ಮಂಗಳೂರು- ಬಜ್ಪೆ KSRTC ಬಸ್ ಆರಂಭಿಸಬೇಕು, ಬಜ್ಪೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಒತ್ತಾಯಿಸಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ

ಕರಾವಳಿ

ಮಂಗಳೂರಿನಿಂದ ಬಜ್ಪೆಗೆ ಬರುತ್ತಿದ್ದ KSRTC ಬಸ್ ಗಳನ್ನು ಪುನರಾರಂಭಿಸಿ,ಕಟೀಲ್ ವರೆಗೆ ವಿಸ್ತರಿಸಬೇಕೆಂಬ ಬೇಡಿಕೆಯೊಂದಿಗೆ, ಬಜ್ಪೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾರವರಿಗೆ ಮನವಿ ಸಲ್ಲಿಸಲಾ
ಯಿತು.

KSRTC DC ರಾಜೇಶ್ ಶೆಟ್ಟಿ ರವರನ್ನು ವಿಧಾನ ಪರಿಷತ್ ಸದಸ್ಯರು ತಮ್ಮ ಕಛೇರಿಗೆ ಕರೆಸಿಕೊಂಡು ಬಜ್ಪೆ ನಾಗರಿಕರ ಬೇಡಿಕೆ ಬಗ್ಗೆ ಚರ್ಚಿಸಿದರು. ಇದಕ್ಕೆ ಸ್ಪಂಧಿಸಿದ ರಾಜೇಶ್ ಶೆಟ್ಟಿರವರು ಕೂಡಲೇ ಬಸ್ ಸಂಚಾರವನ್ನು ಪುನರಾರಂಭಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ, ಸಹ ಸಂಚಾಲಕರಾದ ಇಸ್ಮಾಯಿಲ್ ಎಂಜಿನಿಯರ್, ರಾಜ್ಯ ದಲಿತ ಸಮಿತಿಯ ಸಂಚಾಲಕರಾದ ಎಂ ದೇವದಾಸ್, ಗ್ಯಾರಂಟಿ ಅನುಷ್ಠಾನದ ನಾಯಕರಾದ ಅಲೆಸ್ಟರ್ ಡಿಕುನ್ಹಾ, ಜಿಲ್ಲಾ INTUC ಪ್ರಧಾನ ಕಾರ್ಯದರ್ಶಿ ನಿಸಾರ್ ಕರಾವಳಿ, ಕಾಂಗ್ರೆಸ್ ಮುಖಂಡರಾದ ವಿಕಾಸ್ ಶೆಟ್ಟಿ, ಕಾರ್ಪೊರೇಟರ್ ಸತೀಶ್ ಪೆಂಗಲ್, ಹಿರಿಯರಾದ ಮೊನಕ, ಅನ್ವರ್ ರಝಕ್ ಬಜ್ಪೆ, ಬಿ.ಹೆಚ್.ಅಬ್ದುಲ್ ಖಾದರ್, ಕುಡುಬಿ ಸಮಾಜದ ನಾಯಕರಾದ ಶೇಖರ್ ಗೌಡ, ಅದ್ದು ಬಜ್ಪೆ, ಮಹಿಳಾ ನಾಯಕಿ ವಿಜಯ ಸುವರ್ಣ, ಕಂದಾವರ ಗ್ರಾ ಪಂ ಸದಸ್ಯರಾದ ಶಾಂತ, ಅನಿವಾಸಿ ಉದ್ಯಮಿ ಅಬ್ಬಾಸ್, ಆಫ್ನನ್, ಶಾಯಿದ್ ಮುಂತಾದವರು ಉಪಸ್ಥಿತರಿದ್ದರು.