ಅಮೆರಿಕದಂತೆ ಭಾರತದಲ್ಲೂ ಜಾರಿಯಾಗಲಿದೆ ಅಕ್ರಮ ವಿದೇಶಿ ವಲಸಿಗರ ಮಸೂದೆ; ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಗೃಹ ಸಚಿವ ಅಮಿತ್ ಷಾ ಸಿದ್ಧತೆ.!

ರಾಷ್ಟ್ರೀಯ

ಅಮೆರಿಕದಲ್ಲಿ ಕಠಿಣ ವಲಸೆ ನಿಯಮ ಜಾರಿಗೆ ತಂದ ಬೆನ್ನಲ್ಲೇ ಭಾರತ ಕೂಡ ಕಠಿಣ ವಲಸೆ ನಿಯಮ ಜಾರಿಗೆ ತರಲು ಮುಂದಾಗಿದೆ. ಮಾರ್ಚ್ ನಲ್ಲಿ ನಡೆಯುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಲಸೆ ಮತ್ತು ಅಕ್ರಮ ವಿದೇಶಿ ವಲಸಿಗರ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ.

ಭಾರತದ ಪಾಸ್‌ಪೋರ್ಟ್ ಕಾಯ್ದೆ 1920, ವಿದೇಶಿಯರ ನೋಂದಣಿ ಕಾಯ್ದೆ 1939, ವಿದೇಶಿಯರ ಕಾಯ್ದೆ 1946 ಮತ್ತು ವಲಸೆ ಕಾಯ್ದೆ 2000, ಇವು ಪ್ರಸ್ತುತ ಭಾರತದಲ್ಲಿ ವಿದೇಶಿಯರಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ನಿಯಂತ್ರಿಸುತ್ತವೆ. ಪ್ರಸ್ತಾವಿತ ಕಾಯ್ದೆಯು ಅಸ್ತಿತ್ವದಲ್ಲಿರುವ 4 ಕಾನೂನುಗಳನ್ನು ರದ್ದುಗೊಳಿಸಿ, ನೂತನ ಕಾನೂನು ಜಾರಿಗೆ ತರುವ ಸಾಧ್ಯತೆಯಿದೆ.

ಮಸೂದೆಯು 35 ಷರತ್ತುಗಳು ಮತ್ತು ಹಲವಾರು ಕಾನೂನುಗಳನ್ನು ಒಳಗೊಂಡಿರುವ 6 ಅಧ್ಯಾಯಗಳನ್ನು ಹೊಂದಿದೆ. ಇದು ವಲಸೆ ಅಧಿಕಾರಿಯ ಕಾರ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಪಾಸ್‌ಪೋರ್ಟ್ ಮತ್ತು ವೀಸಾದ ಅವಶ್ಯಕತೆ, ವಿದೇಶಿಯರಿಗೆ ಮತ್ತು ಅವರ ನೋಂದಣಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ.