ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಮತ್ತು ಅದನ್ನು ತಡೆಯುವಲ್ಲಿ ಆಡಳಿತ ಹಾಗೂ ರಾಜ್ಯ ಗೃಹ ಇಲಾಖೆಯ ವೈಫಲ್ಯ ಮತ್ತು ಜಿಲ್ಲೆಯ ಮುಸ್ಲಿಮರ ಕಡೆಗಣನೆ ಹಾಗೂ ಅಮಾಯಕ ಯುವಕ ಅಬ್ದುಲ್ ರಹಿಮಾನ್ ಕೊಳ್ತಮಜಲು ಹತ್ಯೆ ಆರೋಪಿಗಳಿಗೆ ಕಠಿಣ ಕ್ರಮ ಮತ್ತು ಬಲಿಯಾದ ಸಹೋದರನ ಕುಟುಂಬಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸಿಕೊಡಬೇಕಾಗಿ ಅಗ್ರಹಿಸಿ ಕಾಂಗ್ರೆಸ್ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರವಿದ್ದು, NSUI ಜಿಲ್ಲಾ ಕಾರ್ಯದರ್ಶಿ ಮತ್ತು ಕಡಬ NSUI ಉಸ್ತುವಾರಿ ಸ್ಥಾನಕ್ಕೆ ರಾಜಿನಾಮೆಯನ್ನು ನೀಡಿದ್ದೇನೆ ಎಂದು ತೌಫೀಕ್ ನೆಲ್ಯಾಡಿ ಪ್ರಕರಣೆಯಲ್ಲಿ ತಿಳಿಸಿರುತ್ತಾರೆ. ನಾಳೆ ಮಂಗಳೂರಿನಲ್ಲಿ ನಡೆಯಲಿರುವ ಸಾಮೂಹಿಕ ರಾಜಿನಾಮೆ ಸಭೆಯಲ್ಲಿ ಸಂಬಂಧ ಪಟ್ಟವರಿಗೆ ರಾಜಿನಾಮೆ ಪತ್ರ ನೀಡಲು ನಿರ್ದರಿಸಿದ್ದಾರೆ.

ಕೋಮುದ್ವೇಶಿಗಳ ಅಟ್ಟಹಾಸಕ್ಕೆ ಬಲಿಯಾದ ಕೊಲ್ತಮಜಲಿನ ಅಮಾಯಕನ ಯುವಕನಿಗೆ ನ್ಯಾಯ ಸಿಗಬೇಕೆಂದು ಹೋರಾಡುತ್ತಾ ಜಿಲ್ಲಾ NSUI ಕಾರ್ಯದರ್ಶಿ ಮತ್ತು ಕಡಬ NSUI ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ನಾನು ನನ್ನ ಪ್ರಯಾಣವನ್ನು ಮುಂದುವರಿಸುತ್ತೇನೆ.
ಅಮಾಯಕ ಯುವಕನ ಸಾವಿಗೆ ನ್ಯಾಯ ಸಿಗುವವರೆಗೆ, ನಾನು ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಸಭೆ, ಸಮಾರಂಭ, ಪಕ್ಷದ ಚಟುವಟಿಕೆಯಂತ ಯಾವುದೇ ಕಾರ್ಯಕ್ರಮದಲ್ಲಾಗಲೀ, ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಶಪತ ಮಾಡಿರುತ್ತಾರೆ.
