ಸಚಿವ ಮಾಂಕಾಳ ವೈದ್ಯ ಗುಂಡೇಟು ಹೇಳಿಕೆ: ಪಿಯುಸಿಎಲ್ ಕರ್ನಾಟಕ ಖಂಡನೆ.

ರಾಜ್ಯ

ಬೆಂಗಳೂರು: ಇತ್ತೀಚೆಗೆ ಘಟಣೆಯೊಂದಕ್ಕೆ ಸಂಬಂಧಿಸಿ ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವ ಮಾಂಕಾಳ ವೈದ್ಯ ಅವರು ಗೋಹತ್ಯೆಗಾರರನ್ನು ಗುಂಡಿಟ್ಟು ಕೊಳ್ಳಬೇಕು ಎಂಬಿತ್ಯಾದಿಯಾಗಿ ಸಂಭೋಧಿಸಿರುವ ಹೇಳಿಕೆಗೆ ಕರ್ನಾಟಕ ಪೀಪಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಘಟನೆಯು ಖಂಡನೆ ವ್ಯಕ್ತ ಪಡಿಸಿದೆ. ಮಾಂಕಾಳ ವೈದ್ಯ ಅವರು ತನ್ನ ಸಾಂವಿಧಾನಿಕ ಭದ್ಧತೆನ್ನು ಮುರಿದಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ತಾನು ಓರ್ವ ಜನಪ್ರತಿನಿಧಿ ಎಂಬುದನ್ನು ಮರೆತು ಸ್ವ ಇಚ್ಛೆ ಹೇಳಿಕೆ ನೀಡಿರುವುದು ಖಂಡನೀಯ ಎಂದು ಪಿಯುಸಿಎಲ್ ಹೇಳಿದೆ.

ಮಾಂಕಾಳ ರವರ ಹೇಳಿಕೆ ಸಂವಿಧಾನದ ಮೂಲಭೂತ ಹಕ್ಕುಗಳಾದ ಜೀವಿಸುವ ಹಕ್ಕು ಮತ್ತು ವೈಯುಕ್ತಿಕ ಘನತೆಯನ್ನು ಉಲ್ಲಂಘಿಸಿದೆ ಮಾತ್ರವಲ್ಲ ಕಾನೂನಾತ್ಮಕ ಉಲ್ಲಂಘನೆ ಕೂಡಾ ಆಗಿದೆ. ಸಚಿವ ಮಾಂಕಾಳ ಅವರ ವಿರುದ್ಧ ಸರಕಾರ ಕ್ರಮ ಸೂಕ್ತ ಕೈಗೊಳ್ಳಬೇಕು ಮತ್ತು ಪ್ರಕರಣ ದಾಖಲಿಸಬೇಕಿದೆ. ಸಚಿವ ಮಾಂಕಾಳ ಅವರ ವಿರುದ್ಧ ಅಪರಾಧಕ್ಕೆ ಪ್ರೇರಣೆ, ವಿಭಿನ್ನ ಸಮುದಾಯಗಳ ವಿರುದ್ಧದ ಹೇಳಿಕೆ, ಮತೀಯ ವೈಷಮ್ಯ ಸೃಷ್ಟಿ, ಗಲಭೆಗೆ ಕುಮ್ಮಕ್ಕು ಇತ್ಯಾದಿ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಪೀಪಲ್ಸ್ ಯೂನಿಯನ್ ಪಾರ್ ಸಿವಿಲ್ ಲಿಬರೇಟ್ಸ್ (ಪಿಯುಸಿಎಲ್) ಸರಕಾರವನ್ನು ಒತ್ತಾಯಿಸಿದೆ.