ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಪ್ಪೆಪದವಿನಲ್ಲಿ ಹೊಸ ಅಂಚೆ ಕಚೇರಿ ಫೆಬ್ರವರಿ 8 ರಂದು ಉದ್ಘಾಟನೆಗೊಳ್ಳಲಿದ್ದು, ಆ ಬಳಿಕ ಹೊಸ ಪಿನ್ ಕೋಡ್ ಆಗಿ 574162 ಆಗಿರುತ್ತದೆ ಎಂದು ಮಂಗಳೂರು ಅಂಚೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮೊದಲು ಕುಪ್ಪೆಪದವು, ಇರುವೈಲು, ಕೊಳವೂರು ಪ್ರದೇಶಗಳು ಗಂಜಿಮಠ ಅಂಚೆ ಕಚೇರಿಯ ಬಟವಾಡೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿಯ ಪಿನ್ ಕೋಡ್ 574144 ಆಗಿತ್ತು.
ಇರುವೈಲು ಮತ್ತು ಕೊಳವೂರು ಶಾಖಾ ಅಂಚೆ ಕಚೇರಿ ವ್ಯಾಪ್ತಿಗೆ ಒಳಪಡುವ ಎಲ್ಲ ಪ್ರದೇಶಗಳು ಮತ್ತು ಕುಪ್ಪೆಪದವು ಶಾಖಾ ಅಂಚೆ ಕಚೇರಿಗೆ ಒಳಪಡುವ ಎಲ್ಲ ಪ್ರದೇಶಗಳಿಗೆ ಇನ್ನು ಮುಂದೆ ಹೊಸ ಪಿನ್ ಕೋಡ್ 574162 ಆಗಿರುತ್ತದೆ. ಈ ಪ್ರದೇಶಗಳಿಗೆ ಬಟವಾಡೆ ಇನ್ನು ಮುಂದೆ ಕುಪ್ಪೆಪದವು ಉಪ ಅಂಚೆ ಕಚೇರಿಯಿಂದ ನಡೆಯಲಿದೆ ಎಂದು ಅಂಚೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇರುವೈಲು ಮತ್ತು ಕೊಳವೂರು ಶಾಖಾ ಅಂಚೆ ಕಚೇರಿ ವ್ಯಾಪ್ತಿಗೆ ಒಳಪಡುವವರು ಈ ಪಿನ್ ಕೋಡ್ ಬದಲಾವಣೆಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಎಲ್ಲ ಪತ್ರ ವ್ಯವಹಾರಗಳಿಗೆ ಇನ್ನು ಮುಂದೆ ಕುಪ್ಪೆಪದವು ಅಂಚೆ ಕಚೇರಿಯ ನೂತನ ಪಿನ್ ಕೋಡ್ 574162 ನ್ನು ನಮೂದಿಸಬೇಕು ಎಂದು ತಿಳಿಸಲಾಗಿದೆ.
