿಟಿ ರವಿ ರಾಜಕೀಯ ಜೀವನವೇ ಅಂತ್ಯ.? ಎಂಬ ಪ್ರಶ್ನೆ ಕೂಡ ಮೂಡಿದೆ. ಒಟ್ನಲ್ಲಿ ಇದಕ್ಕೆಲ್ಲಾ ಉತ್ತರ ತಿಳಿಯಲು ಇನ್ನಷ್ಟು ದಿನಗಳ ಕಾಲ ಕಾದು ನೋಡಬೇಕಿದೆ.
